IPL-19: ಒಂದೇ ವರ್ಷಕ್ಕೆ ಡೆಲ್ಲಿ ಟೀಮ್ ಗೆ ರಾಹುಲ್ ಬೈ ಬೈ? ಈ ತಂಡಕ್ಕೆ ಸೇರ್ಪಡೆ?

IPL-19: ಐಪಿಎಲ್ ನಲ್ಲಿ ಲಕ್ನೋದಿಂದ ಡೆಲ್ಲಿ ತಂಡ ಸೇರಿಕೊಂಡಿದ್ದ ಕೆಎಲ್ ರಾಹುಲ್ ಒಂದೇ ವರ್ಷಕ್ಕೆ KKR ತಂಡವನ್ನು ಸೇರಿಕೊಳ್ಳಲಿದ್ದಾರೆ ಮಾತು ಕೇಳಿಬರುತ್ತಿದೆ. ಐಪಿಎಲ್ ಸೀಸನ್ -19ರ ಹರಾಜಿಗೂ ಮುನ್ನ ಬಿಗ್ ಡೀಲ್ ಕುದುರಿಸಿಕೊಳ್ಳಲು ಕೊಲ್ಕತ್ತಾ ನೈಟ್ ರೈಡರ್ಸ್ (KKR) ಫ್ರಾಂಚೈಸಿಯು ತೆರೆಮರೆಯ ಪ್ರಯತ್ನಕ್ಕೆ ಕೈ ಹಾಕಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಹೌದು, ಕೆಎಲ್ ರಾಹುಲ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಮಾತುಕತೆ ಮುಂದುವರೆಸಿದೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಕೆಕೆಆರ್ ಫ್ರಾಂಚೈಸಿ ರಾಹುಲ್ ಮೇಲೆ ಕಣ್ಣಿಟ್ಟಿದೆ ಎಂದು ಸುದ್ದಿಯಾಗಿತ್ತು. ಇದೀಗ ಕನ್ನಡಿಗನ ಖರೀದಿಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಟ್ರೇಡ್ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಕಳೆದ ಆವೃತ್ತಿಯಲ್ಲಿ ಕ್ವಿಂಟನ್ ಡಿ ಕಾಕ್ ಅವರ ಕಳಪೆ ಪ್ರದರ್ಶನದಿಂದಾಗಿ (8 ಪಂದ್ಯಗಳಲ್ಲಿ ಕೇವಲ 152 ರನ್) ಕೆಕೆಆರ್ ತಂಡವು ಒಬ್ಬ ಸಮರ್ಥ ಕೀಪರ್-ಬ್ಯಾಟರ್ ಕೊರತೆಯನ್ನು ಎದುರಿಸುತ್ತಿದೆ. ಮತ್ತೊಂದೆಡೆ, ಕೆಎಲ್ ರಾಹುಲ್ ಅವರು ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 13 ಪಂದ್ಯಗಳಲ್ಲಿ 53.90ರ ಸರಾಸರಿಯಲ್ಲಿ 539 ರನ್ ಗಳಿಸಿ ಅಮೋಘ ಫಾರ್ಮ್‌ನಲ್ಲಿದ್ದರು. ಈ ಹಿನ್ನೆಲೆಯಲ್ಲಿ, ರಾಹುಲ್ ಅವರ ಸೇರ್ಪಡೆಯು ಕೆಕೆಆರ್‌ಗೆ ದೊಡ್ಡ ಬಲ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಂದಹಾಗೆ ಕಳೆದ ಸೀಸನ್ ನಲ್ಲಿ ಕೆಎಲ್ ರಾಹುಲ್ ರನ್ನು ಡೆಲ್ಲಿ ತಂಡ 14 ಕೋಟಿ ರೂ. ಕೊಟ್ಟು ಖರೀದಿ ಮಾಡಿತ್ತು. ರಾಹುಲ್ ಕೂಡಾ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಆದರೆ ಡೆಲ್ಲಿ ಆರಂಭದಲ್ಲಿ ಸತತ ಗೆಲುವು ಕಂಡರೂ ಕೊನೆಯಲ್ಲಿ ಫೈನಲ್ ಗೇರಲು ವಿಫಲವಾಯಿತು.
Comments are closed.