Divorce : ಸಿಇಒ ತಬ್ಬಿಕೊಂಡಿದ್ದ ಮಹಿಳೆ ಬಾಳಲ್ಲಿ ಬಿರುಕು – ಡಿವೋರ್ಸ್‌ ಕೊಟ್ಟ ಪತಿ

Share the Article

Divorce : ಕಾರ್ಯಕ್ರಮವೊಂದರಲ್ಲಿ ಆಸ್ಟ್ರೋನೊಮರ್‌ ಕಂಪನಿಯ ಸಿಇಒ ಮತ್ತು ಹೆಚ್‌ಆರ್‌ ತಬ್ಬಿಕೊಂಡ ಘಟನೆಯ 1 ತಿಂಗಳ ಬಳಿಕ ಮಹಿಳೆಗೆ ಪತಿ ಡಿವೋರ್ಸ್‌ ಕೊಡಲು ಮುಂದಾಗಿದ್ದಾರೆ.

ಇತ್ತೀಚೆಗೆ ಅಮೆರಿಕದ ಬೋಸ್ಟನ್‌ನಲ್ಲಿ ಕೋಲ್ಡ್‌ ಪ್ಲೇ ಸಂಗೀತ ಕಚೇರಿ ನಡೆದಿತ್ತು. ಈ ಹಂತದಲ್ಲಿ ಗಾಯಕ ಕ್ರಿಸ್‌ ಮಾರ್ಟಿನ್‌ ಪ್ರೇಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಎನ್ನುವಂತೆ ಕಿಸ್‌ಕ್ಯಾಮ್‌ಅನ್ನು ಹಾರಿಬಿಟ್ಟಿದ್ದರು. ಕಿಸ್‌ ಕ್ಯಾಮ್‌ ಹಾರುತ್ತಾ ಆಸ್ಟ್ರೋನಾಮರ್‌ ಸಿಇಒ ಆಂಡಿ ಬೈರಾನ್‌ ಅವರ ಬಳಿ ಬಂದಿತ್ತು. ಈ ವೇಳೆ ಆಂಡಿ ಬೈರಾನ್‌, ಒಬ್ಬ ಹುಡುಗಿಯನ್ನು ಹಿಂದಿನಿಂದ ತಬ್ಬಿಕೊಂಡು ನಿಂತಿದ್ದರು. ಕಿಸ್‌ಕ್ಯಾಮ್‌ ಬಳಿ ಬಂದು ಅವರ ವಿಡಿಯೋ ದೈತ್ಯ ಪರದೆಯಲ್ಲಿ ಪ್ರಸಾರವಾಗುತ್ತಿದ್ದಂತೆ ಆಂಡಿ ಬೈರಾನ್‌ ಅಡಗಿಕೊಳ್ಳಲು ಆರಂಭಿಸಿದ್ದರು. ಅದಕ್ಕೆ ಕಾರಣವೂ ಇತ್ತು. ಆಂಡಿ ಬೈರಾನ್‌ ತಬ್ಬಿಕೊಂಡಿದ್ದ ಹುಡುಗಿ ಬೇರೆ ಯಾರೂ ಆಗಿರಲಿಲ್ಲ. ಆಸ್ಟ್ರೋನಾಮರ್‌ ಕಂಪನಿಯ ಚೀಫ್‌ ಪೀಪಲ್‌ ಆಫೀಸರ್‌ ಕ್ರಿಸ್ಟಿನ್‌ ಕ್ಯಾಬೋಟ್‌ ಆಗಿದ್ದರು. ಇಲ್ಲಿಯವರೆಗೂ ಸೀಕ್ರೆಟ್‌ ಆಗಿದ್ದ ಅಫೇರ್‌ ಕೋಲ್ಡ್‌ ಪ್ಲೇ ಸಂಗೀತ ಕಚೇರಿಯ ಕಿಸ್‌ ಕ್ಯಾಮ್‌ ಮೂಲಕ ಜಗತ್ತಿಗೆ ಗೊತ್ತಾಗಿತ್ತು. ಪ್ರಕರಣ ವಿಶ್ವದಾದ್ಯಂತ ವಿವಾದಕ್ಕೆ ಕಾರಣವಾಗಿತ್ತು.

ತಮ್ಮ ವೀಡಿಯೋ ಪ್ರದರ್ಶನವಾಗುತ್ತಿದ್ದಂತೆ ಇಬ್ಬರೂ ಮುಜುಗರಕ್ಕೆ ಒಳಗಾದರು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿತು. ನಂತರ ಇಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಘಟನೆ ಬಳಿಕ ದಂಪತಿ ಸಂಬಂಧ ಹದಗೆಟ್ಟಿತ್ತು. ಆಂಡ್ರ್ಯೂ ತನ್ನ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಾಗ ನೊಂದುಕೊಂಡಿದ್ದರು. ಅಲ್ಲದೇ, ವಿಚಾರ ಎಲ್ಲೆಡೆ ವೈರಲ್‌ ಆದಾಗ ಮತ್ತಷ್ಟು ಮುಜುಗರಕ್ಕೆ ಒಳಗಾಗಿದ್ದರು.

ಇದನ್ನೂ ಓದಿ:CM Siddaramiah : ಬಾನು ಮುಷ್ತಾಕ್ ಕನ್ನಡದ ವಿರುದ್ಧ ಮಾತನಾಡಿದ್ದಕ್ಕೆ ಸಾಕ್ಷಿಯಿಲ್ಲ – ಸಿಎಂ ಸಿದ್ದರಾಮಯ್ಯ

ಘಟನೆಯಾದ ಒಂದು ತಿಂಗಳ ಬಳಿಕ ಹೆಚ್‌ಆರ್‌ ಮಾಜಿ ಮುಖ್ಯಸ್ಥೆ ಕ್ರಿಸ್ಟನ್ ಕ್ಯಾಬಟ್‌ಗೆ ಆಕೆಯ ಪತಿ ಆಂಡ್ರ್ಯೂ ಕ್ಯಾಬಟ್‌ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಆ.13 ರಂದು ನ್ಯೂ ಹ್ಯಾಂಪ್‌ಶೈರ್‌ನ ಪೋರ್ಟ್ಸ್‌ಮೌತ್‌ನಲ್ಲಿರುವ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Comments are closed.