Petrol Bunk : ಬಂಕ್ ನಲ್ಲಿ ನೀವೂ ₹110, ₹210 ಪೆಟ್ರೋಲ್ ಹಾಕಿಸ್ತೀರಾ.? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ನೋಡಿ

Petrol Bunk : ಕಠಿಣವಾದ ಕಾನೂನು ಕ್ರಮವಿದ್ದರೂ ಕೂಡ ಕೆಲವು ಪೆಟ್ರೋಲ್ ಬಂಕುಗಳಲ್ಲಿ ಗ್ರಾಹಕರ ಕಣ್ಣಿಗೆ ಮಣ್ಣೆರಚಿ ವಂಚನೆಯನ್ನು ನಡೆಸುತ್ತಿದ್ದಾರೆ. ಮೀಟರ್ ನಲ್ಲಿ ಜೀರೋ ಎಂದು ತೋರಿಸಿದರು ಕೂಡ ಗ್ರಾಹಕರಿಗೆ ಭಾರಿ ಮೋಸ ಆಗುತ್ತಿದೆ. ಈ ಸಂದರ್ಭದಲ್ಲಿ, ಪೆಟ್ರೋಲ್ ಪಂಪ್ ಉದ್ಯೋಗಿಯೊಬ್ಬರು ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸುವ ಸರಿಯಾದ ಮತ್ತು ವಿಶ್ವಾಸಾರ್ಹ ಮಾರ್ಗಗಳನ್ನ ವಿವರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಹೌದು, ನೀವು ಪೆಟ್ರೋಲ್ ಬಂಕ್ ಗೆ ಪೆಟ್ರೋಲ್ ಹಾಕಿಸುವಾಗ ಅಲ್ಲಿ ಕೆಲಸದವರು ‘ಸರ್ ಝೀರೋ ಇದೆ ನೋಡಿಕೊಳ್ಳಿ’ ಎಂದು ಹೇಳಿ ಪೆಟ್ರೋಲನ್ನು ಹಾಕಲು ಶುರು ಮಾಡುತ್ತಾರೆ. ನಾವು ಮಾನಿಟರ್ ಮೇಲೆ ಒಮ್ಮೆ ಕಣ್ಣಾಡಿಸಿ ಜೀರೋ ಇರುವುದನ್ನು ಕನ್ಫರ್ಮ್ ಮಾಡಿಕೊಂಡು ಸುಮ್ಮನಾಗಿ ಬಿಡುತ್ತೇವೆ. ಅಷ್ಟೇ ಅಲ್ಲದೆ ಇಂದು ರೌಂಡ್ ಫಿಗರ್ ರೀತಿಯ ಪೆಟ್ರೋಲ್ ಹಾಕಿಸುವ ಬದಲು ಅಂದರೆ 100, 200, 500, 1000 ರೂಪಾಯಿ ಎಂದು ಹಾಕಿಸುವ ಬದಲು 120, 220, 510 ಈ ರೀತಿಯಾಗಿ ವಾಹನಗಳಿಗೆ ಪೆಟ್ರೋಲ್ ಹಾಕಿಸುತ್ತೇವೆ. ಇದು ವಂಚನೆಯನ್ನು ತಪ್ಪಿಸುವ ಮಾರ್ಗ, ನಾವು ಬುದ್ಧಿವಂತರು ಎಂದು ಕೆಲವರು ಅಂದುಕೊಳ್ಳುವುದುಂಟು. ಆದರೆ ವೈರಲ್ ಆಗಿರುವ ವಿಡಿಯೋದಲ್ಲಿ ಇದು ಕೂಡ ವಂಚನೆಯ ಮಾರ್ಗವಾಗಿದೆ ಎಂದು ಹೇಳುವುದನ್ನು ಕಾಣಬಹುದು.
ವೈರಲ್ ಆಗಿರುವ ವೀಡಿಯೊದಲ್ಲಿ ಪೆಟ್ರೋಲ್ ಪಂಪ್ ಉದ್ಯೋಗಿಯೊಬ್ಬರು ನಿರ್ದಿಷ್ಟ ಪ್ರಮಾಣದ ಇಂಧನವನ್ನ ತುಂಬುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ನಿಜವಾಗಿಯೂ ಪರಿಗಣಿಸಬೇಕಾದ ಎರಡು ಇತರ ವಿಷಯಗಳಿವೆ. ಮೊದಲನೆಯದು ಇಂಧನದ ಸಾಂದ್ರತೆ. ಉದ್ಯೋಗಿಯ ಪ್ರಕಾರ, ಪೆಟ್ರೋಲ್‌ನ ಸಾಂದ್ರತೆಯು 720 ಮತ್ತು 775ರ ನಡುವೆ ಇರಬೇಕು, ಆದರೆ ಡೀಸೆಲ್’ನ ಸಾಂದ್ರತೆಯು 820 ಮತ್ತು 860ರ ನಡುವೆ ಇರಬೇಕು. ಸಾಂದ್ರತೆಯ ಮೂಲಕ, ಇಂಧನ ಎಷ್ಟು ಶುದ್ಧವಾಗಿದೆ ಮತ್ತು ಅದು ಕಲಬೆರಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಬಹುದು. ಸಾಂದ್ರತೆಯು ಈ ನಿರ್ದಿಷ್ಟ ಮಿತಿಯೊಳಗೆ ಇದ್ದರೆ ಮಾತ್ರ, ಪೆಟ್ರೋಲ್ ಅಥವಾ ಡೀಸೆಲ್’ನ್ನು ತುಂಬಿಸಬೇಕು.
Comments are closed.