Home latest ಫಸ್ಟ್ ನೈಟ್ ನಲ್ಲೇ ಯಡವಟ್ಟು ಮಾಡ್ಕೊಂಡು ಬಿಟ್ಟಿದ್ದ ಗಂಡ | ವಿಚಿತ್ರ ಕಾಮ-ಕೇಳಿ ಮಾಡುವಂತೆ ಒತ್ತಾಯ,...

ಫಸ್ಟ್ ನೈಟ್ ನಲ್ಲೇ ಯಡವಟ್ಟು ಮಾಡ್ಕೊಂಡು ಬಿಟ್ಟಿದ್ದ ಗಂಡ | ವಿಚಿತ್ರ ಕಾಮ-ಕೇಳಿ ಮಾಡುವಂತೆ ಒತ್ತಾಯ, ಕೇಸು ದಾಖಲು !

Hindu neighbor gifts plot of land

Hindu neighbour gifts land to Muslim journalist

ಲೈಂಗಿಕ ಕ್ರಿಯೆಯ ವೇಳೆ ಪತಿ ತೀರಾ ವಿಚಿತ್ರವಾಗಿ, ಅಸಹ್ಯವಾಗಿ ಮತ್ತು ಕ್ರೂರವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ತಾನೇ ಮದುವೆಯಾದ 21 ವರ್ಷದ ಮಹಿಳೆ ಕಾಡುಗೊಂಡನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಆಕೆಯ ಪತಿ ದೇವರಾಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂರು ತಿಂಗಳ ಹಿಂದೆ ದಂಪತಿಗೆ ಮದುವೆಯಾಗಿದ್ದು, ಫಸ್ಟ್ ನೈಟ್ನಲ್ಲೆ ಆತ ಯಡವಟ್ಟು ಮಾಡಿಕೊಂಡಿದ್ದ. ನಿಂದಲೂ ದೇವರಾಜು ಅಸಹ್ಯ ಲೈಂಗಿಕ ಕ್ರಿಯೆ ನಡೆಸುವ ಇರಾದೆ ತೋರುತ್ತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.

ಹಲವು ರೀತಿಯ ವಿಚಿತ್ರ ವರ್ತನೆಯಿಂದ ಪತ್ನಿಗೆ ಅಸಹ್ಯ ಆಗುತ್ತಿತ್ತು. ಕಿರಿಕಿರಿ ಕೂಡಾ ಉಂಟಾಗಿತ್ತು. ಆಕೆ ಅದನ್ನು ವಿರೋಧಿಸಿದ್ದಳು. ಹಾಗೆ ವಿಚಿತ್ರ ಸೆಕ್ಸ್ ಬೇಡ, ಮಾಮೂಲಾಗಿ ಮಾಡ್ಬೋದಲ್ಲ ಅಂತ ಅಂದರೂ ಆತ ಕೇಳುತ್ತಿರಲಿಲ್ಲ. ಎಷ್ಟೇ ಕಿರಿಕಿರಿಯಾಗುತ್ತಿರುವುದಾಗಿ ಮಹಿಳೆ ಹೇಳಿದರೂ ಆತ
ಬಿಡುತ್ತಿರಲಿಲ್ಲ.
ಅಲ್ಲದೆ ಹುಷಾರಿಲ್ಲದ ಸಂದರ್ಭದಲ್ಲಿಯೂ ಲೈಂಗಿಕಕ್ರಿಯೆಗೆ ಬಲವಂತ ಮಾಡುತ್ತಿದ್ದ. ಆಕೆ ಒಪ್ಪದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸುತ್ತಿದ್ದ ಎನ್ನಲಾಗಿದೆ.

ಸೆಕ್ಸ್ ವೇಳೆ ವಿಚಿತ್ರವಾಗಿ ವರ್ತಿಸುತ್ತಿದ್ದ ಆತನ ಬಗ್ಗೆ ಗಂಡನ ಮನೆಯವರು ಮತ್ತು ತವರು ಮನೆಯವರ ಗಮನಕ್ಕೆ ತಂದಿದ್ದಳು ಹುಡುಗಿ. ಆಗ ಎಲ್ಲರೂ ಕರೆದು ಬುದ್ಧಿವಾದ ಹೇಳಿದ್ದರು. ಇನ್ನು ಮುಂದೆ ಆ ರೀತಿ ಮಾಡುವುದಿಲ್ಲ ಎಂದಿದ್ದ ದೇವರಾಜ. ಈಗ ಆರೋಪಿ ಮತ್ತೆ ವಿಕೃತ ಕಾಮ ಕೇಳಿಗೆ ಶುರು ಮಾಡಿದ್ದಾನೆ. ತಡೆಯಲಾಗದ ಪತ್ನಿ ಲೈಂಗಿಕ ತೊಂದರೆ ಕೊಡುತ್ತಿರುವುದಾಗಿ ದೂರು ನೀಡಿದ್ದಾರೆನ್ನಲಾಗಿದೆ.