ಉಪ್ಪಿನಂಗಡಿ: ಮನೆ ಮಂದಿ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಕಳವು

Share the Article

ಉಪ್ಪಿನಂಗಡಿ: ಮನೆ ಮಂದಿ ಇಲ್ಲದ ವೇಳೆ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿನ ಕಳರು ಮನೆಯಲ್ಲಿದ್ದ ನಗೆ ನಗದನ್ನು ದೋಚಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ

ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಉರುವಾಲು ಪದವು ಎಂಬಲ್ಲಿ ನಡೆದಿದೆ.

ಉರುವಾಲು ಪದವು ನಿವಾಸಿ ಹಮೀದ್ ಎಂಬವರು ತನ್ನ ಪತ್ನಿ ಮಕ್ಕಳೊಂದಿಗೆ ನೆಲ್ಯಾಡಿಯಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದ ವೇಳೆ ಈ ಕೃತ್ಯ ನಡೆದಿದ್ದು, ಕಳ್ಳರು ಮನೆಯೊಳಗಿದ್ದ ಕವಾಟಿನ ಬೀಗ ಮುರಿದು ನೆಕ್ಸಸ್, ಎರಡು ಉಂಗುರ ಸೇರಿದಂತೆ ಆರು ಪವನ್ ತೂಕದ ಚಿನ್ನಾಭರಣವನ್ನು ಹಾಗೂ ಸ್ವಲ್ಪ ನಗದು ಹಣವನ್ನು ಕದ್ದೊಯ್ದಿದ್ದಾರೆ. ಪರಿಸರದಲ್ಲಿ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಭಿಕ್ಷಾಟನೆ ನೆಪದಲ್ಲಿ ಸಂಚರಿಸುತ್ತಿದ್ದ ಅಲೆಮಾರಿ ತಂಡದ ಮೇಲೆ ಸಂಶಯ ಮೂಡಿದ್ದು, ಸದ್ರಿ ತಂಡವನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Leave A Reply