Home Health ತಂದೆ ಬೈದರೆಂದು ಸಿಟ್ಟಿನಿಂದ 21 ಕಬ್ಬಿಣದ ಮೊಳೆಗಳನ್ನೇ ನುಂಗಿದ ಮಗ !! | ಹೊಟ್ಟೆಯಲ್ಲಿ ಇರುವುದು...

ತಂದೆ ಬೈದರೆಂದು ಸಿಟ್ಟಿನಿಂದ 21 ಕಬ್ಬಿಣದ ಮೊಳೆಗಳನ್ನೇ ನುಂಗಿದ ಮಗ !! | ಹೊಟ್ಟೆಯಲ್ಲಿ ಇರುವುದು ನಿಜವಾಗಿಯೂ ಮೊಳೆಗಳೇ ಎಂಬುದನ್ನು ನಂಬಲಾಗದ ಸ್ಥಿತಿ ಡಾಕ್ಟರ್ ಗಳದ್ದು | ಕೊನೆಗೆ ಬಾಲಕನಿಂದಲೇ ಸತ್ಯಾಂಶ ತಿಳಿದು ಅಚ್ಚರಿಗೊಂಡ ಪೋಷಕರು

Hindu neighbor gifts plot of land

Hindu neighbour gifts land to Muslim journalist

ಈಗಿನ ಕಾಲದ ಮಕ್ಕಳಿಗೆ ಹೆತ್ತವರು ಬುದ್ಧಿವಾದ ಹೇಳುವುದು ದೊಡ್ಡ ಅಪರಾಧವೇ ಆಗಿಹೋಗಿದೆ. ಯಾಕೆಂದರೆ ಮಕ್ಕಳು ಅದನ್ನು ಸ್ವೀಕರಿಸುವ ರೀತಿ ಬೇರೆಯೇ ಆಗಿದೆ. ತಂದೆ-ತಾಯಿ ಬೈದರೆಂದು ಒಮ್ಮೊಮ್ಮೆ ಮಕ್ಕಳು ಎಂತೆಂಥ ಘೋರ ಕೃತ್ಯಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಈ ಭಯಾನಕ ಘಟನೆಯೇ ಸಾಕ್ಷಿಯಾಗಿದೆ. ತಂದೆ ಬೈದರು ಎಂಬ ಕಾರಣಕ್ಕೆ ನೊಂದುಕೊಂಡ 17 ವರ್ಷದ ಬಾಲಕ ಕಬ್ಬಿಣದ ಮೊಳೆಗಳನ್ನೇ ನುಂಗಿದ್ದಾನೆ!

ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ. ಧನಂಜಯ ಎಂಬ ಬಾಲಕ ಇಂಥ ಒಂದು ದುಸ್ಸಾಹಸಕ್ಕೆ ಇಳಿದಿದ್ದಾನೆ.

ಇದು ಕೆಲವು ದಿನಗಳ ಹಿಂದೆ ನಡೆದಿರುವ ಘಟನೆಯಾಗಿದೆ. ಈತನ ತಂದೆ ಯಾವುದೋ ಕಾರಣಕ್ಕೆ ಇವನನ್ನು ಬೈದಿದ್ದಾರೆ. ಆಗ ಸಿಟ್ಟುಗೊಂಡ ಧನಂಜಯ ಮನೆಯಲ್ಲಿದ್ದ 21 ಕಬ್ಬಿಣದ ಮೊಳೆಗಳನ್ನು ನುಂಗಿದ್ದಾನೆ. ಆದರೆ ಈ ವಿಷಯ ಮನೆಯವರಿಗೆ ಗೊತ್ತೇ ಇರಲಿಲ್ಲ. ಇದ್ದಕ್ಕಿದ್ದಂತೆಯೇ ಈತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪಾಲಕರಿಗೂ ಏನಾಗಿದೆ ಎಂದು ತಿಳಿಯಲಿಲ್ಲ, ಬಾಲಕನೂ ಬಾಯಿ ಬಿಡಲಿಲ್ಲ.

ಹೊಟ್ಟೆ ನೋವು ಜಾಸ್ತಿಯಾದಾಗ ಆಸ್ಪತ್ರೆಗೆ ಧನಂಜಯನನ್ನು ದಾಖಲಿಸಲಾಗಿದೆ. ಅಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಸಿಕ್ಕಾಪಟ್ಟೆ ಮೊಳೆಗಳು ಕಾಣಿಸಿಕೊಂಡಿವೆ. ವೈದ್ಯರು ಕೂಡ ಇದು ಏನೆಂದು ತಿಳಿಯದೇ ಒಮ್ಮೆಲೇ ದಂಗಾಗಿದ್ದಾರೆ. ಏಕೆಂದರೆ ಇಷ್ಟೊಂದು ಮೊಳೆಗಳು ಹೊಟ್ಟೆಗೆ ಹೋಗಲು ಹೇಗೆ ಸಾಧ್ಯ ಎಂದು ಅವರೂ ಅಂದುಕೊಂಡಿದ್ದಾರೆ. ಬಳಿಕ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಡೆಸಿದಾಗ ಹೊಟ್ಟೆಯಲ್ಲಿ ನಿಜವಾಗಿಯೂ ಇರುವುದು ಮೊಳೆಗಳೇ ಎಂದು ತಿಳಿದಿದೆ.

ಅಚ್ಚರಿಯಿಂದ ವೈದ್ಯರು ಈ ವಿಷಯ ಹೇಳಿದಾಗ ಬಾಲಕ ಬಾಯ್ಬಿಟ್ಟಿದ್ದಾನೆ. ಎರಡೂವರೆ ಗಂಟೆಗಳ ಸತತ ಶಸ್ತ್ರಚಿಕಿತ್ಸೆ ನಡೆಸಿ ಮೊಳೆಗಳನ್ನು ಕೊನೆಗೂ ಹೊರತೆಗೆಯಲಾಗಿದೆ. ಇದೀಗ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬಾಲಕನ ಈ ನಡೆ ಹೆತ್ತವರನ್ನು ಒಂದು ಕ್ಷಣ ಭ್ರಮೆಯನ್ನುಂಟು ಮಾಡಿದ್ದಂತೂ ಸತ್ಯ. ಈಗಿನ ಕಾಲದ ಮಕ್ಕಳನ್ನು ಪೋಷಕರು ಅತ್ಯಂತ ಸೂಕ್ಷ್ಮವಾಗಿ ಎದುರಿಸುವುದು ಬಹಳ ಮುಖ್ಯವಾಗಿದೆ. ಅವರಿಗೆ ಚಿಕ್ಕಂದಿನಿಂದಲೇ ಬಗ್ಗೆ ತಿಳುವಳಿಕೆ ನೀಡುವುದು ಅತೀ ಮುಖ್ಯ.