Yadagiri : ಕನಸಿನಲ್ಲಿ ಬಂದ ಆಂಜನೇಯ – ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕ್ರಿಶ್ಚಿಯನ್ ಕುಟುಂಬ!!

Share the Article

Yadagiri : ಕುಟುಂಬದ ಸದಸ್ಯರ ಕನಸಿನಲ್ಲಿ ಆಂಜನೇಯ ಬಂದ ಕಾರಣ ಕ್ರೈಸ್ತ ಧರ್ಮದ ಕುಟುಂಬ ಒಂದು ಹಿಂದೂ ಧರ್ಮಕ್ಕೆ ಮತಾಂತರವಾದ ಅಪರೂಪದ ಘಟನೆ ಒಂದು ಯಾದಗಿರಿಯಲ್ಲಿ ನಡೆದಿದೆ.

 

ಹೌದು, ಯಾದಗಿರಿಯ ಗಿರಿನಗರ ಕಾಲೊನಿಯಲ್ಲಿರುವ ಬುಡ್ಡ ಜಂಗಮ ಸಮಾಜದ ವೆಂಕಟೇಶ್ ಎಂಬುವರು ಕನಸಿನಲ್ಲಿ ಆಂಜನೇಯ ಕಾಣಿಸಿಕೊಂಡ ಎಂದು ತಮ್ಮ ಕುಟುಂಬದ ಸಮೇತ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದು, ಇದೀಗ ಮರಳಿ ಹಿಂದೂ ಧರ್ಮಕ್ಕೆ ಮರಳಿದ್ದಾರೆ.

 

ಅಂದಹಾಗೆ ಕೆಲ ವರ್ಷಗಳ ಹಿಂದೆ ಹಿಂದೂ ಧರ್ಮ ತೊರೆದಿದ್ದ ವೆಂಕಟೇಶ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ವೆಂಕಟೇಶ್ ಕುಟುಂಬಕ್ಕೆ ಮೇಲಿಂದ ಮೇಲೆ ಪೆಟ್ಟು ಬೀಳಲು ಆರಂಭಿಸಿತಂತೆ. ತಾನು ಯಾವುದು ಕೈಹಿಡಿತಿರಲಿಲ್ಲವಂತೆ. ಇದರ ನಡುವೆ ವೆಂಕಟೇಶ್ ಕನಸಿನಲ್ಲಿ ಆಂಜನೇಯ ಸ್ವಾಮಿ ಬರುತ್ತಿದ್ದನಂತೆ. ಹಿಂದೂ ಧರ್ಮಕ್ಕೆ ಮರಳುವಂತೆ ಆದೇಶ ನೀಡುತ್ತಿದ್ದನಂತೆ. ಇದೇ ಕಾರಣಕ್ಕೆ ಇದೀಗ ವೆಂಕಟೇಶ್ ಕ್ರಿಶ್ಚಿಯನ್ ಧರ್ಮ ತೊರೆದು, ಮತ್ತೆ ಹಿಂದೂ ಧರ್ಮಕ್ಕೆ ಮರಳಿದ್ದಾಗಿ ಹೇಳಿದ್ದಾರೆ.

Comments are closed.