Health Tips: ಮಕ್ಕಳು ಮಣ್ಣು, ಪೆನ್ಸಿಲ್, ಸಾಬೂನು ಏಕೆ ತಿನ್ನುತ್ತಾರೆ? ಹೊಡೆದು, ಶಿಕ್ಷೆ ನೀಡಿ ಈ ಅಭ್ಯಾಸವನ್ನು ತಡೆಯಬಹುದೇ?


Health Tips: ಮೂಗಿನಲ್ಲಿ ಕಡಲೆ ಬೀಜ, ಬಟಾಣಿ ಇತ್ಯಾದಿ ಪದಾರ್ಥಗಳನ್ನು ಸೇರಿಸಿಕೊಂಡ ಮಕ್ಕಳು ವೈದ್ಯರಲ್ಲಿ ಬರುವುದು ಸಾಮಾನ್ಯ. ಆದರೆ, ಮಣ್ಣು, ಪೆನ್ಸಿಲ್, ಬಳಪ ಇತ್ಯಾದಿ ಪದಾರ್ಥಗಳನ್ನು ತಿನ್ನುವ ಅಭ್ಯಾಸವುಳ್ಳ ಮಕ್ಕಳು ವೈದ್ಯರಲ್ಲಿ ಬರುವುದು ಇನ್ನೂ ಸಾಮಾನ್ಯ.
ಏಳು ವಯಸ್ಸಿನ ಮಗುವೊಂದು ಮೂರು ವರ್ಷಗಳಿಂದ ಸಾಬೂನು ತಿನ್ಕಾನುವ ಅಭ್ಯಾಸವನ್ನು ಮಾಡಿಕೊಂಡಿತ್ತು. ಸಾಬೂನು ತಿನ್ನಬಾರದೆಂದು ಹೊಡೆಯುವುದು, ಬಡಿಯುವುದು, ಶಿಕ್ಷಿಸುವುದು ಪಾಲಕರು ಎಲ್ಲವನ್ನು ಮಾಡಿ ಮುಗಿಸಿದ್ದರು. ಆತನ ಕೈಗೆ ಸಾಬೂನು ಸಿಕ್ಕದಂತೆ ಇಡಲು ಸಲಹೆ ನೀಡಲಾಯ್ತು, ಆದರೆ, ಈ ಭೂಪ ನಿನ್ನೆ ಅರ್ಧ ದಿನದಲ್ಲಿ ಒಂದು ಸೋಪನ್ನು ತಿಂದು ಮುಗಿಸಿದ್ದರಿಂದ ಆತನ ಪಾಲಕರು ಆತಂಕಗೊಂಡು ಆಸ್ಪತ್ರೆಗೆ ಬಂದರು. ಇವರು ಮನೆಯಲ್ಲಿ ಸಾಬೂನುಗಳನ್ನು ಬಚ್ಚಿಡುತ್ತಿದ್ದರು. ಆದ್ದರಿಂದ, ಪಕ್ಕದ ಮನೆಯಿಂದ ಕದ್ದು ತಂದಿದ್ದ. ಸಾಂದರ್ಭಿಕ ಅತಿಸಾರವನ್ನು ಹೊರತುಪಡಿಸಿ, ಅವನಿಗೆ ಯಾವುದೇ ಸಮಸ್ಯೆ ಇರಲಿಲ್ಲ.
◾ ಪೈಕಾ (Pica): ಇದೊಂದು ಮಾನಸಿಕ ವಿಕಾರವಾಗಿದ್ದು ಈ ವಿಕಾರದಲ್ಲಿ ರೋಗಿಯು ಜೀರ್ಣವಾಗದ ಮತ್ತು ಪೋಷಕ ಮೌಲ್ಯ ರಹಿತ ಪದಾರ್ಥಗಳನ್ನು ತೀವ್ರ ಆಸೆಯಾಗುತ್ತದೆ.
◾ಹಲವು ಸಾಬೂನುಗಳು ಸೌಮ್ಯವಾಗಿರುತ್ತವೆ, ಅವುಗಳನ್ನು ತಿನ್ನುವುದರಿಂದ ತಕ್ಷಣ ಯಾವುದೇ ವಿಶೇಷ ದುಷ್ಪರಿಣಾಮಗಳು ಕಂಡುಬರುವುದಿಲ್ಲ. ಆದರೆ, ಕಾಲಂತರದಲ್ಲಿ ಇದರ ದುಷ್ಪರಿಣಾಮವೂ ತಲೆದೋರುತ್ತದೆ. ಬಹುತೇಕ ಎಲ್ಲಾ ಸಾಬೂನುಗಳು ಕ್ಷಾರೀಯ pH ಅನ್ನು ಹೊಂದಿರುತ್ತವೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ತೊಂದರೆಗೊಳಿಸುತ್ತದೆ. ಕ್ರಮೇಣ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇದು ಅಜೀರ್ಣದಿಂದ ಕ್ಯಾನ್ಸರ್ ವರೆಗೆ ಯಾವುದೇ ಸಮಸ್ಯೆಯನ್ನು ಉಂಟು ಮಾಡಬಹುದು.
◾ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸತುವಿನಂತಹ ಪೋಷಕಾಂಶಗಳ ಕೊರತೆ, ತಾಯಿ ಅಥವಾ ಹೊಟ್ಟೆಯಲ್ಲಿರುವ ಮಗುವಿಗೆ ಅಂತಹ ಕೊರತೆಯಿದ್ದರೆ, ‘ಏನಾದರೂ’ ತಿನ್ನುವ ಬಯಕೆ ಬಲಗೊಳ್ಳುತ್ತದೆ.
◾ವೃದ್ಧಾಪ್ಯದಲ್ಲೂ ನೆನಪಿನ ಶಕ್ತಿ ಕಡಿಮೆಯಾಗಿ ಕೆಲವರು ಸೋಪು ತಿನ್ನುತ್ತಾರೆ. ಸಾಬೂನು ತಿನ್ನುವುದು ಸಾಮಾನ್ಯವಾಗಿ ಬಾಲ್ಯದಲ್ಲಿ ಕುತೂಹಲ ಮತ್ತು ಕಿಡಿಗೇಡಿತನದಿಂದ ಪ್ರಾರಂಭವಾಗುತ್ತದೆ ಮತ್ತು ದೇಹದಲ್ಲಿ ಪೌಷ್ಟಿಕಾಂಶದ ಮೌಲ್ಯಗಳಲ್ಲಿ ಕೊರತೆಯಿದ್ದರೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತದೆ.
◾ ಸ್ವ-ಮಗ್ನತೆ, ಬುದ್ದಿಮಾಂದ್ಯ, ಗತಿಮಾಂಧ್ಯ, ಇ. ಇತರ ಕೆಲವು ಕಾರಣಗಳಿರಬಹುದು. ಆದರೂ ಇಂತಹ ಅಭ್ಯಾಸಗಳು ಸುಲಭವಾಗಿ ಹೋಗುವುದಿಲ್ಲ. ಪ್ರತಿಬಂಧಾತ್ಮಕ ಉಪಾಯಗಳೇ ಇಲ್ಲಿಯೂ ಪ್ರಮುಖವಾಗಿದೆ.
◾ ನಿಯಮಿತವಾಗಿ ಸೂಕ್ತ ಪೋಷಕ ಆಹಾರ ನೀಡುವುದು, ಕೋಪಕ್ಕಿಂತ ತರಬೇತಿ ನೀಡುವುದು, ಭಯಕ್ಕಿಂತ ಹೆಚ್ಚಾಗಿ ತಿಳಿ ಹೇಳುವುದು ಈ ಮಾರ್ಗಗಳು ಸೋಪ್ ಅನ್ನು ಬಚ್ಚಿಡುವುದಕ್ಕಿಂತ ಹೆಚ್ಚು ಪರಿಣಾಮಕಾರಿ.
◾ಅರಿವಿನ ಚಿಕಿತ್ಸೆಯು ಹಾನಿಕಾರಕ ಅಭ್ಯಾಸಗಳನ್ನು ಬದಲಾಯಿಸುವಲ್ಲಿ ಸಹಕಾರಿಯಾಗಿದೆ.
◾ನೇರ ಕ್ಯಾಲ್ಸಿಯಂ-ಝಿಂಕ್-ಕಬ್ಬಿಣದ ಪೂರಕಗಳು ಉಪಯೋಗವಾಗಬಹುದು.
◾ ಈಗ ಚಳಿಗಾಲದಲ್ಲಿ ನಾನು ಪೋಷಕರಿಗೆ ಅಂಟಿನ ಲಾಡುಗಳನ್ನು ಅಥವಾ ಬರ್ಫಿಗಳನ್ನು ನೀಡಲು ಸಲಹೆ ಕೊಡುತ್ತೇನೆ. ದುಂಡಗಿರಲಿ ಚೌಕ ಆಗಿರಲಿ ಯಾವುದೇ ಆಕಾರವಿರಲಿ, ಯೋಗ್ಯ ಪೋಷಣೆ ಹೊಟ್ಟೆ ಸೇರುವುದು ಮಹತ್ವದ್ದು.
ಮಣ್ಣು, ಬಳಪ, ಸಾಬೂನು, ಇತ್ಯಾದಿ ತಿನ್ನಬಾರದ ಪದಾರ್ಥಗಳನ್ನು ತಿನ್ನುವ ಅಭ್ಯಾಸ ಇದೊಂದು ಮಾನಸಿಕ ಕಾಯಿಲೆಯಾಗಿರುತ್ತದೆ. ಇದರ ಹಿಂದೆ ವ್ಯಕ್ತಿಯ ಒಟ್ಟಾರೆ ಪ್ರಕೃತಿಯಲ್ಲಿ ಆಳವಾದ ದೋಷ ಕಾರಣವಾಗಿರುತ್ತದೆ. ಮೇಲಿನ ಉಪಾಯದಿಂದ ಇಂತಹ ಕಾಯಿಲೆ ಸಮೂಲ ನಿವಾರಣೆಯಾಗುವುದಿಲ್ಲ. ಈ ಕಾಯಿಲೆಯನ್ನು ಬೇರು ಸಮೇತ ನಿವಾರಣೆ ಮಾಡಲು ಮತ್ತು ಆರೋಗ್ಯವನ್ನು ಪುನಃ ಸ್ಥಾಪಿಸಲು ಹೋಮಿಯೋಪತಿಯಷ್ಟು ಉತ್ತಮವಾದ ಚಿಕಿತ್ಸೆ ಬೇರೊಂದಲ್ಲ! ಇಂಥ ಕಾಯಿಲೆಯಿಂದ ಮುಕ್ತಿ ನೀಡುವಲ್ಲಿ ಹೋಮಿಯೋಪತಿ ಚಿಕಿತ್ಸೆಯು ಲಕ್ಷಾಂತರ ಮಕ್ಕಳು ಹಾಗೂ ಪೋಷಕರಿಗೆ ವರವಾಗಿ ಸಾಬೀತಾಗಿದೆ.
ಡಾ. ಪ್ರ. ಅ. ಕುಲಕರ್ಣಿ
Comments are closed.