Online wallets: ಮೊಬೈಲ್ ಕಳೆದು ಹೋದಾಗ ಗೂಗಲ್ ಪೇ, ಫೋನ್ ಪೇ ಬ್ಲಾಕ್ ಮಾಡೋದು ಹೇಗೆ?


Online wallets: ಮೊಬೈಲ್ ಫೋನ್ ಕಳೆದು ಹೋದಾಗ ಮೊದಲು ನೆನಪಾಗೋದೇ ಒನ್ಲೈನ್ ವಾಲೆಟ್ (Online wallets) ಬಗ್ಗೆ. ಯಾಕೆಂದರೆ ಇದರ ಮೂಲಕ ನಿಮ್ಮ ಅಕೌಂಟ್ ನಲ್ಲಿರುವ ಹಣವನ್ನು ದೋಚುವ ಸಾಧ್ಯತೆ ಇದೆ. ಅದಕ್ಕಾಗಿ ಚಿಂತೆ ಮಾಡುವ ಅಗತ್ಯವಿಲ್ಲ. ಫೋನ್ ಕಳೆದು ಹೋದ ಕೂಡಲೇ ನಿಮ್ಮ ಗೂಗಲ್ ಪೇ, ಫೋನ್ ಪೇ ನಂತಹ ಪ್ರಮುಖ ವಾಲೆಟ್ ಆಪ್ ಗಳನ್ನು ಬ್ಲಾಕ್ ಮಾಡುವ ವಿಧಾನ ಇಲ್ಲಿದೆ.
Google pay ಖಾತೆ ನಿಷ್ಕ್ರಿಯಗೊಳಿಸಲು:
ಮೊದಲು google pay ಗ್ರಾಹಕರ ಸಹಾಯವಾಣಿ ಸಂಖ್ಯೆ 18004190157 ಗೆ ಕರೆ ಮಾಡಿ. ನಂತರ ನಿಮಗೆ ಬೇಕಾದ ಭಾಷೆ ಆಯ್ಕೆ ಮಾಡಿ. ನಂತರ ಅಲ್ಲಿ ಕೇಳುವ “ಇತರ ಸಮಸ್ಯೆ” ಎಂಬುದನ್ನು ಆಯ್ಕೆ ಮಾಡಿ.
Phone pay ಖಾತೆ ನಿಷ್ಕ್ರಿಯಗೊಳಿಸಲು:
PhonePe ಬಳಕೆದಾರರಾಗಿದ್ದರೆ, 08068727374 ಅಥವಾ 02268727374 ನಂಬರ್ ಗೆ ಕರೆ ಮಾಡಿ.
ನಂತರ ಭಾಷೆ ಆಯ್ಕೆ ಮಾಡಿ ‘PhonePe ಖಾತೆಗೆ ಸಂಬಂಧಿಸಿದ ಸಮಸ್ಯೆಯನ್ನು ದಾಖಲಿಸಲು ಬಯಸುವಿರಾ?’ ಎಂದು ಕೇಳಿದಾಗ ‘ಹೌದು’ ಎಂದು ಒತ್ತಿ.
ನಂತರ ನಿಮ್ಮ ಬ್ಯಾಂಕ್ ನಲ್ಲಿ ನಮೂದಿಸಿದ ಫೋನ್ ನಂಬರ್ ನಮೂದಿಸಿ. ನಿಮಗೆ OTP ಸಿಗದೇ ಇದ್ದಲ್ಲಿ, ‘OTP ಲಭಿಸಲಿಲ್ಲ’ ಎಂಬ ಆಯ್ಕೆ ಒತ್ತಿ. ನಂತರ ನಿಮ್ಮ ಸಿಮ್ ಅಥವಾ ಫೋನ್ ಕಳೆದುಹೋಗಿರುವ ಬಗ್ಗೆ ದೂರು ನೀಡಲು ಅವಕಾಶ ಸಿಗುತ್ತದೆ. ಆ ಆಯ್ಕೆ ನಂತರ ನಿಮ್ಮ ಕರೆಯನ್ನು ತಂತ್ರಜ್ಞರಿಗೆ ವರ್ಗಾಯಿಸಲಾಗುತ್ತದೆ. ಅವರು ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲು ಸಹಾಯ ಮಾಡುತ್ತಾರೆ.
Paytm ಖಾತೆ ನಿಷ್ಕ್ರಿಯಗೊಳಿಸಲು:
Paytm ಬಳಕೆದಾರರ ಆಗಿದ್ದಲ್ಲಿ ಸಹಾಯವಾಣಿ ಸಂಖ್ಯೆ 01204456456 ಗೆ ಕರೆ ಮಾಡಿ.ಅಲ್ಲಿ ‘ಕಳೆದುಹೋದ ಫೋನ್’ (Lost Phone) ಆಯ್ಕೆಯನ್ನು ಆರಿಸಿ.
‘ಬೇರೆ ಮೊಬೈಲ್ ಸಂಖ್ಯೆ’ಯನ್ನು ನಮೂದಿಸುವ ಆಯ್ಕೆ ಆಯ್ದುಕೊಂಡು, ನಿಮ್ಮ ಕಳೆದುಹೋದ ಮೊಬೈಲ್ ನಂಬರ್ ನಮೂದಿಸಿ.ಎಲ್ಲ ಸಾಧನಗಳಿಂದ ಲಾಗ್ ಔಟ್ ಆಗುವ ಆಯ್ಕೆಯನ್ನು ಕ್ಲಿಕ್ ಮಾಡಿ.
ಇದಾದ ನಂತರ, Paytm ವೆಬ್‌ಸೈಟ್‌ಗೆ ಭೇಟಿ ನೀಡಿ, ’24*7 ಸಹಾಯ’ ಆಯ್ಕೆ ಮೇಲೆ ಕ್ಲಿಕ್ ಮಾಡಿ. ‘ವಂಚನೆ ಬಗ್ಗೆ ವರದಿ’ (Report a fraud) ಆಯ್ಕೆ ಆರಿಸಿ.
ಅಲ್ಲಿ ನೀಡಿರುವ ‘ಮೆಸೇಜ್ ಅಸ್’ (Message Us) ಲಿಂಕ್ ಅನ್ನು ಬಳಸಿಕೊಂಡು, ನಿಮ್ಮ Paytm ವಹಿವಾಟುಗಳು, ಇಮೇಲ್ ಮತ್ತು ಮೆಸೇಜ್‌ಗಳ ವಿವರಗಳನ್ನು ನೀಡಿ.
Paytm ನಿಮ್ಮ ಮನವಿಯನ್ನು ಪರಿಶೀಲಿಸಿ ಖಾತೆಯನ್ನು ಬ್ಲಾಕ್ ಮಾಡುತ್ತದೆ ಮತ್ತು ನಿಮಗೆ ದೃಢೀಕರಣ ಮೆಸೇಜ್ ಕಳುಹಿಸುತ್ತದೆ.
Comments are closed.