UP: ಮಗನೊಂದಿಗೆ ಮದುವೆ ನಿಶ್ಚಯವಾಗಿದ್ದ 22ರ ಹುಡುಗಿಯನ್ನು ವರಿಸಿದ 55 ವರ್ಷದ ಮುದುಕ !! ಹೆಂಡತಿಯ ಗೋಳಾಟ

Share the Article

UP: ತನ್ನ ಪುತ್ರನೊಂದಿಗೆ ನಿಶ್ಚಿತಾರ್ಥವಾಗಿದ್ದ ಯುವತಿಯನ್ನು 55 ವರ್ಷದ ವ್ಯಕ್ತಿಯೊಬ್ಬ ಮದುವೆಯಾದ ಆಶ್ಚರ್ಯಕರ ಘಟನೆ ನಡೆದಿದೆ.

 

ಹೌದು, ಉತ್ತರ ಪ್ರದೇಶದ ರಾಮ್‌ಪುರ ಜಿಲ್ಲೆಯಲ್ಲಿ ಬನ್‌ಸಂಗ್ನಾಲಿ ಗ್ರಾಮದಲ್ಲಿ ಇಂತಹ ಒಂದು ವಿಚಿತ್ರ ಪ್ರಕಾರ ನಡೆದಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

 

ಅಂದಹಾಗೆ ಆರು ಮಕ್ಕಳ ತಂದೆ ಮತ್ತು ಮೂರು ಮಕ್ಕಳ ಅಜ್ಜನಾಗಿರುವ ಶಕೀಲ್ ಎಂಬವರು ತಮ್ಮ 17 ವರ್ಷದ ಮಗನಿಗೆ ನಿಶ್ಚಿಯವಾಗಿದ್ದ ಯುವತಿಯನ್ನು ವರಿಸಿದ ಮಹಾನುಭಾವ.

 

ಕಳೆದ ತಿಂಗಳು ತಮ್ಮ ಮಗಳ ಮದುವೆಯ ನಂತರ ಸಮೀಪದ ಹಳ್ಳಿಯ 22 ವರ್ಷದ ಆಯೇಷಾ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆಯನ್ನು ಪದೇ ಪದೇ ಭೇಟಿಯಾಗುತ್ತಿದ್ದರು. ಮಗ ಅಮಾನ್ (ಹೆಸರು ಬದಲಾಯಿಸಲಾಗಿದೆ) ಜೊತೆ ಆಯೇಷಾಳ ಮದುವೆ ಏರ್ಪಾಡು ಮಾಡುತ್ತಿರುವುದಾಗಿಯೂ, ಅದಕ್ಕಾಗಿ ಆಕೆಯನ್ನು ಆಗಾಗ್ಗೆ ಭೇಟಿಯಾಗುತ್ತಿರುವುದಾಗಿಯೂ ಹೇಳಿದ್ದರು.

 

ಆರ್ಥಿಕ ಸಮಸ್ಯೆ ಹಾಗೂ ಅಮಾನ್‌ನ ವಯಸ್ಸನ್ನು ಉಲ್ಲೇಖಿಸಿ ಆರಂಭದಲ್ಲಿ ಕುಟುಂಬ ಮದುವೆಯನ್ನು ವಿರೋಧಿಸಿದೆ. ಆದರೆ ಶಕೀಲ್ ಆಯೇಷಾಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು ಎಂದು ಶಬಾನಾ ಆರೋಪಿಸಿದ್ದಾರೆ. ಅಲ್ಲದೆ ಈ ನಡುವೆ ತಂದೆ ಹಾಗೂ ಆಯೇಷಾ ನಡುವೆ ಆಗಾಗ್ಗೆ ಕರೆಗಳು ಬರುತ್ತಿರುವುದನ್ನು ಗಮನಿಸಿ ಅಮನ್‌ಗೆ ಶಂಕೆ ಮೂಡಿಸಿತು.

 

ಕಳೆದ ವಾರ ಕೆಲಸದ ನೆಪದಲ್ಲಿ ದೆಹಲಿಗೆ ತೆರಳಿದ ಶಕೀಲ್, ಅಲ್ಲಿಂದ ಪತ್ನಿ ಮತ್ತು ಕುಟುಂಬದ ಇತರ ಸದಸ್ಯರಿಗೆ ಕರೆ ಮಾಡಿ ತಾನು ಆಯೇಷಾಳನ್ನು ಮದುವೆಯಾಗಿದ್ದೇನೆ. ನನ್ನ ಸೊಸೆಯಾಗಬೇಕಿದ್ದ ಮಹಿಳೆ ಈಗ ನನ್ನ ಗಂಡನ ಹೆಂಡತಿಯಾಗಿದ್ದಾಳೆ, ಭಾವಿ ಸೊಸೆ ಎಂದು ಪರಿಗಣಿಸಲ್ಪಟ್ಟವಳೊಂದಿಗೆ ಈಗ ಮನೆ ಹಂಚಿಕೊಳ್ಳಬೇಕಾಗಿ ಬಂದಿದೆ ಎಂದು ಶಬನಾ ದು:ಖ ವ್ಯಕ್ತಪಡಿಸಿದ್ದಾರೆ.

Comments are closed.