Delivery Boy: ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದ ಯುವತಿ- ಥಾರ್ ಕಾರಲ್ಲಿ ಬಂದು ಐಟಂ ಕೊಟ್ಟೋದ ಡೆಲಿವರಿ ಬಾಯ್

Share the Article

 

Delivery Boy: ಆನ್ಲೈನಲ್ಲಿ ಆರ್ಡರ್ ಮಾಡುವ ವಸ್ತುಗಳನ್ನು ಮನೆಗೆ ತಲುಪಿಸುವ ಡೆಲಿವರಿ ಬಾಯ್ ಗಳು ಮಧ್ಯಮ ವರ್ಗದಿಂದ ಬಂದಿರುವಂತಹ, ಜೀವನು ಉಪಾಯಕ್ಕಾಗಿ ಒಂದು ವೃತ್ತಿ ಮಾರ್ಗವನ್ನು ಆರಿಸಿಕೊಂಡವರು ಎಂಬಂತ ಭಾವನೆ ಅನೇಕರಲ್ಲಿದೆ. ಅಲ್ಲದೆ ಹೆಚ್ಚಿನ ಡೆಲಿವರಿ ಬಾಯ್ ಗಳು ಕೂಡ ಇದೇ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಂತಹವರು ಬಹುತೇರು ಬೈಕ್ ಸ್ಕೂಟರ್‌, ಸ್ಕೂಟಿಗಳಲ್ಲಿ ತಮ್ಮ ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ನೀಡುತ್ತಾರೆ. ಆದರೆ ಇಲ್ಲೊಂದು ಕಡೆ ಡೆಲಿವರಿ ಏಜೆಂಟ್ ಒಬ್ಬರು ಥಾರ್ ಗಾಡಿಯಲ್ಲಿ ಬಂದು ಡೆಲಿವರಿ ನೀಡಿದ್ದಾನೆ.

 

ಹೌದು, ಬ್ಲಿಂಕಿಟ್ ಡೆಲಿವರಿ ಏಜೆಂಟ್ ಒಬ್ಬರು ಕಪ್ಪು ಬಣ್ಣದ, ಐಷಾರಾಮಿಯ ಥಾರ್ ಗಾಡಿಯಲ್ಲಿ ಬಂದು ಗ್ರಾಹಕನಿಗೆ ಅಚ್ಚರಿ ಮೂಡಿಸಿದ್ದಾರೆ. divyagroovezz ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ ದಿವ್ಯಾ ಶ್ರೀವಾಸ್ತವ್ ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ನೀವು ನಿಮ್ಮ ಡೆಲಿವರಿ ಹುಡುಗರಿಗೆ ನಿಜವಾಗಿಯೂ ಇಷ್ಟೊಂದು ಹಣ ನೀಡುತ್ತಿದ್ದೀರಾ? ಎಂದು ಬ್ಲಿಂಕಿಟ್‌ಗೆ ಟ್ಯಾಗ್ @letsblinkit ಮಾಡಿ ಅವರು ಕೇಳಿದ್ದಾರೆ. ಅಲ್ಲದೇ ಥಾರ್ ಮಹೀಂದ್ರಾಗೂ @mahindrathar ಟ್ಯಾಗ್ ಮಾಡಿದ ಅವರು ನೀವು ಇತ್ತೀಚಿನ ದಿನಗಳಲ್ಲಿ THAR ಗಾಡಿಯನ್ನು ತುಂಬಾ ಕಡಿಮೆ ಬೆಲೆಗೆ ನೀಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

https://www.instagram.com/reel/DOG4ttfk8x5/?igsh=MXV6bDduM3hzeTN0OQ==

ಇದಕ್ಕೆ ಅನೇಕ ನಿಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದು, ಬಹುಶ ಥಾರ್ ಗಾಡಿಯ ಇಎಂಐ ಕಟ್ಟಿಲ್ಲ ಹಾಗಾಗಿ ಈ ರೀತಿಯಲ್ಲಿ ತೀರಿಸುತ್ತಿದ್ದಾರೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

Comments are closed.