Honey Trap:ಹನಿಟ್ರ್ಯಾಪ್ಗೆ ಬಿದ್ದ ಬಟ್ಟೆ ವ್ಯಾಪಾರಿ: ಪೊಲೀಸ್ ಭಾಗಿ, ಬಂಧನ

Honey trap: ಹನಿಟ್ರ್ಯಾಪ್ ಕೆಲಸದಲ್ಲಿ ತೊಡಗಿಕೊಂಡಿದ್ದ ಪೊಲೀಸ್ ಪೇದೆಯನ್ನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪೊಲೀಸರು ಬಂಧನ ಮಾಡಿರುವ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿ ಸುಂದರ ಯುವತಿಯನ್ನು ಬಳಸಿಕೊಂಡು ಶ್ರೀಮಂತ ವ್ಯಕ್ತಿಗಳನ್ನು ತನ್ನ ಬಲೆಯಲ್ಲಿ ಬೀಳಿಸಿ ಹಣ ವಸೂಲಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಎ1 ಮೂರ್ತಿಮ ಎ2ಪೊಲೀಸ್ ಪೇದೆ ಶಿವಣ್ಣ ಹಾಗೂ ಇತರ ಮೂವರು ಆರೋಪಿಗಳು. ಈ ಘಟನೆ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ಐಆರ್ ದಾಖಲು ಮಾಡಲಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದ ನಿವಾಸಿ ದಿನೇಶ್ ಕುಮಾರ್ ಸಂತ್ರಸ್ತರು.
ದಿನೇಶ್ ಕುಮಾರ್ ಜವಳಿ ವ್ಯಾಪಾರಿ. ಬಟ್ಟೆ ಅಂಗಡಿ ಇಟ್ಟಿದ್ದಾರೆ. ಜೂನ್ 11 ರಂದು ರಾತ್ರಿ 7.30 ರಂದು ದಿನೇಶ್ ಅವರ ಅಂಗಡಿಗೆ 23 ಹರೆಯದ ಯುವತಿ ಬಂದಿದ್ದು ಅಂಗಡಿಯಲ್ಲಿ ಎರಡು ಲೆಗ್ಗಿನ್ಸ್, ಒಂದು ಟಾಪ್ ಖರೀದಿ ಮಾಡಿದ್ದಾಳೆ. ನಂತರ ನನಗೆ ಹೊಸ ಡಿಸೈನ್ ಬಟ್ಟೆಗಳು ಬೇಕು, ನಾನು ನಿಮಗೆ ಫೋನ್ ಮಾಡುತ್ತೇನೆ. ನಿಮ್ಮ ಫೋನ್ ನಂಬರ್ ಕೊಡಿʼ ಎಂದು ದಿನೇಶ್ ಅವರ ನಂಬರ್ ಪಡೆದುಕೊಂಡಿದ್ದಾಳೆ ಎಂದು ಎಫ್ಐಆರ್ನಲ್ಲಿ ದಾಖಲು ಮಾಡಲಾಗಿದೆ.
ನಂತರ ಯುವತಿ ರಾತ್ರಿ 8.45 ರ ಸುಮಾರಿಗೆ Hi ಎಂದು ಮೆಸೇಜ್ ಮಾಡಿದ್ದಾಳೆ. ಇದಕ್ಕೆ ದಿನೇಶ್ ಪ್ರತಿಕ್ರಿಯೆ ಮಾಡಲಿಲ್ಲ. ಮರುದಿನ ಬೆಳಿಗ್ಗೆ ದಿನೇಶ್ ನೀವು ಯಾರು ಎಂದು ಮೆಸೇಜ್ ಮಾಡಿದ್ದು, ಯುವತಿ ದಿನೇಶ್ ಜೊತೆ ಸಲುಗೆಯಿಂದ ಮೆಸೇಜ್ ಮಾಡಲು ಆರಂಭ ಮಾಡಿದ್ದಾಳೆ. ದಿನೇಶ್ ಕುಮಾರ್ ಕೂಡಾ ಮೆಸೇಜ್ ಮಾಡಿದ್ದಾರೆ.
ನಂತರ ಯುವತಿ ಆಕೆಯ ಕೆಲವು ಫೊಟೋಗಳನ್ನು ದಿನೇಶ್ ಕುಮಾರ್ ಮೊಬೈಲ್ಗೆ ಕಳುಹಿಸಿದ್ದಾಳೆ. ನಂತರ ಜೂನ್ 14 ರಂದು ಚಿಕ್ಕಮ್ಮನ ಮನೆಗೆ ಬನ್ನಿ ಎಂದು ಹೇಳಿ ಲೊಕೇಷನ್ ಕಳುಹಿಸಿದ್ದಾಳೆ. ದಿನೇಶ್ ಕುಮಾರ್ ಸಂಜೆ 4.10 ರ ಸುಮಾರಿಗೆ ಹೊರಟಿದ್ದು,4.45 ಕ್ಕೆ ಲೊಕೇಶ್ ತಲುಪಿದ್ದಾರೆ. ಇದೇ ನಮ್ಮ ಚಿಕ್ಕಮ್ಮನ ಮನೆ ಎಂದು ಕರೆದುಕೊಂಡು ಹೋಗಿದ್ದಾಳೆ.
ನಂತರ ಕಾಫಿ ಬೇಕಾ ಕೇಳಿದ್ದಾಳೆ. ಅದಕ್ಕೆ ದಿನೇಶ್ ಬೇಡ ಎಂದು ಹೇಳಿದ್ದು, ನಂತರ ಅವರ ಪಕ್ಕದಲ್ಲಿ ಕುಳಿತು ನೀನು ನನಗೆ ತುಂಬಾ ಇಷ್ಟ ಎಂದು ಹೇಳಿ ಅವರ ಮೈ ಮುಟ್ಟಿ, ತಬ್ಬಿಕೊಂಡು ಲೈಂಗಿಕ ಕ್ರಿಯೆಗೆ ಪ್ರಚೋದನೆ ಮಾಡಿದ್ದಾನೆ. ನಂತರ ಡೋರ್ ಲಾಕ್ ಮಾಡಿ ಬರುತ್ತೇನೆಂದು ಹೋಗಿ ಡೋರ್ ಲಾಕ್ ಮಾಡದೆ ಹಾಗೇ ಬಂದಿದ್ದಾಳೆ.
ರೂಮಿನಲ್ಲಿದ್ದಾಗ ಮೂವರು ಅಪರಿಚಿತರು ಬಾಗಿಲು ತೆರೆದು ಬಂದಿದ್ದು, ದಿನೇಶ್ ಕುಮಾರ್ಗೆ ಬೈಯುತ್ತಾ ಹಲ್ಲೆ ಮಾಡಿ, ಬೆತ್ತಲೆ ಮಾಡಿ, ಯುವತಿ ಜೊತೆ ವಿಡಿಯೋ ಮಾಡಿದ್ದಾರೆ. ನಂತರ ಪೇದೆ ಶಿವಣ್ಣ ಅಲಿಯಾಸ್ ಪಾಪಣ್ಣ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡು ಇಲ್ಲದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಆರೋಪಿಗಳು. ನಂತರ ದಿನೇಶ್ ಕುಮಾರ್ ತಮ್ಮ ಮಹೇಂದ್ರ ಚೌದರಿ ಅವರಿ ಕರೆ ಮಾಡಿ 10 ಲಕ್ಷ ಹಣ ತಂದು ಪೊಲೀಸ್ ಶಿವಣ್ಣ ಕೈಯಲ್ಲಿ ಕೊಡಲು ಹೇಳಿದ್ದಾರೆ.
ದಿನೇಶ್ ಮಾತಿನಿಂದ ಅನುಮಾನಗೊಂಡ ಮಹೇಂದ್ರ ಸ್ನೇಹಿತ ಮಹೇಶ್ ಅವರೊಂದಿಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಹೋಗಿ ವಿಚಾರ ತಿಳಿಸಿದ್ದಾರೆ.
ನಂತರ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಅವರ ನಂಬರ್ ಪಡೆದು ಆರೋಪಿಗಳಲ್ಲಿ ಮಾತನಾಡಿ, ಅವರನ್ನು ಕರೆದುಕೊಂಡು ಬರಲು ಹೇಳಿದ್ದಾರೆ. ಮಧ್ಯರಾತ್ರಿ 1.15 ರ ಸುಮಾರಿಗೆ ದಿನೇಶ್ಕುಮಾರ್ನನ್ನು ಆರೋಪಿಗಳು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಅನಂತರ ದಿನೇಶ್ ಕುಮಾರ್ ನಡೆದ ಘಟನೆ ಕುರಿತು ಹೇಳಿದ್ದಾರೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
Comments are closed.