American Airlines: ಟೇಕಾಫ್ ಆದ ಕೆಲಹೊತ್ತಲ್ಲೇ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ!

American Airlines : ಅಮೆರಿಕ ಏರ್‌ಲೈನ್ಸ್ ವಿಮಾನವು (American Airlines Flight) ಟೇಕಾಫ್ ಆದ ಕೆಲಹೊತ್ತಿನಲ್ಲೇ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ತಕ್ಷಣ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.

ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (DEN) ಅಮೆರಿಕನ್ ಏರ್ಲೈನ್ಸ್ ವಿಮಾನದ ಎಡಭಾಗದ ಮುಖ್ಯ ಲ್ಯಾಂಡಿಂಗ್ ಗೇರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಮಿಯಾಮಿಗೆ ತೆರಳುತ್ತಿದ್ದ AA3023 ವಿಮಾನವು ಟೇಕಾಫ್ ಆದ ಸ್ವಲ್ಪ ಸಮಯದ ನಂತರ ರನ್‌ವೇಯಲ್ಲಿದ್ದಾಗಲೇ ಬೆಂಕಿ ಕಾಣಿಸಿಕೊಂಡಿತು. ವಿಮಾನದ ಕೆಳಗೆ ಹೊಗೆ ಆವರಿಸಿದ್ದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ತುರ್ತು ಸ್ಲೈಡ್‌ಗಳ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ವಿಮಾನದಲ್ಲಿ 173 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು. ಅವಘಡಕ್ಕೆ ನಿಖರವಾದ ಕಾರಣ ಏನೆಂಬ ಬಗ್ಗೆ ತನಿಖೆ ನಡೆಯುತ್ತಿದೆ.
ದಟ್ಟ ಹೊಗೆಯ ನಡುವೆ ಪ್ರಯಾಣಿಕರು ರನ್‌ವೇಯಲ್ಲಿ ವಿಮಾನದಿಂದ ಇಳಿದು ಸುರಕ್ಷಿತ ಸ್ಥಳಕ್ಕೆ ಧಾವಿಸುತ್ತಿರುವ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ತ್ವರಿತವಾಗಿ ನಂದಿಸುತ್ತಿದ್ದಾರೆ.
Comments are closed.