Home News Praveen Nettar: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ತನಿಖೆ ಚುರುಕು – ಎನ್ಐಎ ಅಧಿಕಾರಿಗಳಿಂದ ರೆಹಮಾನ್...

Praveen Nettar: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ತನಿಖೆ ಚುರುಕು – ಎನ್ಐಎ ಅಧಿಕಾರಿಗಳಿಂದ ರೆಹಮಾನ್ ಕಾರ್-ಬೈಕ್ ವಶ

Hindu neighbor gifts plot of land

Hindu neighbour gifts land to Muslim journalist

Praveen Nettar: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭದ ಇತ್ತೀಚಿಗೆ ಬಂಧಿಸಲ್ಪಟ್ಟ ಆರೋಪಿ ಸೋಮವಾರಪೇಟೆ ತಾಲ್ಲೂಕಿನ ಕಲಕಂದೂರು ನಿವಾಸಿ ಅಬ್ದುಲ್ ರೆಹಮಾನ್ ಗೆ ಸೇರಿದ ಕಾರು ಮತ್ತು ಬೈಕ್ ಅನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅದೇ ಗ್ರಾಮದ ಜಮಾಲುದ್ದಿನ್ ಎಂಬುವವರ ಬಳಿ ಕೃತ್ಯದ ವೇಳೆ ಇದ್ದ ಬೆಳ್ತಂಗಡಿ ಮೂಲಕ ಇತರೆ ಸಹಚರರ ಜೊತೆ ತಪ್ಪಿಸಿಕೊಂಡು ಹೋಗಲು ಬಳಸಿದ್ದ ಮಾರುತಿ 800 ಹಾಗು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ), ಕಳೆದ ಎರಡು ವರ್ಷಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದು, ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಜುಲೈ ನಾಲ್ಕರಂದು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತಾರ್‌ನಿಂದ ಆಗಮಿಸುತ್ತಿದ್ದಾಗ ಆರೋಪಿ ಅಬ್ದುಲ್ ರೆಹಮಾನ್ ನನ್ನು ಬಂಧಿಸಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೆ ಎನ್‌ಐಎ 21 ಆರೋಪಿಗಳನ್ನು ಬಂಧಿಸಿದೆ.

ಪಿಎಫ್‌ಐ ನಾಯಕರ ನಿರ್ದೇಶನದ ಮೇರೆಗೆ ಬಂಧಿತ ಆರೋಪಿ ಅಬ್ದುಲ್ ರೆಹಮಾನ್ ಪ್ರಮುಖ ದಾಳಿಕೋರರಿಗೆ ಹಾಗೂ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರರಿಗೆ ಸ್ವಯಂಪ್ರೇರಣೆಯಿಂದ ಆಶ್ರಯ ನೀಡಿದ್ದ ಎಂದು ತನಿಖೆಯಿಂದ ಬಹಿರಂಗ ಗೊಂಡಿದೆ. ಈತನ ಸುಳಿವು ನೀಡಿದಲ್ಲಿ 4 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು.

ಇದನ್ನೂ ಓದಿ: Elephant: ಬೇಲೂರಿನ “ಕರಡಿ” ಆನೆಗೆ ಮರು ನಾಮಕರಣ – ಬಬ್ರುವಾಹನನಾದ ಪುಂಡಾನೆ