ಧರ್ಮಸ್ಥಳದ ಧರ್ಮ ಯುದ್ದ: ನಾವು ಗೆದ್ದೇ ಗೆಲ್ಲುತ್ತೇವೆ, ಧೈರ್ಯವಾಗಿರಿ – ಸಿ.ಎಸ್.ದ್ವಾರಕಾನಾಥ್

Share the Article

Dharmasthala: ನಾಡಿನ ಹಿರಿಯ ಚಿಂತಕ ಸಾಮಾಜಿಕ ಹೋರಾಟಗಾರ ಸಿ ಎಸ್ ದ್ವಾರಕಾನಾತ್ ಅವರು ಧರ್ಮಸ್ಥಳದ ಧರ್ಮ ಯುದ್ಧದಲ್ಲಿ ನಮ್ಮದೇ ಗೆಲುವು ಖಚಿತ ಎಂದು ಹೇಳಿದ್ದಾರೆ. ಈ ಸಂಬಂಧ ಪೋಸ್ಟ್ ಹಾಕಿರುವ ಅವರು ವಿವರವಾಗಿ ಧರ್ಮಸ್ಥಳದ ಪರ ಮತ್ತು ವಿರುದ್ಧ ನಡೆಯುತ್ತಿರುವ ಘಟನೆಗಳ ಬಗ್ಗೆ ಬೆಳಕು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಬರೆದದ್ದನ್ನು ಹಾಗೆಯೇ ಓದಿಕೊಳ್ಳಿ.

“ಚಿನ್ನಯ್ಯ, ಸುಜಾತ ಭಟ್ ರ ಕ್ಷುಲ್ಲಕ ವಿಷಯ ಇಟ್ಟುಕೊಂಡ ಅತ್ಯಾಚಾರಿಗಳ, ಕೊಲೆಗಡುಕರ ಅನುನಾಯಿಗಳು ಸುಪ್ರೀಂ ಕೋರ್ಟಿನಲ್ಲೇ ಕೇಸ್ ಗೆದ್ದುಬಿಟ್ಟವರಂತೆ ಸಂಭ್ರಮಿಸುತಿದ್ದಾರೆ! ಸರ್ಕಾರದ ಒಂದು ಭಾಗ, ವಿರೋಧ ಪಕ್ಷ, ಮಾರಿಕೊಂಡ ಮಾದ್ಯಮಗಳು, ಅಪಾರ ಹಣ, ಆಸ್ತಿ, ಅಂತಸ್ತು, ಪ್ರಭಾವ, ಧರ್ಮದ ಹೆಸರಿನ ಸುಳ್ಳು ಭ್ರಮೆಗಳೆಲ್ಲ ಸೇರಿ ಒಂದು ಕಡೆಯಾದರೆ, ಧರ್ಮಸ್ಥಳದ ಪಾವಿತ್ರ್ಯತೆಯನ್ನು, ಮಂಜುನಾಥಸ್ವಾಮಿ, ಅಣ್ಣಪ್ಪಸ್ವಾಮಿಗಳ ಭಕ್ತಿ ಪರಂಪರೆಯನ್ನು ರಕ್ಷಿಸುವ ಜವಾಬ್ದಾರಿ ಹೊತ್ತವರು ಒಂದು ಕಡೆ ಸ್ಪಷ್ಟವಾಗಿ ನಿಂತಿದ್ದಾರೆ. ಅಸಹಾಯಕರಾಗಿ ರೇಪ್ ಗೆ ಒಳಗಾಗಿ, ಕೊಲೆಗೀಡಾಗಿ, ಹೂಳಲ್ಪಟ್ಟ ಅಮಾಯಕರ ಕುಟುಂಬಗಳಿಗೆ ಸಾಂತ್ವನ ಕೊಡಿಸಲು, ಅಪರಾದಿಗಳನ್ನು ಗುರುತಿಸಿ ಶಿಕ್ಷಿಸಲು ಪಣ ತೊಟ್ಟ ನಮ್ಮ ಜನಸಾಮಾನ್ಯರು, ಬಡವರು, ನಿರ್ಗತಿಕರು, ನ್ಯಾಯಪರರು, ಸಂವಿಧಾನದ ರಕ್ಷಕರು, ಜಾತಿ, ಧರ್ಮ, ಪಕ್ಷ, ಸಿದ್ದಾಂತಗಳನ್ನು ಬದಿಗೊತ್ತಿ ನ್ಯಾಯಕ್ಕಾಗಿ ಹೋರಾಡುವವರು ಮತ್ತೊಂದೆಡೆ ಒಂದಾಗುತಿದ್ದಾರೆ, ಸಂಘಟಿತರಾಗುತಿದ್ದಾರೆ. ನಿಜಕ್ಕೂ ಧರ್ಮಕ್ಕೂ ಅಧರ್ಮಕ್ಕೂ ನಡುವೆ ಧರ್ಮಯುದ್ದ ಆರಂಭವಾಗಿದೆ” ಎಂದು ಬರೆದಿದ್ದಾರೆ.

“ನೈತಿಕವಾಗಿ ಕೊಲೆಗಡುಕರ ಪರ ನಿಲ್ಲಲಾರದೆ, ಸಂತ್ರಸ್ಥರ ಪರವೂ ಪೂರ್ಣ ಮನಸ್ಸಿಲ್ಲದೆ ಮದ್ಯವರ್ತಿಗಳಾಗಿದ್ದ ಕೆಲವರು ‘ಇನ್ನೇನು ಧರ್ಮಸ್ಥಳದ ವಿಷಯ ಮುಗಿದೇ ಹೋಯಿತಲ್ಲ’ ಎಂದು ತಮ್ಮ ಮನೋ ಇಚ್ಚೆಗೆ ತಕ್ಙಂತೆಯೇ ಮಾರಿಕೊಂಡ ಮಾಧ್ಯಮಗಳು ಕೊಡುತ್ತಿರುವ ತೀರ್ಪುಗಳನ್ನೇ ಅಂತಿಮವೆಂದು ಭಾವಿಸಿ ಕುಹಕವಾಡುತಿದ್ದಾರೆ. ಅಂತವರನ್ನು ನಿರ್ಲಕ್ಷಿಸಿ” ಎಂದಿದ್ದಾರೆ ಸಿ.ಎಸ್.ದ್ವಾರಕಾನಾಥ್.

“ಮಾನಭಂಗ ಮಾಡಿದವರ, ಕೊಲೆಗಡುಕರ, ದೂರು ನೀಡದಂತೆ ಹೆದರಿಸಿದವರ ಕುರಿತು ಸಾಕಷ್ಟು ಮಾಹಿತಿ ಇದ್ದರೂ ಅವರಲ್ಲಿ ಯಾರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸದೆ, ದೂರು ಕೊಟ್ಟವರನ್ನು, ವಿಷಿಲ್ ಬ್ಲೋಯರುಗಳನ್ನು, ನ್ಯಾಯಕ್ಕಾಗಿ ಹೋರಾಡುವವರನ್ನೇ ಬಂದಿಸಿ ವಿಚಾರಣೆಗೊಳಿಸುತ್ತಿರುವುದೂ ನಮ್ಮ ಹೋರಾಟದ ಸ್ಪಿರಿಟ್’ನ್ನು ಕುಗ್ಗಿಸಲು, ನಮ್ಮಲ್ಲಿನ ನೈತಿಕ ಕಿಚ್ಚನ್ನು ದೃತಿಗೆಡೆಸಲು ಮಾಡುತ್ತಿರುವ ಷಡ್ಯಂತ್ರಗಳು ಎಂಬುದನ್ನು ಅರ್ಥಮಾಡಿಕೊಳ್ಳಿ. ಇವೆಲ್ಲವೂ ಕೂಡ ಸಾರ್ವಜನಿಕರಲ್ಲಿ ಅನುಮಾನಗಳನ್ನು ಹುಟ್ಟಿಸುವಂತೆ, ಹೋರಾಟಗಾರರ ಬೆಂಬಲಿಗರನ್ನು ಗೊಂದಲಗೊಳಿಸುವಂತೆ ಮಾರಿಕೊಂಡ ಮಾಧ್ಯಮಗಳು ಮಾಡುತ್ತಿರುವ ಕುತಂತ್ರಗಳೇ ಎಂಬುದು ನಮಗೆ ಸ್ಪಷ್ಟವಾಗಿ ಅರ್ಥವಾಗಬೇಕು.”

“ಅವರ ಬಳಿ ಇರುವ ಅಪಾರ ಹಣ, ಪ್ರಭಾವಗಳನ್ನು ಬಳಸಿ ಒಂದು ಸುಳ್ಳು ನರೇಟೀವ್ ಅನ್ನು ಸೃಷ್ಟಿಸಿ, ಮುಗ್ದ ಜನರನ್ನು ನಂಬಿಸಲು ಇನ್ನಿಲ್ಲದ ಪ್ರಯತ್ನ ಮಾಡುತಿದ್ದಾರೆ. ನಾವು ಈ ಸುಳ್ಳುಗಳನ್ನು ನಿಂತಲ್ಲಿ, ಕುಂತಲ್ಲಿ ಎಕ್ಸಪೋಸ್ ಮಾಡಬೇಕು. ನಮಗಿರುವ ಮಾದ್ಯಮಗಳು ನಮ್ಮ ನಾಲಗೆಗಳು, ಸತ್ಯಕ್ಕಾಗಿ ನಿಂತ ಯೂಟೂಬರ್ಸ್, ಮತ್ತಿತರ ಸಣ್ಣ ಜನಪರ ಮಾಧ್ಯಮಗಳಷ್ಟೇ.”

“ಸ್ವಾತಂತ್ರ ಸಂಗ್ರಾಮದ ಕಾಲದಲ್ಲೂ ಇದೇ ರೀತಿಯ ತಾಯ್ಗಂಡತನವನ್ನು ಬ್ರಿಟೀಷರು ಮಾಡಿದ್ದರು. ಯಾವುದೇ ಜನಪರ ರೈತ, ಕಾರ್ಮಿಕ, ದಲಿತ, ಕನ್ನಡಪರ ಹೋರಾಟಗಳಲ್ಲೂ ಬ್ರಿಟೀಶರ ರಕ್ತ ಹೊಂದಿರುವ ಕ್ರಿಮಿಗಳಾದ ಇಲ್ಲಿನ ಪುಡಾರಿಗಳು, ಶ್ರೀಮಂತರು, ಅವರ ಅನುಯಾಯಿಗಳು, ಮಲ ತಿನ್ನುವ ಮಾಧ್ಯಮಗಳು ಇದೇ ರೀತಿಯ ತಾಯ್ಗಂಡತನವನ್ನೇ ಮಾಡುತ್ತಾ ಬಂದಿದ್ದಾರೆ. ಆದರೆ ಜನಸಾಮಾನ್ಯರಿಗೆ ಇವೆಲ್ಲಾ ಅರ್ಥವಾಗುತ್ತೆ. ಕಡೆಗೆ ನ್ಯಾಯ, ಧರ್ಮಗಳ ಪರ ಜನ ಗಟ್ಟಿಯಾಗಿ ನಿಲ್ಲುತ್ತಾರೆ. ಆದ್ದರಿಂದ ಯಾರೂ ದೃತಿಗೆಡಬಾರದು. ನಮಗೆ ಹಿನ್ನಡೆಯಾಗುತ್ತಿದೆ ಎಂಬ ಮಾರಿಕೊಂಡ ಪೇಯ್ಡ್ ಮಾದ್ಯಮಗಳ ಆತ್ಮಸಾಕ್ಷಿ ಮಾರಿಕೊಂಡ ಮಾತುಗಳನ್ನು ಕೇಳಿಸಿಕೊಳ್ಳಬಾರದು.”

“ಈ ತಿನ್ನಬಾರದ್ದನ್ನು ತಿನ್ನುವ ಮಾದ್ಯಮಗಳ ಸಂಪರ್ಕವನ್ನು ತೆಗೆಯುವಂತೆ ನಿಮ್ಮ ಕೇಬಲ್ ನವರಿಗೆ ತಿಳಿಸಿ, ಇಂತಹ ಮಾದ್ಯಮಗಳನ್ನು ಸಂಪರ್ಕ ತೆಗೆಸುವುದೇ ನಮ್ಮ ಆಂದೋಲನದ ಒಂದು ಭಾಗವಾಗಲಿ.”

“ನಮ್ಮದು ನ್ಯಾಯಯುತ, ಧರ್ಮಯುತ, ನೈತಿಕತೆಯ, ದೇಶಪ್ರೇಮಿ ಹೋರಾಟ. ನಮ್ಮ ಆಂದೋಲನಕ್ಕೆ ಜಯ ಸಿಕ್ಕೇ ಸಿಗುತ್ತೆ. ಯಾರೂ ಎದೆಗುಂದಬೇಡಿ, ವಿಚಲಿತರಾಗಬೇಡಿ. ಈ ಹೋರಾಟದಲ್ಲಿ ತಾಯಂದಿರು, ಯುವಕರು ಹೆಚ್ಚೆಚ್ಚು ಪಾಲ್ಗೊಳ್ಳಿ, ಈ ಐತಿಹಾಸಿಕ ಸಂಗ್ರಾಮದಲ್ಲಿ ನಾವು ಗೆಲ್ಲೇ ಗೆಲ್ಲತ್ತೇವೆ ಎಂಬ ವಿಶ್ವಾಸ ಇಡಿ, ನೀವೂ ಈ ಸಂಗ್ರಾಮದ ಭಾಗವಾಗಿ, ಇತಿಹಾಸದಲ್ಲಿ ನಿಮ್ಮ ಹೆಸರು ಅಜರಾಮರವಾಗಿ ಉಳಿದುಹೋಗುತ್ತೆ” ಇದು ಹಿರಿಯ ಸಾಮಾಜಿಕ ಹೋರಾಟಗಾರ ಸಿ.ಎಸ್.ದ್ವಾರಕಾನಾಥ್ ಜನರಿಗೆ ಕೊಟ್ಟ ಕರೆ.

Comments are closed.