ಮಾರುಕಟ್ಟೆಗೆ ಬರಲಿದೆ ‘ ಡೆತ್ ಮೆಷಿನ್ ‘ | ಬಟನ್ ಒತ್ತಿ ಒಂದು ನಿಮಿಷದೊಳಗೆ ಮಟಾಶ್ ಆಗಿ ಮಹಾದೇವನ ಪಾದಕ್ಕೆ !!

ಇಂದಿನ ಯಾಂತ್ರಿಕ ಯುಗದಲ್ಲಿ ಬಟ್ಟೆ ಒಗೆಯುವುದರಿಂದ ಹಿಡಿದು, ಪಾತ್ರೆ ಪಗಡೆ ತೊಳೆಯುವುದರವರೆಗೆ ಯಂತ್ರ ಕೈಯಾಡಿಸದ ಜಾಗವಿಲ್ಲ. ಮನುಷ್ಯನ ಜಾಗದಲ್ಲಿ ಯಂತ್ರಗಳು ಬಂದು ಕೂತು ಮನುಷ್ಯನಿಂದ ಆಗದ ಮತ್ತು ಮಾಡಲು ಕಷ್ಟವಿರುವ, ಅಲ್ಲದೆ ಮನುಷ್ಯನಿಗೆ ಮಾಡಲು ಇಷ್ಟವಿಲ್ಲದ ಕೆಲಸವನ್ನೆಲ್ಲಾ ಯಂತ್ರಗಳು ಮಾಡಿ ಬಿಸಾಕುತ್ತಿವೆ. ಆ ಮೂಲಕ ಮನುಷ್ಯನಿಗೆ ಆರಾಮ ನೀಡುವ ಜೊತೆಗೆ ಆತನ ಆರೋಗ್ಯವನ್ನು ಕೂಡಾ ಕೆಡಿಸಿವೆ. ಹಾಗೆಯೇ ಇದೀಗ ಹೊಸದೊಂದು ಯಂತ್ರ ಬಂದಿದೆ. ಅದೇ ಸಾಯುವ ಯಂತ್ರ ! ದಿ ಡೆತ್ ಮಷೀನ್ !!

ಹೌದು, ಇಂತಹದ್ದೊಂದು ಯಂತ್ರಕ್ಕೆ ಸರ್ಕಾರದ ಅನುಮತಿ ಕೂಡಾ ಸಿಕ್ಕಿದೆ. ಸಾವಿನ ಯಂತ್ರಕ್ಕೆ ಅನುಮತಿ ನೀಡಿದ್ದು ಸ್ವಿಸ್ ಸರ್ಕಾರ. ಯಾವುದೇ ರೀತಿಯ ನೋವಿಲ್ಲದೆ, ಯಾತನೆಯಿಲ್ಲದೆ, ನೆಮ್ಮದಿಯಾಗಿ ಕೇವಲ ಒಂದೇ ನಿಮಿಷದಲ್ಲಿ ಸಾವು ಬಂದು ಬಿಡುತ್ತದೆಯಂತೆ ಈ ಯಂತ್ರದ ಮೂಲಕ. ಒಂದು ಸಣ್ಣ ಬಟನ್ ಒತ್ತಿ ಒಂದು ನಿಮಿಷದೊಳಗೆ ಮಟಾಶ್ ಆಗಿ ಮಹಾದೇವನ ಪಾದಕ್ಕೆ !! ನೋವಿಲ್ಲ, ನರಳಾಟವಿಲ್ಲ ಆರ್ತನಾದವಿಲ್ಲ..ನೆಮ್ಮದಿಯ ಸಾವು ಮನೆಬಾಗಿಲ ಒಳಗೇ ಲಭ್ಯ !!!

ಸ್ವಿಟ್ಜರ್ಲೆಂಡ್ ಸರ್ಕಾರವು ‘ಸಾರ್ಕೊ’ ಎಂಬ ‘ಆತ್ಮಹತ್ಯೆ ಯಂತ್ರ’ವನ್ನು ಕಾನೂನುಬದ್ಧಗೊಳಿಸಿದೆ. ಈ ಯಂತ್ರವನ್ನು ಬಳಸಿ ನಿಮಿಷದಲ್ಲಿ ನೋವಿಲ್ಲದೆ ವ್ಯಕ್ತಿಯನ್ನು ಕೊಲ್ಲಬಹುದು. ವರದಿಯ ಪ್ರಕಾರ, ಈ ಯಂತ್ರವನ್ನು ಬಳಸುವ ವ್ಯಕ್ತಿಯು ಹೈಪೋಕ್ಸಿಯಾ ಮತ್ತು ಹೈಪೋಕ್ಯಾಸ್ನಿಯಾದಿಂದ ಬಳಲುತ್ತಾರೆ. ಅಂದರೆ, ದೇಹದೊಳಗಿನ ಆಮ್ಲಜನಕದ ಮಟ್ಟವು ಗಮನಾರ್ಹವಾಗಿ ಕುಸಿದು ಅವನು ಸಾಯುತ್ತಾನೆ. ಈ ಪ್ರಕ್ರಿಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾವುದೇ ನೋವು ಅನುಭವಿಸುವುದಿಲ್ಲ.

ಈ ಆತ್ಮಹತ್ಯಾ ಯಂತ್ರವನ್ನು ಶವಪೆಟ್ಟಿಗೆಯಂತೆ ವಿನ್ಯಾಸಗೊಳಿಸಲಾಗಿದೆ. ಈ ಯಂತ್ರದ ಒಳಗೆ ಕುಳಿತು ಸಹ ಕಾರ್ಯ ನಿರ್ವಹಿಸಬಹುದಾಗಿದೆ. ವರದಿಯ ಪ್ರಕಾರ, ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಮತ್ತು ಮಾತನಾಡಲು ಅಥವಾ ಕೇಳಲು ಅಥವಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಸಾಧ್ಯವಾಗದ ರೋಗಿಗಳು ಮಾತ್ರ ಈ ಯಂತ್ರವನ್ನು ಬಳಸಬಹುದಾಗಿದೆ. ದಯಾಮರಣವನ್ನು ಬಯಸುವವರಿಗೆ ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಈ ಗಾಜಿನ ಶವಪೆಟ್ಟಿಗೆಯಲ್ಲಿ ಕುಳಿತ ನಂತರ, ಈ ಯಂತ್ರವು ಮಾನವ ದೇಹದಲ್ಲಿ ಇರುವ ಆಮ್ಲಜನಕದ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಇದು ಅವರ ಸಾವಿಗೆ ಕಾರಣವಾಗುತ್ತದೆ.

ಸ್ವಿಟ್ಟರ್ಲೆಂಡ್ ಮೂಲದ ಎನ್‌ಜಿಒ ಎಕ್ಸಿಟ್ ಇಂಟರ್‌ನ್ಯಾಷನಲ್‌ನ ನಿರ್ದೇಶಕ ಮತ್ತು ಡಾಕ್ಟರ್ ಡೆತ್ ಎಂದು ಕರೆಯಲ್ಪಡುವ ಪ್ರಸಿದ್ಧ ವೈದ್ಯ ಡಾ. ಫಿಲಿಪ್ ನಿಟ್ಟೆ ಅವರು ಈ ಯಂತ್ರವನ್ನು ರಚಿಸಿದ್ದಾರೆ. ಈ ಸಂಪೂರ್ಣ ಪ್ರಕ್ರಿಯೆಯು ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಈ ಶವಪೆಟ್ಟಿಗೆ ವ್ಯಕ್ತಿಯು ‘ಶಾಂತವಾಗಿ ಮತ್ತು ನೋವುರಹಿತವಾಗಿ ಸಾಯಲು ಅನುವು ಮಾಡಿಕೊಡುತ್ತದೆ. ಇದು ದಯಾಮರಣ ಯಂತ್ರಗಳಲ್ಲಿನ ಪ್ರಗತಿಗೆ ಇತ್ತೀಚಿನ ಉದಾಹರಣೆಯಾಗಿದೆ ಮತ್ತು ದಯಾಮರಣ ಕಾನೂನುಬದ್ಧವಾಗಿರುವ ದೇಶಗಳಲ್ಲಿ ಈ ಯಂತ್ರಗಳನ್ನು ಸಾಕಷ್ಟು ಮಾರಾಟ ಮಾಡುವ ಸಾಧ್ಯತೆ ಇದೆ.

ದಯಾಮರಣ ಬಯಸುತ್ತಿರುವವರಿಗೆ ಈ ಸಾಧನ ಸಮಾಧಿ ಇದ್ದಂತೆ. ಈ ಸಾಧನದಲ್ಲಿ ಸಾರಜನಕದ ಹರಿವು ಇದೆ, ಇದು ಮನುಷ್ಯರ ದೇಹದಲ್ಲಿ ಇರುವ ಆಮ್ಲಜನಕವನ್ನು ಅತ್ಯಂತ ವೇಗವಾಗಿ ಕಡಿಮೆ ಮಾಡಲು ಪ್ರಾರಂಭಿಸುತ್ತದೆ. ನಂತರ ವ್ಯಕ್ತಿಯು ಸಾಯುತ್ತಾನೆ. ವ್ಯಕ್ತಿಯ ಮರಣದ ನಂತರ, ಮೃತ ದೇಹವು ಶವಪೆಟ್ಟಿಗೆಯಲ್ಲಿ ಹೊರಬರುತ್ತದೆ ಮತ್ತು ಯಂತ್ರವು ಶವಪೆಟ್ಟಿಗೆಯಿಂದ ಪ್ರತ್ಯೇಕಗೊಳ್ಳುತ್ತದೆ.

ಟೀಕೆಗೆ ಗುರಿಯಾದ ಸರ್ಕಾರ

ಡಾ.ಡೆತ್ ಅವರು ತಯಾರಿಸಿದ ಈ ಯಂತ್ರಕ್ಕೆ ಕಾನೂನು ಒಪ್ಪಿಗೆ ಸಿಕ್ಕ ಬಳಿಕ, ಡಾ.ಡೆತ್ ಹಾಗೂ ಸರ್ಕಾರದ ಮೇಲೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಜಗತ್ತಿನಾದ್ಯಂತ ಇಂತಹ ಯಂತ್ರದ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಕಳೆದ ವರ್ಷ 1,300 ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳಲು ಸರ್ಕಾರದ ಅನುಮತಿಯನ್ನು ಕೋರಿದ್ದರು. ಅದಲ್ಲದೆ ‌ಈ ಯೋಜನೆಯು ತುಂಬಾ ದುಬಾರಿಯಾಗಿದೆ. ಜೊತೆಗೆ ಇದು ಸಹಜ ಸಾವಾಗುವುದಿಲ್ಲ ಎಂದು ಹಲವಾರು ಜನ ಟೀಕಿಸಿದ್ದಾರೆ. ಆದರೆ ಇದು ಬದುಕಲು ಸಾಧ್ಯವಾಗದೇ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸಹಕಾರಿಯಾಗಲಿದೆ ಎಂದು ವೈದ್ಯರು ಹೇಳುತ್ತಾರೆ.

Leave A Reply

Your email address will not be published.