Viral Video : ಫುಟ್ಪಾತ್ ನಲ್ಲಿ ಪ್ರಧಾನಿ ಮೋದಿ ಕಾರು ವಾಷಿಂಗ್ – ವಿಡಿಯೋ ವೈರಲ್


Viral Video : ಪ್ರಧಾನಿ ಮೋದಿಯವರು ಓಡಾಡುವಂತಹ ಕಾರುಗಳಿಗಿರುವಷ್ಟೇ ಮಹತ್ವ ಅವರ ಬೆಂಗಾಬಲು ಪಡೆಯ ಕಾರುಗಳಿಗೆ ಇದೆ. ಅಲ್ಲದೆ ಅಷ್ಟೇ ಭದ್ರತೆ ಕೂಡ ಅವುಗಳಿಗೆ ಒದಗಿಸಲಾಗುತ್ತದೆ. ಆದರೆ ಫುಟ್ಪಾತ್ ನಲ್ಲಿ ನಿಲ್ಲಿಸಿ ಪ್ರಧಾನಿ ಮೋದಿ ಅವರ ಬೆಂಗಾವಲು ಕಾರನ್ನು ವಾಶ್ ಮಾಡುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ.
ಬಿಹಾರದ(bihar) ಸಮಸ್ತಿಪುರದ ಹತ್ತಿರದ ಕಾರು ತೊಳೆಯುವ ಶಾಪ್ ನಲ್ಲಿ ಪ್ರಧಾನಿ ಮೋದಿ(PM narenda modi) ಅವರ ಅಧಿಕೃತ ಬೆಂಗಾವಲು ಪಡೆಯ ಕಾರು(car) ತೊಳೆಯುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಕಾರ್ ವಾಶ್ ಮಾಲೀಕರು ಸ್ವತಃ ವೀಡಿಯೋ ಮಾಡಿಕೊಂಡಿದ್ದಾರೆ. ಪ್ರಧಾನಿಯವರ ವಾಹನ ತೊಳೆಯುವ ಸ್ಥಳದಲ್ಲಿ ಕಪ್ಪು ಬಣ್ಣದ ಎಸ್‌ಯುವಿಗಳನ್ನು ಸ್ವಚ್ಛಗೊಳಿಸುತ್ತಿರುವುದನ್ನು ತೋರಿಸಲಾಗಿದೆ.
ಇದಕ್ಕೆ ಬಗೆ ಬಗೆಯಾಗಿ ಕಮೆಂಟ್ಗಳು ಬಂದಿದ್ದು, ಬಳಕೆದಾರರೊಬ್ಬರು “ದಯವಿಟ್ಟು ಗಮನಿಸಿ, ಇದು ಪ್ರಧಾನಿಯವರ ಕ್ಯಾವಲ್‌ಕೇಡ್‌ನ ಕಾರುಗಳಲ್ಲಿ ಒಂದಲ್ಲ, ಬದಲಾಗಿ ಪ್ರಧಾನಿ ಪ್ರಯಾಣಿಸುವ ಕಾರು. ಸರ್ಕಾರಿ ವ್ಯವಸ್ಥೆಯಲ್ಲಿ ಪ್ರಧಾನಿಯವರ ಕ್ಯಾವಲ್‌ಕೇಡ್‌ಗಾಗಿ ಮೀಸಲಾದ ವಾಷಿಂಗ್ ಮತ್ತು ಸರ್ವಿಸಿಂಗ್ ಪ್ರದೇಶ ಇರಬೇಕು ಎಂದು ನನಗೆ ಖಚಿತವಾಗಿದೆ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ. ಅಲ್ಲದೆ ಈ ವರ್ಷದ ಜುಲೈನಲ್ಲಿ ಮೋದಿ ಹಂಚಿಕೊಂಡ ಚಿತ್ರದಲ್ಲಿ ಅದೇ ಎಸ್‌ಯುವಿಯಲ್ಲಿ ಕುಳಿತಿರುವುದು ಕಂಡುಬಂದಿತ್ತು.
https://x.com/Neetivaan/status/1982080624153477622?t=GjqYzy32FlVECQzUNR4I-A&s=19
Comments are closed.