Tragedy: ಸಮುದ್ರದಲ್ಲಿ ಮೀನು ಕಚ್ಚಿ ಯುವಕ ಸಾವು!

Tragedy: ಮೀನು ಹಿಡಿಯಲು (Fishing) ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಈ ದುರಂತ ನಡೆದಿದ್ದು, 24 ವರ್ಷದ ಅಕ್ಷಯ ಅನಿಲ ಮಾಜಾಳಿಕರ್ ಮೀನು ಹಿಡಿಯಲು ಸಮುದ್ರಕ್ಕೆ ಇಳಿದಿದ್ದ ಯುವಕನಿಗೆ ಮೀನೊಂದು ಕಚ್ಚಿ, ಗಂಭೀರವಾಗಿ ಗಾಯಗೊಂಡಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಮಾಹಿತಿಗಳ ಪ್ರಕಾರ, ಅಕ್ಟೋಬರ್ 14ರಂದು ಅನಿಲ ಮೀನುಗಾರಿಕೆ ಮಾಡಲು ತನ್ನ ತಂಡದ ಇತರ ಜನರ ಜೊತೆ ಸಮುದ್ರಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ಬೋಟ್ನಲ್ಲಿ ಅನಿಲ್ ಕುಳಿತಿರುವಾಗ ಮೀನೊಂದು ಸಮುದ್ರದಿಂದ ಮೇಲೆ ಹಾರಿ ಬಂದಿದ್ದು, ಆತನ ದೇಹಕ್ಕೆ ಚುಚ್ಚಿಕೊಂಡಿದೆ. ಆ ಮೀನು ಅನಿಲ್ ದೇಹಕ್ಕೆ ಗಾಯಗಳನ್ನ ಮಾಡಿದೆ. ತಕ್ಷಣವೇ ಅವರನ್ನ ವಾಪಾಸ್ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಆರಂಭಿಸಲಾಗಿದೆ. ಅನಿಲ್ ಅವರಿಗೆ ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಇಂದು ಮೃತಪಟ್ಟಿದ್ದಾನೆ.
ಮಾಹಿತಿಗಳ ಪ್ರಕಾರ 8-10 ಇಂಚು ಉದ್ದವಿದ್ದ ಮೀನಿನ ಚೂಪಾದ ಮೂತಿ ಚುಚ್ಚಿದ ಕಾರಣದಿಂದ ಅನಿಲ್ ಗಂಭೀರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ.
Comments are closed.