Dharmasthala : ಶವ ಹೂತಿಟ್ಟ ಕೇಸ್ – ಕ್ಷಿಪ್ರ ವೇಗ ಪಡೆದುಕೊಂಡ ತನಿಖೆ, ಭೀಮನ ಹೆಜ್ಜೆಯೊಂದಿಗೆ ಬೆಳ್ತಂಗಡಿಗೆ ಅಡಿಯಿಟ್ಟ ಮಾಸ್ಕ್ ಒಳಗಿನ ಸಾಕ್ಷಿದಾರ !!

Dharmasthala : ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ವಿಚಾರಣೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ತನಿಖೆಯ ಕಾರ್ಯ ಚುರುಕಾಗಿದೆ. ಸುಮಾರು ಎಂಟು ಗಂಟೆಗಳಿಗೂ ಕಾಲ ಎರಡೆರಡು ಬಾರಿ ವಿಚಾರಣೆಗೆ ಒಳಪಟ್ಟ ಅನಾಮಿಕ ಸಾಕ್ಷಿ ದೂರುದಾರ ಇದೀಗ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಅಡಿಯಿಟ್ಟಿದ್ದಾನೆ.

ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ.ಯಿಂದ ಮಹತ್ವದ ಕಾರ್ಯ ನಡೆಯಲಿದೆ ಎಂಬ ಸುದ್ದಿಮೂಲಗಳಿಂದ ಹಿಡಿದು ಬಂದಿತ್ತು ಇದರ ಭಾಗವಾಗಿ ಅನಾಮಿಕ ದೂರುದಾರನನ್ನು ಸ್ಥಳ ಮಹಜರಿಗೆ ಅಧಿಕಾರಿಗಳು ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಸಾಕ್ಷಿದೂರುದಾರನ ಆಗಮನವಾಗಿದೆ. ತನ್ನ ವಕೀಲರ ಜೊತೆ ಸಾಕ್ಷಿದೂರುದಾರ ಆಗಮಿಸಿದ್ದಾನೆ.
ಈಗಾಗಲೇ ಬೆಳ್ತಂಗಡಿಯ ಎಸ್.ಐ.ಟಿ ಕಚೇರಿ ಎದುರು ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಎಸ್.ಐ.ಟಿ ಕಚೇರಿ ಬಳಿ ಕಂದಾಯ, ಭೂ ದಾಖಲೆ ವಿಭಾಗದ ಅಧಿಕಾರಿವರ್ಗ, ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿದ್ದಾರೆ. ಎಸ್‌ಐಟಿ ಕಚೇರಿ ಬಳಿ ನಿಂತಿರೋ ಮೂರು ಡಿಎಆರ್ ತುಕಡಿಗಳು ನಿಯೋಜಿಸಲಾಗಿದೆ.
ಇದನ್ನೂ ಓದಿ: Crime: ವರ್ಕ ಫ್ರೆಂ ಹೋಮ್ ನೆಪದಲ್ಲಿ ವಂಚನೆ: ಆರೋಪಿ ಅರೆಸ್ಟ್
Comments are closed.