Bihar: ಬಿಹಾರದಲ್ಲಿ ನಿತೀಶ್ ಕುಮಾರ್ ಬಿಟ್ಟು ಸರ್ಕಾರ ರಚಿಸುತ್ತಾ ಬಿಜೆಪಿ? ಹೀಗಿವೆ ನೋಡಿ ಸಾಧ್ಯತೆಗಳು

Share the Article

Bihar: ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. ಬಿಜೆಪಿ ಹಾಗೂ ಜೆಡಿಯು ಹತ್ತಿರ, ಹತ್ತಿರ ಸಮಾನ ಅಂಕಿಗಳಲ್ಲಿ ಗೆಲುವು ಸಾಧಿಸಿವೆ. ಈ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿಯ ಬಿರುಗಾಳಿಗೆ ಮಹಾಘಟಬಂಧನ್ ಮೈತ್ರಿಕೂಟ ತತ್ತರಿಸಿದೆ ಹೋಗಿದೆ. ಇನ್ನೂ ಇದೆ ವೇಳೆ ಅಚ್ಚರಿಯ ಸಂಗತಿ ಎಂದರೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವನ್ನು ಬಿಟ್ಟು ಬಿಜೆಪಿ ಸರ್ಕಾರ ರಚಿಸುತ್ತಾ ಎಂಬ ಕುತೂಹಲ ಕೆರಳಿಸಿದೆ. ಅದಕ್ಕೆ ಕಾರಣಗಳು ಕೂಡ ಹೀಗಿವೆ ನೋಡಿ.

ಲೋಕಸಭೆಯಲ್ಲಿ ಜೆಡಿಯು 12 ಸಂಸದರನ್ನು ಹೊಂದಿದ್ದು, ಹಾಗಾಗಿ ಬಿಜೆಪಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ನಿರ್ಲಕ್ಷಿಸುವುದು ಅಸಾಧ್ಯದ ಸಂಗತಿ. ಆದರೆ ಇನ್ನೊಂದು ಸಾಧ್ಯತೆಯನ್ನು ನೋಡುವುದಾದರೆ ಈಗ ಹಿಂದೂಸ್ತಾನಿ ಅವಾಮ್ ಮೋರ್ಚಾ 5 ಸ್ಥಾನಗಳಲ್ಲಿ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇವುಗಳನ್ನು ಸೇರಿಸಿದರೆ, ಬಿಜೆಪಿ, ಎಲ್‌ಜೆಪಿ, ಆರ್‌ಎಲ್‌ಎಂ ಮತ್ತು ಎಚ್‌ಎಎಂ ನೆರವಿನೊಂದಿಗೆ ಸರ್ಕಾರ ರಚಿಸುವ ಸಾಧ್ಯತೆ ಇದೆ.

ಅಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ಜೆಡಿಯು ಬಿಜೆಪಿಯೊಂದಿಗೆ ಮಾತ್ರ ಮಾತುಕತೆ ನಡೆಸಿತ್ತು, ಆದರೆ ಬಿಜೆಪಿ ರಾಮ್ ವಿಲಾಸ್‌ನ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ), ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಮತ್ತು ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾದಂತಹ ಇತರ ಮಿತ್ರಪಕ್ಷಗಳೊಂದಿಗೂ ಸಹ ಮಾತುಕತೆ ನಡೆಸುವ ಮೂಲಕ ಚುನಾವಣೆ ಕಣಕ್ಕೆ ಇಳಿದಿತ್ತು. ಈ ಎಲ್ಲಾ ಮಿತ್ರಪಕ್ಷಗಳನ್ನು ಬಿಜೆಪಿ ಎನ್‌ಡಿಎ ಸಖ್ಯಕ್ಕೆ ತಂದಿರುವುದರಿಂದ ಅದರೊಂದಿಗೆ ಮಾತುಕತೆ ನಡೆಸಬೇಕು ಎಂದು ಜೆಡಿಯು ವಾದಿಸಿತ್ತು. ಹೀಗಾಗಿ, ಬಿಹಾರದಲ್ಲಿ ಈ ಪಕ್ಷಗಳು ಜೆಡಿಯುಗಿಂತ ಬಿಜೆಪಿಗೆ ಹೆಚ್ಚು ಹತ್ತಿರವಾಗಿವೆ. ಹಿನ್ನೆಲೆಯಲ್ಲಿ ಬಿಜೆಪಿ ಧೈರ್ಯ ಮಾಡಿದರು ಕೂಡ ಅನುಮಾನವಿಲ್ಲ.

Comments are closed.