Auto Tips: ಬೈಕ್‌ನ ಎಂಜಿನ್‌ ಪದೇ ಪದೇ ಹಾನಿಯಾಗಲು ಕಾರಣವೇನು?

Share the Article

 

Auto Tips: ಬಹುತೇಕ ಜನರಲ್ಲಿ ಮೋಟಾರ್ ಸೈಕಲ್ (motor cycle) ಇದ್ದೇ ಇರುತ್ತದೆ. ಆದ್ರೆ ನಿಮ್ಮ ಮೋಟಾರ್ ಸೈಕಲ್ ಯಾವ ಕಂಡೀಷನ್ ನಲ್ಲಿ ಇದೆ ಅಥವಾ ಯಾಕೆ ಪದೇ ಪದೇ ರಿಪೇರಿ ಆಗುತ್ತಿದೆ ಅನ್ನೋದು ತಿಳಿದುಕೊಳ್ಳೋದು ಅಷ್ಟೇ ಮುಖ್ಯ. ಹೌದು, ಯಾಕೆಂದರೆ ನೀವು ಮೋಟಾರ್ ಸೈಕಲ್ ಇಂಜಿನ್ ನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದಲ್ಲಿ ನಿಮ್ಮ ಮೋಟಾರ್ ಸೈಕಲ್ ಪದೇ ಪದೇ ಕೈ ಕೊಡೋದು ಗ್ಯಾರಂಟಿ. ಅದಕ್ಕಾಗಿ ನೀವು ಬೈಕ್ ಸವಾರಿ ಹೋಗುವಾಗ ಈ ತಪ್ಪು ಮಾಡಲೇಬಾರದು.

ಬೈಕ್ ಎಂಜಿನ್ ಗೆ ಎಂಜಿನ್ ಆಯಿಲ್ ಬಹಳ ಮುಖ್ಯ. ಆದ್ದರಿಂದ ಎಂಜಿನ್ ಆಯಿಲ್ ನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಬೇಕು.

ಇನ್ನು ಬಹುತೇಕ ಜನರು ಕಡಿಮೆ ವೇಗದಲ್ಲಿ ಹೆಚ್ಚಿನ ಗೇರ್ ಬಳಸುವುದು ಇದು ಎಂಜಿನ್ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ ಮತ್ತು ಅದು ಹೆಚ್ಚು ಬಿಸಿಯಾಗುತ್ತದೆ. ತಪ್ಪು ಗೇರ್ ಬಳಸುವುರಿಂದ ಎಂಜಿನ್‌ನ ಜೀವಿತ ಅವಧಿ ಕಡಿಮೆಯಾಗುತ್ತದೆ.

ಇನ್ನು ಕೆಲವರು ನಿಧಾನವಾಗಿ ಚಲಿಸುವಾಗ ಕ್ಲಚ್ ಅನ್ನು ಪದೇ ಪದೇ ಒತ್ತುತ್ತಲೇ ಇರುತ್ತಾರೆ. ಹೀಗೆ ಮಾಡುವುದರಿಂದ, ಕ್ಲಚ್ ಪ್ಲೇಟ್‌ಗಳು ಬೇಗನೆ ಸವೆದುಹೋಗುತ್ತವೆ. ಅವು ಹಾನಿಗೊಳಗಾದರೆ, ಎಂಜಿನ್ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಗೇರ್‌ಗಳನ್ನು ಬದಲಾಯಿಸಲು ಮಾತ್ರ ಕ್ಲಚ್ ಅನ್ನು ಬಳಸಿ.

ಬೈಕನ್ನು ನಿಯಮಿತವಾಗಿ ಸರ್ವಿಸ್ ಮಾಡಿಸಿಕೊಳ್ಳುತ್ತಿರಿ ನಿಯಮಿತ ಸರ್ವಿಸ್‌ನಿಂದ, ಸಣ್ಣಪುಟ್ಟ ಸಮಸ್ಯೆಗಳನ್ನು ಸಹ ಸಮಯಕ್ಕೆ ಸರಿಪಡಿಸಲಾಗುತ್ತದೆ, ಇದು ಎಂಜಿನ್ ಅನ್ನು ಸುರಕ್ಷಿತವಾಗಿ ಇರುವಂತೆ ಮಾಡುತ್ತದೆ.

Comments are closed.