Home News GST: ಪ್ರತೀ ಅಂಗಡಿಗಳಲ್ಲಿ `GST’ ಕಡಿತ ಫಲಕ ಕಡ್ಡಾಯ; ನಿರ್ಮಲಾ ಸೀತಾರಾಮನ್

GST: ಪ್ರತೀ ಅಂಗಡಿಗಳಲ್ಲಿ `GST’ ಕಡಿತ ಫಲಕ ಕಡ್ಡಾಯ; ನಿರ್ಮಲಾ ಸೀತಾರಾಮನ್

Hindu neighbor gifts plot of land

Hindu neighbour gifts land to Muslim journalist

GST: ಇನ್ಮುಂದೆ ಪ್ರತೀ ಅಂಗಡಿಗಳಲ್ಲಿ ಜಿಎಸ್ಟಿ ಕಡಿತದ ವಿವರಗಳ ಕುರಿತು ಫಲಕಗಳಗಳನ್ನು ಸ್ಥಾಪಿಸುವುದು ಕಡ್ಡಾಯ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (nirmala sitaraman) ತಿಳಿಸಿದ್ದಾರೆ.

ಚೆನ್ನೈನಲ್ಲಿ ‘ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ತೆರಿಗೆ ಸುಧಾರಣೆಗಳು’ ಎಂಬ ವಿಷಯದ ಕುರಿತು ನಡೆದ ಸಮ್ಮೇಳನದಲ್ಲಿ ಮಾತನಾಡಿದ ಹಣಕಾಸು ಸಚಿವೆ, ಅಂಗಡಿಗಳಲ್ಲಿ ಜಿಎಸ್ ಟಿ (GST) ಕಡಿತದ ಫಲಕಗಳನ್ನು ಹಾಕುವುದು ಕಡ್ಡಾಯ. ಈ ಸಂಬಂಧ ಎಲ್ಲಾ ರಾಜ್ಯಗಳಿಗೆ ಆದೇಶಗಳನ್ನು ನೀಡಲಾಗಿದೆ ಎಂದು ಹೇಳಿದರು. ಈ ಹಿಂದೆ ನಾಲ್ಕು ವರ್ಗಗಳಲ್ಲಿ (5, 12, 18, 28) ವಿಧಿಸಲಾಗಿದ್ದ ತೆರಿಗೆಗಳನ್ನು ಎರಡು ವರ್ಗಗಳಿಗೆ (5, 18 ಪ್ರತಿಶತ) ಇಳಿಸಲಾಗಿದೆ. ಕೇಂದ್ರ ಸರ್ಕಾರದ (central government) ನಿರ್ಧಾರದಂತೆ, ಈ ತಿಂಗಳ 22 ರಿಂದ ದೇಶಾದ್ಯಂತ ಜಿಎಸ್ಟಿ ತೆರಿಗೆ ಕಡಿತ ಜಾರಿಗೆ ಬರಲಿದೆ. ಸಾರ್ವಜನಿಕ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು 350 ಕ್ಕೂ ಹೆಚ್ಚು ವಸ್ತುಗಳ ಬೆಲೆಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ ಎಂದರು.

ಇದನ್ನೂ ಓದಿ:Gold Tax: ಪೋಷಕರಿಂದ ಆನುವಂಶಿಕವಾಗಿ ಪಡೆದ ಚಿನ್ನಾಭರಣಗಳು ತೆರಿಗೆಗೆ ಒಳಪಡುತ್ತವೆಯೇ?