Dasara Holiday: ದಸರಾ ರಜೆ ಶಿಕ್ಷಕರಿಗಿಲ್ಲ ಯಾಕೆ!?

Dasara Holiday: ದಸರಾ ರಜೆ (Dasara Holiday) ಶಿಕ್ಷಕರಿಗಿಲ್ಲ ಅನ್ನೋ ವಿಚಾರದಿಂದ ಶಿಕ್ಷಕರು ಬೇಸರ ಪಟ್ಟಿದ್ದಾರೆ. ಹೌದು, ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ದಸರಾ ರಜೆಯಲ್ಲಿಯೂ ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಶಿಕ್ಷಕರದ್ದು.

ಸುಮಾರು 1.50 ಲಕ್ಷ ಶಿಕ್ಷಕರನ್ನು ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದ್ದು, ಸೆ.22 ರಿಂದ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ.
ದಸರಾ ರಜೆ (Dasara Holiday) ಸೆ.20 ರಿಂದ ಅ.7 ರವರೆಗೆ ನಿಗದಿಯಾಗಿದೆ. ಆದರೆ, ಶಿಕ್ಷಕರಿಗೆ ರಜೆ ನೀಡದೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸುವ ಶಿಕ್ಷಕರಿಗೆ ಸೆ.13 ರಿಂದ ಸೆ.19 ರವರೆಗೆ ತರಬೇತಿ ನಡೆಯಲಿದ್ದು, ಶಾಲಾ ಅವಧಿ ಮುಗಿದ ಬಳಿಕ ಸಂಜೆ 5 ಗಂಟೆ ನಂತರ ತರಬೇತಿ ನೀಡಲಾಗುತ್ತಿದೆ.
ಸದ್ಯ ಸೆ.22ರಿಂದ ಅ.7ರವರೆಗೆ ರಾಜ್ಯ ಸರ್ಕಾರಿ ಶಾಲೆಗಳ ಲಕ್ಷ ಶಿಕ್ಷಕರನ್ನು ಸಮೀಕ್ಷಾ ಕಾರ್ಯಕ್ಕೆ ತೊಡಗಿಸಿಕೊಳ್ಳಲಾಗಿದೆ.
Comments are closed.