ಗೋವಾ ಅಗ್ನಿ ದುರಂತ: 25 ಮಂದಿ ಬಲಿ, ಪರಾರಿಯಾಗಿದ್ದ ಲೂಥ್ರಾ ಸಹೋದರರ ಬಂಧನ

Share the Article

ಗೋವಾ ಅಗ್ನಿ ದುರಂತದಲ್ಲಿ 25 ಜನರು ಸಾವಿಗೀಡಾದ ತನಿಖೆಯಲ್ಲಿ, ಲುಥ್ರಾ ಸಹೋದರರಾದ ಸೌರವ್ ಮತ್ತು ಗೌರವ್ ಅವರನ್ನು ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಬಂಧಿಸಲಾಗಿದೆ.

25 ಜೀವಗಳನ್ನು ಬಲಿ ಪಡೆದ ಬೆಂಕಿಯ ನಂತರ ‘ಬಿರ್ಚ್ ಬೈ ರೋಮಿಯೋ ಲೇನ್’ ಮಾಲೀಕರು ಭಾರತದಿಂದ ಪಲಾಯನ ಮಾಡಿದರು. ಭಾರತೀಯ ಅಧಿಕಾರಿಗಳು ಅವರ ಪಾಸ್‌ಪೋರ್ಟ್‌ಗಳನ್ನು ಅಮಾನತುಗೊಳಿಸಿದ ನಂತರ ಬಂಧನ ಮಾಡಲಾಗಿದೆ ಎಂದು ಇಂಡಿಯಾ ಟುಡೇಯ ಅಂಜಲಿ ಇಸ್ತವಾಲ್ ವರದಿ ಮಾಡಿದ್ದಾರೆ.

ವಿಮಾನ ರದ್ದತಿ ಮತ್ತು ವಿಳಂಬದಿಂದಾಗಿ ದೇಶಾದ್ಯಂತ ವಿಮಾನಯಾನ ಸಂಸ್ಥೆ ಸಂಕಷ್ಟಕ್ಕ ಸಿಲುಕಿದ್ದಾಗ ಇಂಡಿಗೋ ವಿಮಾನದಲ್ಲಿ ಅವರು ಪರಾರಿಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಡಿಸೆಂಬರ್ 7 ರಂದು ಬೆಳಗಿನ ಜಾವ 1.17 ಕ್ಕೆ ಸಹೋದರರು ಥೈಲ್ಯಾಂಡ್‌ಗೆ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ ಎಂದು ಪೊಲೀಸರು ಬಹಿರಂಗಪಡಿಸಿದರು.

ಬಂಧನಕ್ಕೆ ಹೆದರಿ ಸಹೋದರರು ಭಾರತಕ್ಕೆ ಮರಳಲು ನಿರಾಕರಿಸಿದ್ದರು ಮತ್ತು ಬಂಧನ ಪೂರ್ವ ಜಾಮೀನು ಕೋರಿ ದೆಹಲಿಯ ರೋಹಿಣಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಅರ್ಪೋರಾ ಕ್ಲಬ್‌ನಲ್ಲಿ ತಾವು ದಿನನಿತ್ಯದ ಕಾರ್ಯಾಚರಣೆಗಳನ್ನು ನಡೆಸುತ್ತಿಲ್ಲ ಮತ್ತು ಅಧಿಕಾರಿಗಳ ಪ್ರತೀಕಾರದ ವರ್ತನೆಗೆ ಬಲಿಯಾಗಿದ್ದೇವೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ತಮ್ಮ ಥೈಲ್ಯಾಂಡ್ ಪ್ರವಾಸವು ಪಲಾಯನವಲ್ಲ, ಬದಲಾಗಿ ಯೋಜಿತ ವ್ಯವಹಾರ ಸಭೆ ಎಂದು ಅವರು ಹೇಳಿದ್ದಾರೆ.

Comments are closed.