ಬೆಳ್ತಂಗಡಿ :ಲಾಯಿಲದ ತರಕಾರಿ ವ್ಯಾಪಾರಿ ನಾಪತ್ತೆ

Share the Article

ಬೆಳ್ತಂಗಡಿ : ಲಾಯಿಲ ಗ್ರಾಮದ ರಾಘವೇಂದ್ರ ನಗರದ ಬಳಿ ವಾಸ್ತವ್ಯವಿದ್ದ ತರಕಾರಿ ವ್ಯಾಪಾರಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ತರಕಾರಿ ವ್ಯಾಪಾರ ನಡೆಸುತ್ತಿದ್ದ ಮಲ್ಲಿಕಾರ್ಜುನ ಗೌಡ(48.ವ) ಎಂಬವರು ಡಿ. 4 ರಂದು ರಾತ್ರಿ ಮನೆಯಿಂದ ಹೊರಟು ಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ,
ಆತನ ಪತ್ನಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹೊರಜಿಲ್ಲೆಯಿಂದ ತರಕಾರಿ ತಂದು ಮಾರಾಟ ಮಾಡುತ್ತಿದ್ದ ಮಲ್ಲಿಕಾರ್ಜುನ ರವರು ತಮ್ಮ ಪತ್ನಿ ಗೀತಾರೊಂದಿಗೆ ಲಾಯಿಲ ಗ್ರಾಮದ ರಾಘವೇಂದ್ರ ನಗರದ ಬಳಿ ವಾಸವಾಗಿದ್ದರು. ಡಿ.4 ರಂದು
ರಾತ್ರಿ ಮನೆಯಲ್ಲಿದ್ದ ವೇಳೆ ಮಲ್ಲಿಕಾರ್ಜುನ್ ನರವರ ಸ್ನೇಹಿತ ಪ್ರವೀಣ್ ಎಂಬವರು ಅವರಿಗೆ ಫೋನ್ ಕರೆ ಮಾಡಿದ್ದು, ತಾನು ಧರ್ಮಸ್ಥಳದಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದು, ಲಾಯಿಲದಲ್ಲಿ ಸಿಗುವಂತೆ ತಿಳಿಸಿದ್ದರು.

ಕೂಡಲೇ ತಮ್ಮ ಸ್ಕೂಟರ್ ನಲ್ಲಿ ಮನೆಯಿಂದ ತೆರಳಿದ್ದ ಪತಿ ಬಳಿಕ ಫೋನ್ ಸಂಪರ್ಕಕ್ಕೂ ಸಿಗದೆ,ಮರಳಿ ಮನೆಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿರುತ್ತಾರೆ ಎಂಬುವುದಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ವ್ಯಕ್ತಿ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.

Leave A Reply