Mangalore: ಮಂಗಳೂರು: ಜಪ್ಪಿನಮೊಗರು ಕಾರು ಅಪಘಾತ ಪ್ರಕರಣ: ಮದ್ಯಸೇವನೆ, ಅತಿವೇಗದ ಚಾಲನೆ ಕಾರಣ, ಕೇಸು ದಾಖಲು

Mangalore: ಜಪ್ಪಿನಮೊಗರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದಿ.18-06-2025 ರಂದು ಮುಂಜಾನೆ 1.30 ರ ಸಮಯದಲ್ಲಿ ಕೆಎ-19 MN 6698 ನಂಬರಿನ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ಅಪಘಾತದಲ್ಲಿ ಕಾರು ಚಾಲಕ ಅಮನ್ ರಾವ್ (22) ಸಹ ಪ್ರಯಾಣಿಕ ಓಂ ಶ್ರೀ (24) ರವರು ಮೃತಪಟ್ಟು ಸಹ ಪ್ರಯಾಣಿಕ ಅಶಿಶ್ (23), ವಿದೇಶಿ ಪ್ರಜೆ ಜೆರಿ (23) ಇವರು ಗಾಯಗೊಂಡಿರುವ ಘಟನೆ ನಡೆದಿತ್ತು.
ಈ ಕುರಿತು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತಕ್ಕೆ ಕುರಿತಂತೆ ಕಾರಿನ ಚಾಲಕ ಮದ್ಯ ಸೇವನೆ ಮಾಡಿ ಅತಿವೇಗದಲ್ಲಿ ವಾಹನ ಚಾಲನೆ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ತನಿಖೆ ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
Comments are closed.