Cyber Crime: ದೇಶದಲ್ಲಿ ಅತಿ ಹೆಚ್ಚು ಸೈಬರ್ ಕ್ರೈಮ್ ನಡೆಯುವ ನಗರ ಯಾವುದು ಗೊತ್ತಾ?!


Cyber Crime: ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಇಡೀ ದೇಶದಲ್ಲಿ ದಾಖಲಾಗಿರುವ ಒಟ್ಟು ಸೈಬರ್ ಅಪರಾಧ ಪ್ರಕರಣಗಳಲ್ಲಿ ಹೆಚ್ಚಿನವು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಂಭವಿಸುತ್ತಿವೆ.
2023 ರಲ್ಲಿ ದೇಶದಲ್ಲಿ ಅತಿ ಹೆಚ್ಚು ಸೈಬರ್ ಪ್ರಕರಣಗಳು ದಾಖಲಾಗಿದ್ದು, ಟಾಪ್ 10 ನಗರಗಳನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಅದರಲ್ಲೂ ಬೆಂಗಳೂರು ಒಂದೇ ನಗರದಲ್ಲಿ ಬರೋಬ್ಬರಿ ಶೇ.54 ರಷ್ಟು ಸೈಬರ್ ಕ್ರೈಮ್ (cyber crime ) ಅಪರಾಧಗಳು ನಡೆದಿದೆ ಎನ್ನಲಾಗಿದೆ.
ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯುರೋ ಬಿಡುಗಡೆ ಮಾಡಿದ 2023 ರ ದತ್ತಾಂಶದಲ್ಲಿ ಬಹಿರಂಗ ಪಡಿಸಲಾಗಿದೆ. ಈ ವರದಿಯ ಪ್ರಕಾರ, 2023ರಲ್ಲಿ ಬೆಂಗಳೂರಿನಲ್ಲಿ 17,631 ಸೈಬರ್ ಕ್ರೈಮ್ ಪ್ರಕರಣ ದಾಖಲಾಗಿತ್ತು.ಅದೇ 2022 ರಲ್ಲಿ 9,940 ಪ್ರಕರಣ ದಾಖಲಾಗಿತ್ತು.
ಇನ್ನುಳಿದಂತೆ ಹೈದರಾಬಾದ್, ಮುಂಬೈ, ದೆಹಲಿ ಹಾಗೂ ಲಕ್ನೋ ಸೇರಿ ಪಟ್ಟಿಯಲ್ಲಿರುವ ಆನಂತರದ 10 ನಗರಗಳಲ್ಲಿ 14,494 ಪ್ರಕರಣಗಳು ದಾಖಲಾಗಿದೆ. ತೆಲಂಗಾಣದಲ್ಲಿ 18,236, ಉತ್ತರ ಪ್ರದೇಶದಲ್ಲಿ 10,794 ಪ್ರಕರಣಗಳು ದಾಖಲಾದರೆ, ಈ ರಾಜ್ಯಗಳಲ್ಲಿ ಆರೋಪ ಪಟ್ಟಿ ದಾಖಲಾಗದ ಪ್ರಮಾಣ ಕ್ರಮವಾಗಿ ಶೇ.20.9 ಹಾಗೂ ಶೇ.45.6 ರಷ್ಟಿರುತ್ತಿದೆ.
2023ರಲ್ಲಿ ಕರ್ನಾಟಕದಲ್ಲಿ ದಾಖಲಾಗಿದ 21,889 ಪ್ರಕರಣಗಳ ಪೈಕಿ ಶೇ.18.1 ಪ್ರಕರಣಗಳಲ್ಲೇ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಇದರಲ್ಲೂ 18,602 ಕೃತ್ಯಗಳು ಮೋಸದ ಸೋಗಿನಲ್ಲಿ ನಡೆದಿರುವುದು ಅಂಕಿಅಂಶಗಳಿಂದ ಬಹಿರಂಗವಾಗಿದೆ. ಈ ವರದಿಯ ಮೂಲಕ ದೇಶದಲ್ಲಿ ಅತಿ ಹೆಚ್ಚು ಸೈಬರ್ ಕ್ರೈಮ್ ನಡೆಯುವ ನಗರ ಎಂದರೆ ಅದು ಬೆಂಗಳೂರು ಎಂದು ತಿಳಿಸಲಾಗಿದೆ.
Comments are closed.