ಹೇರ್ ಗೆ ಡೈ ಹಾಕದೆಯೇ ಬಿಳಿಗೂದಲಲ್ಲಿ ಹಸೆಮಣೆಯೇರಿದ ಖ್ಯಾತ ನಟನ ಪುತ್ರಿ !! | ಐಷಾರಾಮಿ ಜೀವನವಿದ್ದರೂ ನೈಜತೆಗೆ ಒತ್ತುಕೊಟ್ಟ ಈಕೆಯ ಮದುವೆಯ ಫೋಟೋ ವೈರಲ್

Share the Article

ಮದುವೆ ಕುರಿತಾಗಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕನಸು ಇರುತ್ತದೆ. ಮದುಮಗಳಿಗೆಂತೂ ಆ ಆಸೆ ದುಪ್ಪಟ್ಟಾಗಿರುತ್ತದೆ. ಸೀರೆ ಡಿಸೈನ್‍ಗೆ ಪ್ರತ್ಯೇಕ ಬೊಟಿಕ್, ಮೇಕಪ್‍ಗೆ ಹೆಸರಾಂತ ಬ್ಯೂಟಿಷಿಯನ್, ಮೇಕಪ್ ಆರ್ಟಿ‌ಸ್ಟ್‌ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುತ್ತಾರೆ. ಇವತ್ತಿನ ದಿನಗಳ ಮದುವೆಗಳನ್ನು ನೋಡಿದರೆ ಅದ್ಧೂರಿ ಮಂಟಪ, ಮದುಮಗಳ ಝಗಮಗಿಸುವ ಲೆಹೆಂಗಾ, ಸೀರೆ, ಹೆವಿ ಮೇಕಪ್, ಆಭರಣ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಆದರೆ ಈ ಮದುವೆಯಲ್ಲಿ ಹೇರ್ ಡೈ ಮಾಡದೆಯೇ ಬಿಳಿ ಕೂದಲಿನಲ್ಲಿಯೇ ವಧು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಚಿತ್ರ ಘಟನೆ ನಡೆದಿದೆ.

ಹಿಂದಿ ಧಾರಾವಾಹಿ ತಾರಕ್ ಮೆಹ್ತಾ ನಟ ದಿಲೀಪ್ ಜೋಶಿಯವರ ಮಗಳು ನಿಯತಿ, ಮದುವೆ ಮಂಟಪದಲ್ಲಿ ಸಹಜವಾಗಿ ತಲೆಯಲ್ಲಿರುವ ಬಿಳಿ ಕೂದಲಿನೊಂದಿಗೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಿಂದಿ ಕಿರುತೆರೆ ನಟ ದಿಲೀಪ್ ಜೋಶಿಯವರು ಸುಂದರವಾಗಿ ರೆಡಿಯಾದ ತಮ್ಮ ಮಗಳು ನಿಯತಿ ಜೊತೆ ಮದುವೆ ಮನೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಧುವಿನ ಈ ಕಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಿಯತಿ, ಯಶೋವರ್ಧನ್ ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ. ನಾಸಿಕ್‍ನಲ್ಲಿ ಗುಜರಾತಿ ಸಂಪ್ರದಾಯದಂತೆ ಮದುವೆ ನಡೆಯಿತು. ಈ ಮದುವೆಯಲ್ಲಿ ಅದ್ಧೂರಿ ಮದುವೆ ಮಂಟಪ, ಆಸನದ ವ್ಯವಸ್ಥೆ, ಊಟೋಪಚಾರಕ್ಕಿಂತ ಮದುವೆಗೆ ಬಂದ ಜನರ ಗಮನ ಸೆಳೆದಿದ್ದು, ಮದುಮಗಳು ರೆಡಿಯಾದ ರೀತಿ. ಮದುವೆಗಾಗಿ ಹೇರ್ ಕಲರಿಂಗ್ ಮಾಡಿ ಸಿದ್ಧಗೊಂಡರೆ, ಮದುಮಗಳು ಬಿಳಿ ಕೂದಲಿನಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ನಿಮ್ಮ ಸೌಂದರ್ಯದ ಬಗ್ಗೆ ನಿಮಗಿರುವ ಆತ್ಮವಿಶ್ವಾಸ, ಬಿಳಿ ಕೂದಲಿನಲ್ಲೇ ನೀವು ಮದುಮಗಳಾಗಿ ಸಿದ್ಧಗೊಂಡಿರುವ ರೀತಿ ಮೆಚ್ಚುವಂತದ್ದು ಎಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.

ಅದೆಷ್ಟೋ ಆಡಂಬರ, ಅದ್ಧೂರಿ ಮದುವೆಯ ನಡುವೆ ನಿಯತಿ ಎಲ್ಲರೂ ಹುಬ್ಬೇರುವಂತೆ ಹಸೆಮಣೆಯೇರಿದ್ದಾಳೆ. ಈಕೆಯ ಈ ಸರಳತೆಗೆ ತುಂಬಾ ಜನ ಮನಸೋತಿದ್ದಂತೂ ಸತ್ಯ.

Leave A Reply