ದೇಗುಲದ ಪ್ರಸಾದ, RSS ಕಚೇರಿಯಲ್ಲಿ ರಿಸಿನ್ ವಿಷ ಬೆರೆಸಲು ಸಂಚು: ಉಗ್ರರು ಅರೆಸ್ಟ್

Temple Prasadam RSS: ದೆಹಲಿ ಬಾಂಬ್ ಸ್ಫೋಟ ಫರೀದಾಬಾದ್‌ನಲ್ಲಿ ವೈದ್ಯರ ಮನೆಗಳಿಂದ ದೊರಕಿದ ಸ್ಫೋಟಕ ವಶ ಘಟನೆಗೆ ಕುರಿತಂತೆ, ಉಗ್ರರ ಮಹಾ ಸಂಚು ಮಾಡಿದ್ದು ಇದನ್ನು ಎಟಿಎಸ್ ವಿಫಲಗೊಳಿಸಿದೆ. ಬಯೋಕೆಮಿಕಲ್ ಟೆರರ್ (ರಿಸಿನ್ ವಿಷ) ಬೆರೆಸಿ ಹತ್ಯೆ ಮಾಡುವ ದೊಡ್ಡ ಸಂಚು ಬಯಲಾಗಿದೆ. ಈ ಸಂಬಂಧ ಮೂವರು ಉಗ್ರರನ್ನು ಎಟಿಎಸ್ ಬಂಧನ ಮಾಡಿದೆ.

ಅಚ್ಚರಿಯ ವಿಷಯವೇನೆಂದರೆ ಈ ಉಗ್ರು, ರಿಸಿನ್ ವಿಷವನ್ನು ದೇಗುಲದ ಪ್ರಸಾದ, ಅರ್‌ಎಸ್‌ಎಸ್ ಕಚೇರಿಯಲ್ಲಿ ರಿಸಿನ್ ವಿಷ ಬೆರೆಸಲು ಭಾರಿ ಷಡ್ಯಂತ್ರ ರೂಪಿಸಿದ್ದರು. ಬಂಧಿತ ಉಗ್ರರನ್ನು ಅಜಾದ್ ಸುಲೇಮಾನ್ ಶೇಕ್, ಮೊಹಮ್ಮದ್ ಸುಹೈಲ್ ಸಲೀಮ್ ಖಾನ್, ಅಹಮ್ಮದ್ ಮೊಯುದ್ದೀನ್ ಸಯಿದ್ದೀನ್ ಬಂಧಿತ ಉಗ್ರರು. ಇದರಲ್ಲಿ ಅಹಮ್ಮದ್ ಮೊಯುದ್ದೀನ್ ಸಿದ್ದೀನ್ ಹೈದರಾಬಾದ್ ಮೂಲದ ವೈದ್ಯ, ಚೀನಾದಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ್ದಾನೆ.
ಇವರು ರಿಸಿನ್ ವಿಷವನ್ನು ದೇಗುಲದ ಪ್ರಸಾದ ಹಾಗೂ ಆರ್‌ಎಸ್‌ಎಸ್ ಕಚೇರಿಯ ಆಹಾರ, ಅಥವ ಇನ್ಯಾವುದೇ ರೂಪದಲ್ಲಿ ಬೆರೆಸಲು ಪ್ಲಾನ್ ಮಾಡಿದ್ದರು. ಲಖನೌ ಹಾಗೂ ದೆಹಲಿಯ ದೇವಸ್ಥಾನಗಳಲ್ಲಿ ಮೊದಲ ಹಂತದಲ್ಲಿ ಇದರ ಪ್ರಯೋಗ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ನಂತರ ಇಲ್ಲಿನ ಆರ್‌ಎಸ್‌ಎಸ್ ಕಚೇರಿಗಳಲ್ಲಿ ಈ ವಿಷ ಬೆರೆಸಲು ಪ್ಲಾನ್ ಮಾಡಲಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
Comments are closed.