Fishman Odisha: ಮೀನುಗಾರನ ಲಕ್‌ ಬದಲಿಸಿದ ಮೀನು: ಅದೃಷ್ಟ ಎಂದರೆ ಹೀಗಿರಬೇಕು

Share the Article

Fishman Odisha: ಒಡಿಶಾದ ಬಾಲಸೋರ್‌ನ ನಾನಿ ಗೋಪಾಲ್‌ ಎನ್ನುವ ಮೀನುಗಾರರನ ಬಾಳಲ್ಲಿ ಅದೃಷ್ಟ ಒಲಿದಿದೆ. ಅದು ಕೂಡಾ ಮೀನು ಹಿಡಿಯಲೆಂದು ಬಲೆ ಬೀಸಿದಾದ ಸಿಕ್ಕ ತಿಲಿಯಾ ಭೋಮಾ ಮೀನುಗಳಿಂದ (Telia Bhola Fish).


ಅಷ್ಟಕ್ಕೂ ಈ ಮೀನು ಈ ಮೀನುಗಾರ ಬಲೆಗೆ ಬಿದ್ದಿರುವುದು ಒಂದೆರಡಲ್ಲ. ಭರ್ಜರಿ 29 ಮೀನುಗಳು. ಪ್ರತಿ ಮೀನು ಬರೋಬ್ಬರಿ 20 ಕೆಜಿಗಿಂತ ಹೆಚ್ಚು ತೂಗುತ್ತದೆ. ಈ ಮೀನುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಇವುಗಳನ್ನು ಖರೀದಿ ಮಾಡಲು ವ್ಯಾಪಾರಿಗಳು ಭಾರೀ ಪೈಪೋಟಿ ಮಾಡುತ್ತಾರೆ. ಅಂದ ಹಾಗೆ ಈ ಮೀನು ಹರಾಜು ಪ್ರಕ್ರಿಯೆಲ್ಲಿ 33 ಲಕ್ಷ ರೂ.ಗಳಿಗೆ ಮಾರಾಟಗೊಂಡಿದೆ.

ತಿಲಿಯಾ ಭೋಲಾ ಮೀನು ವಿವಿಧ ಔಷಧೀಯ ಗುಣಗಳಿಗೆ ಬಳಸಲಾಗುತ್ತದೆ. ವಿವಿಧ ಗಂಭೀರ ಖಾಯಿಲೆಗಳಿಗೆ ಔಷಧಿ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಅಷ್ಟು ಮಾತ್ರವಲ್ಲದೇ ಸೌಂದರ್ಯವಧಕಗಳ ತಯಾರಿಕೆಯಲ್ಲೂ ಬಳಕೆ ಮಾಡಲಾಗುತ್ತದೆ.

ಮೀನು ದೊರಕಿ ಲಕ್ಷ ಲಕ್ಷ ರೂಪಾಯಿಗಳ ಮಾಲೀಕನಾದ ನಾನಿ ಗೋಪಾಲ್‌ ʼ ನನ್ನ ಬದುಕಿಗೆ ಹೊಸ ತಿರುವು ದೊರಕಿದೆ. ಸಂತೋಷ ಉಂಟಾಗಿದೆ. ನನ್ನ ಕುಟುಂಬ ಇನ್ನು ಅಪಾಯದಲ್ಲಿ ಇರಲ್ಲ. ಬದುಕಿಗೆ ಹೊಸ ಭರವಸೆ ಸಿಕ್ಕಿದೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ:Cooking Oil: ಗ್ರಾಹಕರಿಗೆ ಸಿಹಿ ಸುದ್ದಿ: ಅಡುಗೆ ಎಣ್ಣೆ ದರ ಇಳಿಕೆ

Comments are closed.