Manjeshwara: ಎರಡು ವರ್ಷದ ಮಗುವನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ದಂಪತಿ ಆತ್ಮಹತ್ಯೆ

Share the Article

Manjeshwara: ಯುವ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ಕಾಸರಗೋಡು ಜಿಲ್ಲೆಯ ಮಂಜೇಶ್ವರ ವ್ಯಾಪ್ತಿಯ ಕಡಂಬಾರ್‌ ಎಂಬಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಕಡಂಬಾರ್‌ ಚೆಂಬದಪದವು ನಿವಾಸಿ ಅಜಿತ್‌ (35), ಪತ್ನಿ ಶಿಕ್ಷಕಿ ಶ್ವೇತಾ (27) ಮೃತರು.

ಸೋಮವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ದಂಪತಿಗಳು ಈ ಕೃತ್ಯ ಮಾಡಿದ್ದಾರೆ. ನೆರೆಹೊರೆಯವರಿಗೆ ಸಂಜೆ ಸಮಯದಲ್ಲಿ ನರಳಾಟದ ಶಬ್ದ ಕೇಳಿದ್ದು, ಕೂಡಲೇ ಮನೆಗೆ ಬಂದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದ್ದನ್ನು ಕಂಡು ಅವನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಮಂಗಳೂರಿನ ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಮಧ್ಯರಾತ್ರಿ 12.30 ರ ಹೊತ್ತಿಗೆ ಅಜಿತ್‌ ಸಾವಿಗೀಡಾದರೆ, ಶ್ವೇತಾ ಮಂಗಳವಾರ ಬೆಳಗಿನ ಜಾವ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ;Abolish madrasa: ಮದರಸಾ ಮಂಡಳಿಯನ್ನು ರದ್ದುಗೊಳಿಸಿದ ಮೊದಲ ರಾಜ್ಯ ಇದು! : ಅಲ್ಪಸಂಖ್ಯಾತ ಶಿಕ್ಷಣ ಮಸೂದೆಗೆ ಅನುಮೋದನೆ

ಬದ್ಯೋಡ್‌ನ ಸಹೋದರಿ ಮನೆಯಲ್ಲಿ ದಂಪತಿಗಳು ತಮ್ಮ ಎರಡು ವರ್ಷದ ಮಗುವನ್ನು ಬಿಟ್ಟು ಬಂದಿದ್ದರು. ಆರ್ಥಿಕ ಸಂಕಷ್ಟ ಆತ್ಮಹತ್ಯೆಗೆ ಕಾರಣ ಇರಬಹುದು ಎನ್ನಲಾಗಿದೆ. ಆದರೆ ಮಂಜೇಶ್ವರ ಪೊಲೀಸರು ಇನ್ನೂ ಖಚಿತ ಪಡಿಸಿಲ್ಲ.

Comments are closed.