Bheema River: ಜಾನುವಾರುಗಳಿಗೆ ನೀರು ಕುಡಿಸಲು ಹೋಗಿ ಭೀಮ ನದಿಯಲ್ಲಿ ಕೊಚ್ಚಿ ಹೋದ ಯುವಕರು

Bheema River: ಜಾನುವಾರುಗಳಿಗೆ ನೀರು ಕುಡಿಸಲು ಹೋಗಿ ಇಬ್ಬರು ಯುವಕರು ಭೀಮಾ ನದಿಯ ಪಾಲಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಮಚನೂರು ಬಳಿ ಈ ಘಟನೆ ನಡೆದಿದ್ದು, ಜಾನುವಾರುಗಳಿಗೆ ನೀರು ಕೊಡಿಸಲೆಂದು ನದಿಗೆ ಇಳಿದಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ಸಿದ್ದಪ್ಪ (20) ಮತ್ತು ರಾಮು (18) ಕೊಚ್ಚಿ ಹೋಗಿರುವ ಯುವಕರಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಬಂದು ಯುವಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
Comments are closed.