Dharmasthala case: ಧರ್ಮಸ್ಥಳ ಪ್ರಕರಣ – ಎಸ್ಐಟಿಗೆ ಮುಸ್ಲಿಂ ಮುಖಂಡನ ಸವಾಲ್! ಒಂದು ವರ್ಷ ಅಗೆದ್ರು ಎನೂ ಸಿಗಲ್ಲ

Share the Article

Dharmasthala case: ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಸದ್ದು ಮಾಡುತ್ತಿದೆ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ. ಇದೀಗ ಉತ್ಖನನ ಕಾರ್ಯಕ್ಕೆ ಎಸ್‌ಐಟಿ ತಂಡ ಕೈ ಹಾಕಿ 14—15 ದಿನ ಆಯ್ತು. ದಿನದಿಂದ ದಿನಕ್ಕೆ ಅನೇಕ ಬೆಳವಣಿಗೆಗಳು ನಡೆಯುತ್ತಿದೆ. ಅನೇಕ ನಾಯಕರು ಅವರವರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಕೊಪ್ಪಳ ನಗರಸಭೆ ಸದಸ್ಯ ಅಕ್ಬರ್ ಪಾಷಾ ಎಸ್ ಐ ಟಿಗೆ ಸವಾಲ್ ಹಾಕಿದ್ದಾರೆ.

ನೀವು 14 ದಿನ ಅಲ್ಲ ಒಂದು ವರ್ಷ ಅಗೆದರು ಏನೂ ಸಿಗಲ್ಲ ಎಂದು ಮುಸ್ಲಿಂ ಮುಖಂಡ ಅಕ್ಬರ್ ಪಾಷಾ ಹೇಳಿಕೆ ನೀಡಿದ್ದಾರೆ. ಈ ಕೃತ್ಯ ಮಾಡಿದವರಿಗೆ ಗಣಪತಿ ಹಬ್ಬ ಬಂದು ಹೋಗೊದರ ಒಳಗೆ ಶಿಕ್ಷೆ ಆಗತ್ತೆ, ಏನ್ ಆಗಿ ಸಾಯ್ತಾರೆ ಅಂತ ಇಡೀ ಕರ್ನಾಟಕ ನೋಡತ್ತೆ ಎಂದು ಧರ್ಮಸ್ಥಳ ಭಕ್ತರ ಸಭೆಯಲ್ಲಿ ಎಸ್ ಐ ಟಿಗೆ ಅಕ್ಬರ್ ಪಾಷಾ ಸವಾಲ್ ಹಾಕಿದ್ದಾರೆ.

ಅಲ್ಲಿ ಮಂಜುನಾಥ ಸ್ವಾಮಿ ಇದ್ದಾರೆ, ಇಲ್ಲಿಯವರೆಗೂ ಒಂದು ಅಸ್ಥಿ ಪಂಜರ ಸಿಕ್ಕಿಲ್ಲ. ನಾನು ಒಂದು ವರ್ಷ ಕೊಡ್ತಿನಿ ಅವರಿಗೆ ಒಂದು ಅಸ್ಥಿ ಪಂಜರ ಅಗೆದು ತೋರಿಸಲಿ. ಎಲ್ಲಾ ಕಡೆ ಊರಿನ ಹೆಸರು ಇವೆ , ಆದ್ರೆ ಅಲ್ಲಿ ಮಾತ್ರ ಧರ್ಮಸ್ಥಳ ಅಂತ ಹೆಸರು ಬಂದಿದೆ, ಅಲ್ಲಿ ಮಂಜುನಾಥ ಇದ್ದಾನೆ ಎಂದು ಅಕ್ಬರ್ ಹೇಳಿದರು.

ಇಬ್ಬರು ಸಿಎಂಗಳು ಅಲ್ಲಿ ಆಣೆ ಮಾಡೋಕೆ ಹೋಗಿದ್ದ ಸ್ಥಳ ಅದು. ಆ ಸ್ಥಳದ ಪರಂಪರೆಯನ್ನ ನಾವು ಅರ್ಥ ಮಾಡಿಕೊಳ್ಳಬೇಕು. ಈ ಹೇಯ ಕೃತ್ಯವನ್ನ ಅಸ್ಥಿ ಪಂಜರ ಅಗೆಯುವ ಕೆಲಸ ಮಾಡ್ತಿದ್ದಾರೆ. ಇವತ್ತೂ ಅಲ್ಲಿ ಎನೂ ಇಲ್ಲ ಅಂತ ಸಿಎಂ ಅವರು ಘೋಷಣೆ ಮಾಡಬಹುದು. ಆ ಕೃತ್ಯಕ್ಕೆ ಕಾರಣವಾದವರಿಗೆ ಆ ಮಂಜುನಾಥ ಸ್ವಾಮಿ ಶಿಕ್ಷೆ ಕೊಡ್ತಾರೆ ಅಂತ ಭಾವಿಸಿದ್ದಿನಿ ಎಂದರು.

12 ಶತನಮಾನದ ನಂತರ ಕ್ರಾಂತಿ ಕಾರಿ ಆಗಿರೋದು ಧರ್ಮಸ್ಥಳದಲ್ಲಿ, ಬಡವರ ಮುಖ್ಯವಾಹಿನಿಗೆ ಬರೋಕೆ ಧರ್ಮಸ್ಥಳ ಸಂಘ ಕಾರಣವಾಗಿದೆ. ನನ್ನ ಮಣ್ಣಿನ ಮನೆ ಹೋಗಿ ಆರ್ ಸಿಸಿ ಮನೆ ಆಗಿದೆ. ಅದಕ್ಕೆ ಕಾರಣ ಧರ್ಮಸ್ಥಳ ಸಂಘವೆ ಕಾರಣ. ಯಾವುದೆ ಆದಾರ ಇಲ್ಲದೆ ಸಂಘದಲ್ಲಿ ಸಾಲ ಕೊಟ್ಟಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಇವತ್ತು ಎಲ್ಲರ ಬದುಕನ್ನ ಹಸನಾಗಿಸಿದೆ ಎಂದು ಅಕ್ಬರ್ ಹೇಳಿದರು.

ಈ ಕೃತ್ಯ ಮಾಡಿದವರಿಗೆ ನಮ್ಮ ಕಣ್ಮುಂದೆನೆ ಗಣೇಶ ಚತುರ್ಥಿ ಹಬ್ಬ ಬಂದು ಹೋಗೊ ಮೊದಲೆ ಶಿಕ್ಷೆ ಆಗತ್ತೆ. ಅವರು ಎನ್ ಆಗಿ ಸಾಯ್ತಾರೆ ಅನ್ನೋದನ್ನ 7 ಕೋಟಿ ಜನ ನೋಡ್ತಾರೆ ಎಂದು ಕೊಪ್ಪಳ‌ ನಗರ ಸಭೆ ಸದಸ್ಯ, ಮುಸ್ಲಿಂ ಮುಖಂಡ ಅಕ್ಬರ್ ಪಾಷಾ ಹೇಳಿಕೆ ನೀಡಿದ್ದಾರೆ.

Yatnal case: ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ – ಯತ್ನಾಳ್ ವಿರುದ್ಧ ಎಫ್‌ಐಆರ್‌

Comments are closed.