Marriage Murder: ಮದುವೆಯಾದ 15 ದಿನಕ್ಕೇ ಗಂಡನನ್ನು ಕೊಂದ ಪತ್ನಿ

Share the Article

ಗಂಡನನ್ನು ಕೊಲೆ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದೆ. ಮದುವೆಯಾಗಿ ಕೇವಲ 15 ದಿನಕ್ಕೆ ಗಂಡ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಲು ಬಲವಂತ ಮಾಡಿದ್ದಕ್ಕೆ ಕೋಪಗೊಂಡು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ. ಮದುವೆ ಮಾಡಿಕೊಂಡು ಗಂಡನ ಜೊತೆ ಸಂಸಾರ ಆರಂಭಿಸಿದ ಕೇವಲ 15 ದಿನಕ್ಕೆ ಗಂಡನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ಬುಧವಾರ ರಾತ್ರಿ 12.30ಕ್ಕೆ ನಡೆದಿದೆ. ಮಲಗಿದ್ದ ಗಂಡನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ. 27 ವರ್ಷದ ಮಹಿಳೆ 53 ವರ್ಷದ ಅನಿಲ್‌ ಲೋಖಂಡೆ ಎಂಬಾತನನ್ನು ಎರಡನೇ ಮದುವೆಯಾಗಿದ್ದಳು. ಲೋಖಂಡೆ ಅವರ ಮೊದಲ ಹೆಂಡತಿ ಕ್ಯಾನ್ಸರ್‌ನಿಂದ ನಿಧನ ಹೊಂದಿದ್ದು, ಎರಡನೇ ಮದುವೆಯಾಗಿ ಕೇವಲ 15 ದಿನಗಳಲ್ಲಿ ರಾಧಿಕಾ ಗಂಡನ ಕೊಲೆ ಮಾಡಿದ್ದಾಳೆ.

ರಾಧಿಕಾಳಿಗೆ ತನ್ನ ಗಂಡನ ಜೊತೆ ದೈಹಿಕ ಸಂಬಂಧ ಹೊಂದಲು, ವೈವಾಹಿಕ ಜವಾಬ್ದಾರಿಗಳನ್ನು ನಿಭಾಯಿಸಲು ಇಷ್ಟವಿರಲಿಲ್ಲ. ಹೀಗಾಗಿ ಜಗಳವಾಗುತ್ತಿತ್ತು. ಕೊಲೆ ನಡೆದ ರಾತ್ರಿ ಕೂಡಾ ಈ ಕಾರಣಕ್ಕೆ ಜಗಳವಾಗಿತ್ತು. ದೈಹಿಕ ಸಂಪರ್ಕ ಹೊಂದಲು ಬಲವಂತ ಮಾಡಿದ್ದಕ್ಕೆ ಕೋಪದಿಂದ ಕೊಲೆ ಮಾಡಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗಂಡನ ಕೊಲೆ ಮಾಡಿದ ನಂತರ ಆಕೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

Comments are closed.