Post Office Schemes: ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ನಿಮ್ಮ ಹಣ ವರ್ಷದ ಅಂತ್ಯದಲ್ಲಿ ಡಬಲ್ ಆಗುತ್ತೆ

Post Office Schemes: ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್ ಯೋಜನೆಗಳು (Post Office Schemes) ಉತ್ತಮವಾಗಿರುತ್ತೆ. ಇದು ಅತ್ಯಂತ ಸುರಕ್ಷಿತವೂ ಕೂಡಾ. ಹಾಗಿದ್ರೆ ಇಲ್ಲಿ ನಿಮಗೆ ಪೋಸ್ಟ್ ಆಫೀಸ್‌ನ ಬೆಸ್ಟ್ 5 ಹೂಡಿಕೆ ಯೋಜನೆ ಬಗ್ಗೆ ತಿಳಿಸಲಾಗಿದೆ.

1. ಸುಕನ್ಯಾ ಸಮೃದ್ಧಿ ಯೋಜನೆ (SSA): ಹೆಣ್ಣುಮಕ್ಕಳಿಗಾಗಿ ಅಂತಾನೇ ಕೇಂದ್ರ ಸರ್ಕಾರ ಶುರು ಮಾಡಿದ ಯೋಜನೆಯೆಂದರೆ ಅದು ಸುಕನ್ಯಾ ಸಮೃದ್ಧಿ ಯೋಜನೆ. ಈ ಯೋಜನೆಯಲ್ಲಿ, ಪೋಷಕರು ತಮ್ಮ ಮಗಳ ಹೆಸರಿನಲ್ಲಿ ಖಾತೆಯನ್ನು ತೆರೆದು, ಹೂಡಿಕೆ ಮಾಡಬಹುದು. ಈ ಯೋಜನೆಯು ವಾರ್ಷಿಕವಾಗಿ 8.2% ಬಡ್ಡಿಯನ್ನು ನೀಡುತ್ತದೆ. ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅಲ್ಲದೇ ಬರೀ 250 ರೂಪಾಯಿಯಿಂದ ವಾರ್ಷಿಕವಾಗಿ 1.5 ಲಕ್ಷದವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
2. RD ಯೋಜನೆ: ಈ ಆರ್‌ಡಿ ಯೋಜನೆಯನ್ನು ಮಧ್ಯಮ ವರ್ಗದ ಜನರಿಗಾಗಿ ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ತಿಂಗಳಿಗೆ ಕೇವಲ 100 ರೂ. ಹೂಡಿಕೆ ಮಾಡುವ ಮೂಲಕ ಓಪನ್ ಮಾಡಬಹುದು. ಅಲ್ಲದೇ ವಾರ್ಷಿಕವಾಗಿ ನಿಮ್ಮ ಹೂಡಿಕೆಗೆ 6.7% ಬಡ್ಡಿದರವನ್ನು ಸಹ ಇದು ನೀಡುತ್ತದೆ. ಇನ್ನು ಈ ಯೋಜನೆಯನ್ನು ಒಬ್ಬರು ಅಥವಾ ಇಬ್ಬರೂ ಕೂಡ ಓಪನ್ ಮಾಡಬಹುದು.
3. ಕಿಸಾನ್ ವಿಕಾಸ್ ಪತ್ರ (KVP):
ಪೋಸ್ಟ್ ಆಫೀಸ್‌ನ ಹಲವು ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆ ಕೂಡಾ ಒಂದು. ಈ ಯೋಜನೆಯು ವರ್ಷಕ್ಕೆ 7.5% ಬಡ್ಡಿಯನ್ನು ನೀಡುತ್ತಿದ್ದು, ಹೂಡಿಕೆಗೆ ಉತ್ತಮ ಲಾಭವನ್ನು ನೀಡುತ್ತದೆ. ಹೆಚ್ಚು ಹೂಡಿಕೆ ಮಾಡಿದ್ರೆ ಹೆಚ್ಚು ಬಡ್ಡಿದರವನ್ನು ಪಡೆಯಬಹುದು. ಇನ್ನು ನೀವು ಹೂಡಿಕೆ ಮಾಡಿದ ಹನ 9 ವರ್ಷ 7 ತಿಂಗಳಲ್ಲಿ ಡಬಲ್ ಆಗುತ್ತದೆ. ಈ ಯೋಜನೆಯ ಮೇಲಿನ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿಯಿಲ್ಲ.
4. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC): ಭಾರತ ಸರ್ಕಾರವು ನೀಡುವ ಮತ್ತೊಂದು ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆ ಯೋಜನೆಯೆಂದರೆ ಅದು ಎನ್‌ಎಸ್‌ಸಿ ಯೋಜನೆ. ಇನ್ನು ಈ ಯೋಜನೆ ಸಂಬಂಧಿಸಿದ ಪ್ರಮಾಣಪತ್ರವನ್ನು ಅಂಚೆ ಕಚೇರಿಯಿಂದ ಪಡೆಯಬಹುದು. NSC ಯಲ್ಲಿ ಗಳಿಸಿದ ಬಡ್ಡಿಯನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತಗೊಳಿಸುವಲ್ಲಿ ಪಾತ್ರವಹಿಸುತ್ತದೆ. ಈ ಕಾರಣದಿಂದಾಗಿ, ಹೆಚ್ಚಿನ ಉದ್ಯೋಗಿಗಳು, ಉದ್ಯಮಿಗಳು ತೆರಿಗೆ ಉಳಿಸುವ ನಿಟ್ಟಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. ಇನ್ನು ಇದರ ಲಾಕ್‌ಇನ್ ಅವಧಿ 5 ವರ್ಷಗಳು.
5. ಸಾರ್ವಜನಿಕ ಭವಿಷ್ಯ ನಿಧಿ (PPF):
ಈ ಯೋಜನೆ ಮೂಲಕ ನೀವು ಖಾತೆ ಓಪನ್ ಮಾಡಿದರೆ ತೆರಿಗೆ ವಿನಾಯಿತಿಯನ್ನೂ ಪಡೆಯಬಹುದು. ಪ್ರಸ್ತುತ ಪಿಪಿಎಫ್ ಯೋಜನೆ ಮೂಲಕ ವಾರ್ಷಿಕ 7.1% ಬಡ್ಡಿದರ ಪಡೆಯಬಹುದು. ಇನ್ನು ಈ ಯೋಜನೆಯಲ್ಲಿ ನಿಮಗೆ ಹೂಡಿಕೆ ಮಿತಿಯಿದ್ದು, ಕನಿಷ್ಠ ₹500 ಮತ್ತು ಗರಿಷ್ಠ ₹1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇನ್ನು ಈ ಖಾತೆಯ ಅವಧಿ 15 ವರ್ಷಗಳು.
Comments are closed.