Home News ಎಸ್ಸೈ ಗೆ ಮಚ್ಚು ಬೀಸಿ ಮೇಕೆ ಕೊಚ್ಚಿದಂತೆ ಕೊಂದ ಮೇಕೆ ಕಳ್ಳರು | ಅವರ ಕ್ರೌರ್ಯಕ್ಕೆ...

ಎಸ್ಸೈ ಗೆ ಮಚ್ಚು ಬೀಸಿ ಮೇಕೆ ಕೊಚ್ಚಿದಂತೆ ಕೊಂದ ಮೇಕೆ ಕಳ್ಳರು | ಅವರ ಕ್ರೌರ್ಯಕ್ಕೆ ಪೋಲಿಸ್ ಇಲಾಖೆಯೇ ತಲ್ಲಣ ಗೊಂಡಿದೆ !

Hindu neighbor gifts plot of land

Hindu neighbour gifts land to Muslim journalist

ತಮಿಳುನಾಡು: ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಭಾನುವಾರ ಮುಂಜಾನೆ 50 ವರ್ಷದ ವಿಶೇಷ ಸಬ್ ಇನ್ಸ್ ಪೆಕ್ಟರ್ ಅವರನ್ನ ಮೇಕೆ ಕಳ್ಳರು ಕಡಿದು ಕೊಂದಿದ್ದಾರೆ. ಅವರ ಕ್ರೌರ್ಯಕ್ಕೆ ಪೋಲಿಸ್ ಇಲಾಖೆಯೇ ತಲ್ಲಣ ಗೊಂಡಿದೆ !

ಎಸ್ ಭೂಮಿನಾಥನ್ ತಿರುಚಿರಾಪಳ್ಳಿ ಜಿಲ್ಲೆಯ ನವಲ್ಪಟ್ಟು ಪೊಲೀಸ್ ಠಾಣೆಯಲ್ಲಿ ವಿಶೇಷ ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡ್ತಿದ್ದರು. ಇನ್ನು ಅಲ್ಲಿ ಜಾನುವಾರುಗಳು ಮತ್ತು ಮೇಕೆ ಕಳ್ಳತನ ವ್ಯಾಪಕವಾಗಿದ್ದು, ಗ್ಯಾಂಗ್‌ ಒಂದು ಮೇಕೆಗಳನ್ನ ಖದೀಯಲು ಹೋದಾಗ ತಡೆಯಲು ಬಂದ ಸಬ್‌ಇನ್ಸ್ ಪೆಕ್ಟರ್ ಅವರನ್ನೇ ಮೇಕೆ ಕಡಿದಂತೆ ಕಡಿದು ಕೊಂದಿದೆ ಆ ತಂಡ

ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಗ್ಯಾಂಗ್ ನ ಇಬ್ಬರು ವ್ಯಕ್ತಿಗಳು ಜಲಾವೃತ ಸುರಂಗ ಮಾರ್ಗದಲ್ಲಿ ಸಿಲುಕಿಕೊಂಡಿದ್ದು, ಅಲ್ಲಿ ಅವರಿಗೆ ಎಸ್ ಐ ಎದುರಾಗಿದ್ದಾರೆ ಎಂದು ಸೂಚಿಸುತ್ತಿವೆ. ಕೆಲವು ನಿಮಿಷಗಳ ನಂತರ, ಬೇರೆ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಕಿರಾತಕರು ತಮ್ಮ ದ್ವಿಚಕ್ರ ವಾಹನದಲ್ಲಿ ತಪ್ಪಿಸಿಕೊಂಡು ಹೋಗುತ್ತಿರುವುದನ್ನ ತೋರಿಸುತ್ತವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಿರುಚಿರಾಪಳ್ಳಿ-ಪುದುಕ್ಕೊಟ್ಟೈ ರಾಷ್ಟ್ರೀಯ ಹೆದ್ದಾರಿಯ ಕೀರನೂರು ಪೊಲೀಸ್ ಠಾಣೆ ವ್ಯಾಪ್ತಿಯ ಸುರಂಗ ಮಾರ್ಗದ ಬಳಿ ಮೇಕೆ ಕಳ್ಳರು, ಎಸ್ ಎಸ್ ಐ ಅವ್ರ ಮೇಲೆ ಆಟ್ಯಾಕ್ ಮಾಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಕಳ್ಳರು ಕತ್ತಿ ಬೀಸಿ ಎಸ್ ಎಸ್ ಐ ಅನ್ನು ಹತ್ಯೆ  ಮಾಡಿ ಆ ಪ್ರದೇಶದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಪುದುಕ್ಕೊಟ್ಟೈ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಪಾರ್ಥಿಬನ್ ಅವ್ರು ಡಿಜಿಪಿಗೆ ನೀಡಿದ ಸಂದೇಶದಲ್ಲಿ, ಎಸ್ ಐರನ್ನ ‘ಮೇಕೆ ಕಳ್ಳತನ ಆರೋಪಿ’ ಕಡಿದು ಕೊಂದಿರುವುದಾಗಿ ಹೇಳಿದ್ದಾನೆ. ಎಸ್ ಐ ಭೂಮಿನಾಥನ್‌ ಅವ್ರು 45 ವರ್ಷದ ಪತ್ನಿ ಮತ್ತು 21 ವರ್ಷದ ಮಗನನ್ನು ಅಗಲಿದ್ದಾರೆ.