UT Khadar: ತಾನೇಕೆ ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಲಿಲ್ಲ? ಕಾರಣ ಬಿಚ್ಚಿಟ್ಟ ಯುಟಿ ಖಾದರ್

U T Khadar: ಮಂಗಳೂರಿನಲ್ಲಿ ಭೀಕರವಾಗಿ ಕೊಲೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ರಾಜ್ಯ ವಿಧಾನಸಭಾ ಸ್ಪೀಕರ್ ಹಾಗೂ ಕರಾವಳಿ ಭಾಗದ ಶಾಸಕರಾದ ಯುಟಿ ಖಾದರ್ ಅವರು ಭೇಟಿ ನೀಡಿರಲಿಲ್ಲ. ಇದೀಗ ತಾನೇಕೆ ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿಲ್ಲ ಎಂಬುದರ ಕುರಿತು ಯೂಟಿ ಖಾದರ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಸುಹಾಸ್ ಶೆಟ್ಟಿಯವರ ಮನೆಗೆ ಭೇಟಿ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಖಾದರ್, ‘ಹಿಂದೆ ಬೇರೆ ಕೊಲೆ ಪ್ರಕರಣದಲ್ಲಿ ಭೇಟಿಗೆ ತೆರಳಲು ತಯಾರಿಯಾಗಿದ್ದೆ, ಆದರೆ ಕುಟುಂಬದವರು ಬರಬೇಡಿ ಎಂದಿದ್ದರು. ಸುಹಾಸ್ ಶೆಟ್ಟಿಯವರ ತಂದೆ-ತಾಯಿ ಕರೆದರೆ ಖಂಡಿತವಾಗಿಯೂ ಭೇಟಿಯಾಗುತ್ತೇನೆ,’ ಎಂದರು.
Comments are closed.