ನಂದಿನಿ ಪಾರ್ಲರ್‌ಗಳಲ್ಲಿ ಬೇರೆ ಬ್ರ್ಯಾಂಡ್ ಮಾರಾಟಕ್ಕೆ ಬ್ರೇಕ್; ಕಠಿಣ ನಿರ್ಧಾರಕ್ಕೆ ಮುಂದಾದ ಕೆಎಂಎಫ್

KMF: ಬೇರೆ ಬೇರೆ ಬ್ರ್ಯಾಂಡ್ ಮಾರಾಟವನ್ನು ನಂದಿನಿ ಪಾರ್ಲರ್‌ಗಳಲ್ಲಿ ನಿಲ್ಲಿಸಲು ಕೆಎಂಎಫ್ ಕಠಿಣ ನಿರ್ಧಾರಕ್ಕೆ ಬಂದಿದೆ. ಲೈಸೆನ್ಸ್ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬಂಧನದ ನಂತರ ಕೆಎಂಎಫ್ ಕಠಿಣ ನಿರ್ಧಾರಕ್ಕೆ ಮುಂದಾಗಿದೆ.
ನಂದಿನಿ ಬ್ರಾಂಡ್‌ಗೆ ಕೆಟ್ಟ ಹೆಸರು ತಂದ್ರೇ ಹುಷಾರ್. ಯಾವುದೇ ಕಾರಣಕ್ಕೂ ನಮ್ಮ ಹೆಮ್ಮೆಯ ಬ್ರ್ಯಾಂಡ್‌ಗೆ ಕೆಟ್ಟ ಹೆಸರು ತರಲು ಬಿಡಲ್ಲ. ಈಗಾಗಲೇ ನಾವು ನಮ್ಮ ಪಾರ್ಲರ್‌ಗಳಲ್ಲಿ ಬೇರೆ ಬ್ರ್ಯಾಂಡ್‌ಗಳಿಗೆ ಅವಕಾಶ ನೀಡಿಲ್ಲ. ಒಂದು ವೇಳೆ ಬೇರೆ ಬ್ರ್ಯಾಂಡ್ ಮಾರಾಟ ಮಾಡಿದ್ರೇ ಎಚ್ಚರ. ನಂದಿನಿ ಹೊರತುಪಡಿಸಿ ಬೇರೆ ಬ್ರ್ಯಾಂಡ್ ಮಾಡಿದ್ದಕ್ಕೆ ಈಗಾಗಲೇ ಕೆಲವು ಕಡೆ ನೋಟಿಸ್ ನೀಡಿದ್ದೇವೆ. ಇನ್ಮೇಲೆ ಸಂಪೂರ್ಣ ಲೈಸೆನ್ಸ್ ರದ್ದು ಮಾಡ್ತೀವಿ ಎಂದು ಕೆಎಂಎಫ್ ಎಂಡಿ ಶಿವಸ್ವಾಮಿಯವರು ಎಚ್ಚರಿಕೆ ನೀಡಿದ್ದಾರೆ.
Comments are closed.