ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಟೆಂಪೋ ಪಲ್ಟಿ

Share the Article

ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಟೆಂಪೊ ವಾಹನವೊಂದು ಚರಂಡಿಗೆ ಉರುಳಿಬಿದ್ದ ಘಟನೆ ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಡೆದಿದೆ.

ಟೆಂಪೋದಲ್ಲಿ ತುಂಬಿದ್ದ ಮೀನುಗಳನ್ನು ಖಾಲಿ ಮಾಡಿ ವಾಪಾಸಾಗುತ್ತಿದ್ದ ವೇಳೆ ವಾಹನವು ಚರಂಡಿಗೆ ಉರುಳಿ ಬಿದ್ದಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೂಡಲೇ ಸ್ಥಳೀಯರ ಸಹಕಾರದಿಂದ ಗಾಡಿಯನ್ನು ಚರಂಡಿಯಿಂದ ಮೇಲಕ್ಕೆತ್ತಲಾಯಿತು.

Leave A Reply