Viral Video: ಕಂಠಪೂರ್ತಿ ಕುಡಿದು ಹೈವೇಯಲ್ಲಿ ಒಂಟೆ ಸವಾರಿ ಮಾಡಿದ ವ್ಯಕ್ತಿ, ವಿಡಿಯೋ ವೈರಲ್

Drunk Man wild ride on Camel: ಕಂಠಪೂರ್ತಿ ಕುಡಿದು ವ್ಯಕ್ತಿಯೊಬ್ಬ ಹೈದರಾಬಾದ್ನ ಎಕ್ಸ್ಪ್ರೆಸ್ ವೇಯಲ್ಲಿ ಒಂಟೆ ಸವಾರಿ ಮಾಡಿದ ಘಟನೆ ನಡೆದಿದೆ. ಇದನ್ನು ಗಮನಿಸಿದ ಕೆಲವರು ಆತನನ್ನು ಹಿಂಬಾಲಿಸಿ ತಡೆಯುವ ಪ್ರಯತ್ನ ಮಾಡಿದ್ದಾರೆ. ಹಾಗೂ ಆಗುವ ಅನಾಹುತವನ್ನು ತಪ್ಪಿಸಿದ್ದಾರೆ.
ಕಂಠಪೂರ್ತಿ ಕುಡಿದ ವ್ಯಕ್ತಿ ಒಂಟೆಯ ಮೇಲೆ ಕುಳಿತಿದ್ದು, ಒಂಟೆಯನ್ನು ನಿಯಂತ್ರಣ ಮಾಡುವುದಕ್ಕೆ ಸಾಧ್ಯವಾಗದೇ ಒಂಟೆಯ ಮೇಲೆ ತೂರಡುತ್ತಾ ಬಿದ್ದುಕೊಂಡು ಸಾಗುತ್ತಿರುವುದು ಕಂಡು ಬಂದಿದೆ. ದಾರಿಯಲ್ಲಿ ಹೋಗುತ್ತಿರುವವರು ಈತನನ್ನು ತಡೆಯದೇ ಹೋಗಿದ್ದರೆ ಒಂಟೆ ಮೇಲಿಂದ ಈತ ಕೆಳಗೆ ಬಿದ್ದು, ಇತರ ವಾಹನಗಳ ಅಡಿಗೆ ಬೀಳುವುದು ಖಂಡಿತ ಎಂದು ಹೇಳಲಾಗಿದೆ. ಕುಡುಕ ಒಂಟೆ ಸವಾರ ಹಾಗೂ ಒಂಟೆಯನ್ನು ಅನಾಹುತದಿಂದ ರಕ್ಷಣೆ ಮಾಡಿದ್ದಾರೆ.
View this post on Instagram
Comments are closed.