Home daily horoscope ಹೇರ್ ಕಟ್ ಮಾಡಿಸಲು ಸೆಲೂನ್ ಗೆ ತೆರಳಿದ್ದ ಬಾಲಕಿಗೆ ಲೈಂಗಿಕ ಕಿರುಕುಳ | ತಾಯಿಯಿಂದ ಪೊಲೀಸ್...

ಹೇರ್ ಕಟ್ ಮಾಡಿಸಲು ಸೆಲೂನ್ ಗೆ ತೆರಳಿದ್ದ ಬಾಲಕಿಗೆ ಲೈಂಗಿಕ ಕಿರುಕುಳ | ತಾಯಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

ದಿನದಿಂದ ದಿನಕ್ಕೆ ಕಾಮುಕರ ಅಟ್ಟಹಾಸ ಮಿತಿ-ಮಿರುತ್ತಲೇ ಇದೆ. ಅದೆಷ್ಟೇ ಶಿಕ್ಷೆಯಾದರೂ ರಕ್ಕಸರ ಬುದ್ಧಿ ಮಾತ್ರ ಬಿಡುತ್ತಿಲ್ಲ. ಕೊಲೆ, ದರೋಡೆಯಿಂದ ಹಿಡಿದು ತನ್ನನ್ನು ಹೆತ್ತವಳು ಒಬ್ಬಳು ಹೆಣ್ಣು ಎಂದು ಮರೆತು ಅತ್ಯಾಚಾರ ಎಂಬ ಹೀನ ಕೃತ್ಯಕ್ಕೆ ಕೈ ಹಾಕಿ ಹೆಣ್ಣನ್ನು ಸಮಾಜದಲ್ಲಿ ತಲೆ ಎತ್ತದಂತೆ ಮಾಡಿದೆ. ಇಂತಹ ನರ ರಾಕ್ಷಸರಿಗೆ ಹೆಣ್ಣಿನಿಂದಲೇ ಪ್ರಪಂಚದ ಅರಿವು ಮೂಡಿಸುವುದೇ ಒಳಿತಲ್ಲವೇ.!

ಹೌದು.ಇದೀಗ ಪುಣೆಯ ಪಿಂಪ್ರಿ-ಛಿಂಛ್ವಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲ ಇಂಥದ್ದೇ ಒಂದು ಪ್ರಕರಣ ನಡೆದಿದೆ.8 ವರ್ಷದ ಬಾಲಕಿಯು ಛಿಕಾಳಿ ಎಂಬ ಪ್ರದೇಶದಲ್ಲಿ ತಲೆ ಕೂದಲು ಕತ್ತರಿಸುವ ಸೆಲೂನ್‌ಗೆ ತೆರಳಿದ್ದಾಳೆ. ಅದು ಕೂಡ ತನ್ನ ಅಜ್ಜಿಯ ಜೊತೆಗೆ.ಆದರೆ ಸೆಲೂನ್‌ ನಲ್ಲಿದ್ದ ಕೆಲಸಗಾರ ಕೂದಲು ಕತ್ತರಿಸುವ ನೆಪದಲ್ಲಿ ಬಾಲಕಿಗೆ ಹಿಂಸೆ ಎನಿಸುವಂತೆ ಲೈಂಗಿಕವಾಗಿ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಸ್ವಲ್ಪ ಹೊತ್ತು ವಿರೋಧ ವ್ಯಕ್ತಪಡಿಸಿ ಸುಮ್ಮನೇ ಇದ್ದ ಬಾಲಕಿಯು, ಕೂಡಲೇ ಅಜ್ಜಿಯೊಂದಿಗೆ ಮನೆಗೆ ತೆರಳಿ ತನ್ನ ತಾಯಿಗೆ ನಡೆದ ವಿಷಯ ತಿಳಿಸಿದ್ದಾಳೆ.

ತಾಯಿಯ ನಿರ್ಧಾರಕ್ಕೆ ಮೆಚ್ಚುಗೆ ಎಂಬಂತೆ,ಕಾಮುಕರನ್ನು ಎಳೆಯ ಹಂತದಲ್ಲೇ ಚಿವುಟಿ ಹಾಕಬೇಕು ಎಂದು ಸಂಕಲ್ಪ ಮಾಡಿದ ಬಾಲಕಿಯ ತಾಯಿಯು ಸೀದಾ ಪೊಲೀಸ್ ಠಾಣೆಗೆ ತೆರಳಿ ಸೆಲೂನ್ ಕೆಲಸಗಾರನ ವಿರುದ್ಧ ಪೋಕ್ಸೋ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.ಇಂತಹ ಧೈರ್ಯವಂತ ಹೆಣ್ಣು ಮಗಳಿಂದಲೇ ಈ ರಾಕ್ಷಸರ ಅಟ್ಟಹಾಸಕ್ಕೆ ನಾಂದಿ ಹಾಡುವುದು ಸೂಕ್ತಕರವಲ್ಲವೇ..!?