ಅಣು ಇಂಧನ ಖಾಸಗಿ ಸೇರಿ ಒಟ್ಟು 3 ಮಸೂದೆಗಳು ಮಂಡನೆ

Share the Article

ಹೊಸದಿಲ್ಲಿ: ನಾಗರಿಕ ಪರಮಾಣು ಇಂಧನ ವಲಯವನ್ನು ಖಾಸಗಿ ಕಂಪೆನಿಗಳಿಗೆ ಮುಕ್ತಗೊಳಿಸುವ ‘ಶಾಂತಿ’ ಮಸೂದೆಯೂ ಸೇರಿದಂತೆ ಲೋಕಸಭೆಯಲ್ಲಿ ಸೋಮವಾರ 3 ಹೊಸ ಮಸೂದೆಗಳನ್ನು ಮಂಡಿಸಲಾಗಿದೆ. ಈ ಮಸೂದೆಗಳು ದೇಶದ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ. ವಿಶ್ವವಿದ್ಯಾಲಯಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯದಲ್ಲಿ ಪಾರದರ್ಶಕತೆಯನ್ನು ತರುವ ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ ಮಸೂದೆಯನ್ನು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮoಡಿಸಿದರು.

71 ವಿವಿಧ ಹಳೆಯ ಕಾನೂನುಗಳನ್ನು ಹಿಂಪಡೆಯುವ 2025ರ ಹಿಂಪಡೆಯುವ ಮತ್ತು ತಿದ್ದುಪಡಿ ಮಸೂದೆಯನ್ನು ಕಾನೂನು ಸಚಿವ ಅರ್ಜುನ್ ರಾಮ್ ಮೇಘಾಲ್ ರವರು ಮಂಡಿಸಿದರು. ಈ ಮಸೂದೆಗಳ ಬಗ್ಗೆ ಕೊನೆಗಳಿಗೆಯಲ್ಲಿ ಮಾಹಿತಿ ನೀಡಲಾಗಿದೆ ಮತ್ತು ಅವುಗಳ ಅಧ್ಯಯನ ಮಾಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದೆ.

ಅಲ್ಲದೆ ಖಾಸಗಿ ಕಂಪನಿಗಳಿಗೆ ಅಣು ಇಂಧನ ಉತ್ಪತ್ತಿಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಮಂಡಿಸಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ. ಇಂಧನ ನಿರ್ವಹಿಸುವ ಮೂಲ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ ಇಟ್ಟುಕೊಂಡು ಅದನ್ನು ಅಳುವ ಸ್ಥಳವಾಗಿ ಬಳಸುವ ಎಲ್ಲ ಸಾಧ್ಯತೆಯೂ ಇದೆ. ಇದು ಭಾರತದಂತಹ ಭ್ರಷ್ಟಾಚಾರ ತುಂಬಿರುವ ದೇಶಗಳಲ್ಲಿ ರಾಷ್ಟ್ರೀಯ ಮತ್ತು ಮಾನವ ಕುಲಕ್ಕೆ ಆತಂಕ ಉಂಟು ಮಾಡಬಲ್ಲ ಘಟನೆಗಳಿಗೆ ನಾಂದಿ ಆದೀತು ಎನ್ನೋದು ಆತಂಕದ ಹಿಂದಿನ ಕಾರಣ.

Comments are closed.