ಎ.5 ಮಂಜುನಾಥನಗರದಲ್ಲಿ ಜಿಲ್ಲಾಮಟ್ಟದ ಭಜನಾ ಸ್ಪರ್ಧೆ -ಭಜನಾಮೃತ 2020 | ನೊಂದಣಿಗೆ ಮಾ.25 ಕೊನೆ ದಿನ
ಸವಣೂರು : ಶ್ರೀಸಿದ್ದಿ ವಿನಾಯಕ ಸೇವಾ ಸಂಘ ಮಂಜುನಾಥನಗರ, ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಇದರ ಸಹಯೋಗದಲ್ಲಿ ವಿವೇಕಾನಂದ ಯುವಕ ಮಂಡಲ ಮಂಜುನಾಥನಗರ ಇದರ ಆಶ್ರಯದಲ್ಲಿ ಜಿಲ್ಲಾಮಟ್ಟದ ಭಜನಾ ಸ್ಪರ್ಧೆ -ಭಜನಾಮೃತ 2020 ಪಾಲ್ತಾಡಿ ಗ್ರಾಮದ ಮಂಜುನಾಥನಗರದ ವಿನಾಯಕ ಮೈದಾನದಲ್ಲಿ ಎ.5ರಂದು ನಡೆಯಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ತಂಡಗಳಿಗೆ ಮಾ.25 ನೊಂದಣಿಗೆ ಕೊನೆ ದಿನ.
ಬಹುಮಾನಗಳ ವಿವರ
ಭಜನಾ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರೂ.5000 ಹಾಗೂ ಶಾಶ್ವತ ಫಲಕ,ದ್ವಿತೀಯ ರೂ.3000 ಹಾಗೂ ಶಾಶ್ವತ ಫಲಕ,ತೃತೀಯ ರೂ.2000ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.
ನಿಯಮಗಳು
ಭಜನಾ ಸ್ಪರ್ದೆಯಲ್ಲಿ ದಾಸ ಸಾಹಿತ್ಯಕ್ಕೆ ಮೊದಲ ಮನ್ನಣೆ,ಒಂದು ಭಜನಾ ತಂಡಕ್ಕೆ 15 ನಿಮಿಷ ಅವಕಾಶ,ಒಂದು ತಂಡದಲ್ಲಿ 7 ಮಂದಿ ಹಾಗೂ 2 ಹಿಮ್ಮೇಳದವರಿಗೆ ಅವಕಾಶ,ಪ್ರಥಮವಾಗಿ ನೊಂದಾಯಿಸಿದ 15 ತಂಡಗಳಿಗೆ ಮಾತ್ರ ಅವಕಾಶ ಕಲ್ಪಸಲಾಗಿದೆ.
ನೊಂದಣಿಗೆ ಮಾ.25 ಕೊನೆ ದಿನ
ಭಜನಾ ಸ್ಪರ್ಧೆಗೆ ಹೆಸರನ್ನು ನೊಂದಾಯಿಸಲು ಮಾ.25 ಕೊನೆಯ ದಿನವಾಗಿದ್ದು, 9480164594,9902459543,9880903258,9449095564 ಸಂಪರ್ಕಿಸಲು ಕೋರಲಾಗಿದೆ.