Indian Railways: ‘ರೈಲು ಟಿಕೆಟ್ ಬುಕಿಂಗ್’ ಮಾಡಲು ಅ. 1ರಿಂದ ಹೊಸ ನಿಯಮ

Share the Article

Train Ticket: ಮುಂಗಡವಾಗಿ ಟ್ರೈನುಗಳ ಟಿಕೆಟ್ (Train Ticket) ಸಿಗುವುದು ಖಾತರಿ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯ ಐಆರ್​ಸಿಟಿಸಿ (Indian Railways) ಈಗ ಆಧಾರ್ ದೃಢೀಕರಣ ನಿಯಮ ಜಾರಿಗೆ ತರಲು ಯೋಜನೆ ರೂಪಿಸಿದೆ.

ಅಕ್ಟೋಬರ್ 1ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮದ ಪ್ರಕಾರ ಬುಕಿಂಗ್ ವಿಂಡೋ ಆರಂಭವಾದ ಮೊದಲ 15 ನಿಮಿಷಗಳಲ್ಲಿ ಯಾರು ಟಿಕೆಟ್ ಬುಕಿಂಗ್ ಮಾಡಲು ಮುಂದಾಗುತ್ತಾರೋ ಅವರು ಆಧಾರ್ ದೃಢೀಕರಣ ಮಾಡಬೇಕು ಎಂಬುದು ಕಡ್ಡಾಯ.

ಈ ಮುಂಚೆ, ತತ್ಕಾಲ್ ಸ್ಕೀಮ್ ಅಡಿ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ದೃಢೀಕರಣ ಕಡ್ಡಾಯವಾಗಿತ್ತು. ಇನ್ಮುಂದೆ ಜನರಲ್ ರಿಸರ್ವೇಶನ್​ಗಳಿಗೂ ಮೊದಲ 15 ನಿಮಿಷ ಆಧಾರ್ ಅಥೆಂಟಿಕೇಶನ್ ನಿಯಮ ತರಲಾಗಿದೆ. ಬುಕಿಂಗ್ ವಿಂಡೋ ಶುರುವಾಗಿ 15 ನಿಮಿಷಗಳ ಬಳಿಕ ಆಧಾರ್ ಅಥೆಂಟಿಕೇಶನ್ ಅವಶ್ಯಕತೆ ಇಲ್ಲದೆಯೇ ಯಾರು ಬೇಕಾದರೂ ಬುಕಿಂಗ್ ಮಾಡಲು ಅವಕಾಶ ಇರುತ್ತದೆ.

 

 

Comments are closed.