Prajwal Revanna Case: ಪ್ರಜ್ವಲ್ ರೇವಣ್ಣಾಗೆ ಸದ್ಯಕ್ಕಿಲ್ಲ ಜಾಮೀನು: ಜಾಮಿನು ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

Share the Article

Prajwal Revanna Case: ಅತ್ಯಾಚಾರ ಪ್ರಕರಣದ ಆರೋಪದ ಮೇಲೆ ಜೈಲು ಪಾಲಾಗಿದ್ದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಇಂದು ಕೋರ್ಟ್ ನಡೆಸಿದ್ದು, ಜೂನ್ 20ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

ಇನ್ನು ಪ್ರಜ್ವಲ್ ಪರ ಹಿರಿಯ ವಕೀಲ ಪ್ರಭುಲಿಂಗವಾದಿಸಿ, ಐದು ವರ್ಷಗಳ ಹಿಂದೆ ನಡೆದಿರುವ ಘಟನೆಗೆ ಪ್ರಜ್ವಲ್ ಜೈಲು ಪಾಲಾಗಿದ್ದಾರೆ. 158 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದ್ದು ಸದ್ಯಕ್ಕೆ ಈ ಕೇಸ್ ಮುಗಿಯುವ ಸಾಧ್ಯತೆ ಇಲ್ಲ ಎಂದು ವಾದಿಸಿದ್ದಾರೆ.

ಇನ್ನು ಪ್ರತಿ ವಾದಿಸಲು ಸರ್ಕಾರಿ ವಿಶೇಷ ಅಭಿಯೋಜಕ ಬಿ ಎನ್ ಜಗದೀಶ್ ಅವರು ಕಾಲಾವಕಾಶ ಕೋರಿದ್ದು, ಈ ನಿಟ್ಟಿನಲ್ಲಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.

Comments are closed.