ಜನವಸತಿ ಪ್ರದೇಶದಲ್ಲಿ ತೆರೆದ ಮರಣ ಬಾವಿ..! | ಮೂರು ವರ್ಷದಿಂದ ಭಯದಲ್ಲೇ ಕಾಲ ಕಳೆದ ಜನರು

ಪುತ್ತೂರು : ಕಳೆದ ಮೂರು ವರ್ಷಗಳ ಹಿಂದೆ ಕಾಲನಿ ಜನರಿಗೆ ಕುಡಿಯುವ ನೀರಿಗೆಂದು ತೆಗೆದ ಬಾವಿ ಇದು. ಬಾವಿಯಲ್ಲಿ ಸಾಕಷ್ಟು ನೀರಿದೆ, ಆದರೆ ಬಾವಿಯ ಸುತ್ತ ಕಟ್ಟೆ ಗೋಡೆ ನಿರ್ಮಿಸದ ಕಾರಣ ಬಾವಿಯ ನೀರೂ ಹಾಳಾಗಿದೆ. ಕಾಲನಿಯ ಜನರೂ ಬಾವಿಯ ಕಾರಣಕ್ಕೆ ಭಯದಿಂದಲೇ ಬದುಕುವಂತಾಗಿದೆ. ಈ ದೃಶ್ಯ ಕಂಡು ಬಂದಿದ್ದು ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆದ್ರಾಡಿ ಸಮೀಪದ ಕರ್ನೂರು ಮಠ ದಲಿತ ಕಾಲನಿಯಲ್ಲಿ. ತಾಪಂನಿಂದ ಬಾವಿ ನಿರ್ಮಾಣ ಕಾಲನಿ ಜನರಿಗೆ ಕುಡಿಯುವ ನೀರಿಗೆಂದು ತಾಪಂ ವತಿಯಿಂದ ಈ ಬಾವಿ ನಿರ್ಮಾಣ ಕಾರ್ಯ ನಡೆದಿತ್ತು.

ಸುಮಾರು 12 ಕೋಲು ಆಳದ ಬಾವಿಯಲ್ಲಿ ಬೇಸಗೆಯಲ್ಲೂ ನೀರು ಇರುತ್ತದೆ. ಬಾವಿ ನಿರ್ಮಾಣ ಮಾಡಿದ ಬಳಿಕ ಅದಕ್ಕೆ ಕಟ್ಟೆಯನ್ನು ಕಟ್ಟಿಲ್ಲ. ಈ ಕಾರಣಕ್ಕೆ ಅದರೊಳಗೆ ನಾಯಿ, ಬೆಕ್ಕುಗಳು ಬಿದ್ದು ಸತ್ತುಹೋಗಿದ್ದು ಇದರಿಂದ ನೀರು ಕಲುಶಿತಗೊಂಡಿದೆ. ಕಟ್ಟೆಯ ನಿರ್ಮಾಣ ಮಾಡದ ಕಾರಣ ಕಾಲನಿಯ ಮಕ್ಕಳ ಮೇಲೆ ನಿತ್ಯವೂ ಪೋಷಕರು ಕಣ್ಣಿಟ್ಟು ಕಾಯಬೇಕಾದ ಪರಿಸ್ಥಿತಿ ಇದೆ. ಆಟವಾಡುವ ವೇಳೆ ಮಕ್ಕಳು ಬಾವಿಯ ಕಡೆ ತೆರಳದಂತೆ ಎಷ್ಟು ಎಚ್ಚರವಹಿಸಿದರೂ ಸಾಲುವುದಿಲ್ಲ ಎನ್ನುತ್ತರೆ ಕಾಲನಿ ನಿವಾಸಿಗಳು.

ಬಾವಿಗೆ ಕಟ್ಟೆಯನ್ನು ಯಾಕೆ ನಿರ್ಮಾಣ ಮಾಡಿಲ್ಲ ಎಂಬುದು ನಮಗೆ ಗೊತ್ತಿಲ್ಲ, ನೀರಿದ್ದರೂ ಬಾವಿ ಉಪಯೋಗ ಶೂನ್ಯವಾಗಿದೆ ಎಂಬುದು ಕಾಲನಿ ಜನರ ಆರೋಪ. ದುರಸ್ಥಿ ಮಡಿದರೆ ಕಾಲನಿಗೆ ನೀರು ಬಾವಿಯನ್ನು ದುರಸ್ಥಿ ಮಾಡಿ ಅದಕ್ಕೆ ಕಟ್ಟಿ ನಿರ್ಮಾಣ ಮಾಡಿದರೆ ಕಾಲನಿಯ ಜನರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯುಂಟಾಗದು. ಬೇಸಗೆಯ ಕೊನೇಯವರೆಗೂ ಬಾವಿಯಲ್ಲಿ ದಾರಾಳ ನೀರು ಇರುತ್ತದೆ. ಸಂಬಂಸಿದವರು ಇದನ್ನು ದುರಸ್ಥಿ ಮಾಡಬೇಕಿದೆ. ಇಲ್ಲವಾದರೆ ಬಾವಿ ಉಪಯೋಗ್ಯ ಶೂನ್ಯವಾಗುವುದರ ಜೊತೆಗೆ ಅಪಾಯವೂ ತಂದೊಡ್ಡಲಿದೆ.

ಬಾವಿಯ ಸ್ಥಿತಿ ಗಮನಕ್ಕೆ ಬಂದಿರಲಿಲ್ಲ. ತಕ್ಷಣವೇ ಅದಕ್ಕೆ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಬಾವಿಯನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸುವ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು.

– ನವೀನ್‌ ಭಂಡಾರಿ, ತಾಪಂ ಕಾರ್ಯನಿರ್ವಹಣಾಕಾರಿ, ಪುತ್ತೂರು

ಬಾವಿ ತಾಪಂ ಸುಪರ್ದಿಯಲ್ಲಿದೆ. ಬಾವಿಯನ್ನು ಸ್ವಚ್ಚಮಾಡಿ ಅದಕ್ಕೆ ಕಟ್ಟೆ ನಿರ್ಮಾಣ ಮಾಡಿದರೆ ಜನ ಬಳಸಬಹುದು. ಅಪಾಯಕಾರಿಯಾದ ಬಾವಿಗೆ ಕಟ್ಟೆ ಕಟ್ಟುವಂತೆ ತಾಪಂ ಸಿಇಒ ರವರಿಗೆ ಗ್ರಾಪಂ ನಿಂದ ಮನವಿ ಸಲ್ಲಿಸಲಾಗುವುದು.

– ಶ್ರೀರಾಂ ಪಕ್ಕಳ, ಗ್ರಾಪಂ ಉಪಾಧ್ಯಕ್ಷರು

ಮೂರು ವರ್ಷದಿಂದ ಬಾವಿ ಬಳಕೆಯಾಗುತ್ತಿಲ್ಲ. ಸಾಕಷ್ಟು ನೀರಿದೆ. ತಡೆಗೋಡೆ ಇಲ್ಲದ ಕರಣ ನಾಯಿ , ಬೆಕ್ಕು ಬಿದ್ದು ನೀರು ಮಲಿನವಾಗಿದೆ. ಸಂಭಂದಿಸಿದ ಅಧಿಕಾರಿಗಳು ಇದರತ್ತ ಗಮನಹರಿಸಬೇಕಿದೆ.

– ಭಾಸ್ಕರ ರೈ ಕೊಪ್ಪ, ಸ್ಥಳೀಯರು

Leave A Reply

Your email address will not be published.