Air India: ಮೇಡೆ ಮೇಡೆ ಸಂದೇಶ ನೀಡಿ ಚೆನ್ನೈ ಗೆ ಹೊರಟಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್

Air India: ಇತ್ತೀಚೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಒಂದಷ್ಟು ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದು, ವಿಮಾನಗಳು ಆಗಾಗ ತುರ್ತು ಲ್ಯಾಂಡಿಂಗ್ ಮಾಡುತ್ತಿವೆ.
ಇದೀಗ ಗೌವ್ಹಾಟಿ-ಚೆನ್ನೈ ಇಂಡಿಗೋ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ವರ್ಶ ಮಾಡಿದ ಘಟನೆ ನಡೆದಿದ್ದು, ಗೌವ್ಹಾಟಿಯಿಂದ ಹೊರಟ ವಿಮಾನ ಕೆಲ ಹೊತ್ತಿನ ಬಳಿಕ ಪೈಲೆಟ್ ಅಪಾಯದ ಸೂಚನೆ ನೀಡಿ, ಮೇಡೇ ಮೇಡೇ ಸಂದೇಶ ರವಾನಿಸಿ ಬೆಂಗಳೂರಿನಲ್ಲಿ ವಿಮಾನ ತುರ್ತು ಭೂಸ್ವರ್ಶ ಮಾಡಿದೆ.
168 ಪ್ರಯಾಣಿಕರನ್ನು ಹೊತ್ತ ಇಂಡಿಗೋ 6E-6764 ವಿಮಾನ ಗೌವ್ಹಾಟಿಯಿಂದ ಟೇಕ್ ಆಫ್ ಆಗಿತ್ತು. ಏರ್‌ಬಸ್ A321 ವಿಮಾನ ಗೌವ್ಹಾಟಿ ವಿಮಾನ ನಿಲ್ದಾಣದಿಂದ ಸಂಜೆ 4.40ಕ್ಕೆ ಟೇಕ್ ಆಫ್ ಆಗಿತ್ತು. ಸಂಜೆ 7.45ಕ್ಕೆ ವಿಮಾನ ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹಾರಾಟದ ನಡುವೆ ವಿಮಾನದಲ್ಲಿ ಇಂಧನ ಖಾಲಿಯಾಗಿದೆ. ಇಂಧನ ಖಾಲಿ ಅಲರಾಂ ಸೂಚನೆ ಬರಲು ಆರಂಭಗೊಂಡಿದೆ. ಚೆನ್ನೈ ತಲುಪುವುದು ಅಸಾಧ್ಯವಾಗಿತ್ತು. ಇತ್ತ ಕಾಕ್‌ಪಿಟ್‌ನಲ್ಲಿನ ರೆಡ್ ಅಲರ್ಟ್ ಸೂಚನೆ ಬಂದಿದೆ. ಇಂಧನ ಖಾಲಿಯಾಗುತ್ತಿರುವ ಕಾರಣ ವಿಮಾನ ತುರ್ತು ಭೂಸ್ವರ್ಶ ಬಿಟ್ಟರೆ ಬೇರೆ ಮಾರ್ಗ ಇರಲಿಲ್ಲ.
ಚೆನ್ನೈಗೆ ತೆರಳಬೇಕಿದ್ದ ವಿಮಾನವನ್ನು ಪೈಲೆಟ್ ತಕ್ಷಣವೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನದತ್ತ ಡೈವರ್ಟ್ ಮಾಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಮಾಡುವಷ್ಟು ಇಂಧನ ಇದೆಯಾ ಅನ್ನೋದು ಅನುಮಾನವಾಗಿತ್ತು. ಹಾರಾಟದ ಮಾರ್ಗ ನಡುವೆ ಹತ್ತಿರವಿದ್ದ ವಿಮಾನ ನಿಲ್ದಾಣ ಬೆಂಗಳೂರು ಆಗಿತ್ತು. ಹೀಗಾಗಿ ಪೈಲೆಟ್ ಮೇಡೇ ಸೂಚನೆ ನೀಡಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ವರ್ಶ ಮಾಡಲು ಮುಂದಾಗಿದ್ದ. ಇತ್ತ ಕಂಟ್ರೋಲ್ ರೂಂನಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ:Uttar Pradesh: 34 ವರ್ಷ ಜೈಲು ವಾಸದ ಬಳಿಕ ನಿರಪರಾಧಿ ಎಂದ ಕೋರ್ಟ್
Comments are closed.