DK Shivkumar : RCB ಖರೀದಿ ವಿಚಾರ – ಸ್ಪೋಟಕ ಅಪ್ ಡೇಟ್ ಕೊಟ್ಟ ಡಿಕೆ ಶಿವಕುಮಾರ್!!

D K Shivkumar: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಪಾಲನ್ನು ಮಾರಾಟ ಮಾಡಲು ಚಿಂತಿಸುತ್ತಿದೆ ಎಂಬ ವಿಚಾರ ಸದ್ಯ ಕ್ರಿಕೆಟ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೆ ಡಿಕೆ ಶಿವಕುಮಾರ್ ಅವರು ಆರ್‌ಸಿಬಿ ತಂಡವನ್ನು ಖರೀದಿ ಮಾಡುತ್ತಾರೆ ಎಂಬ ವದಂತಿ ಕೂಡ ಹಬ್ಬುತ್ತಿದೆ. ಇದೀಗ ಆರ್‌ಸಿಬಿ ಖರೀದಿ ಕುರಿತು ಡಿಕೆ ಶಿವಕುಮಾರ್ ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಹೌದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರ್ ಸಿಬಿ ಕೊಂಡುಕೊಳ್ಳಲಿದ್ದಾರೆ ಎಂಬ ಬಿಸಿ ಚರ್ಚೆ ರಾಜಕೀಯ ಪಡಸಾಲೆಗಳಲ್ಲಿ ಹರಿದಾಡಿತ್ತು. ಇದಕ್ಕೆ ಸ್ವತಃ ಡಿಕೆ ಉತ್ತರ ಕೊಟ್ಟಿದ್ದಾರೆ. ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್,”ನಾನು ಹುಚ್ಚನಲ್ಲ. ನಾನು ಚಿಕ್ಕಂದಿನಿಂದಲೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯ, ಅಷ್ಟೇ. ನನಗೆ ಸಮಯವಿಲ್ಲ, ಆದರೂ ನಿರ್ವಹಣೆಯ ಭಾಗವಾಗಲು ನನಗೆ ಆಫರ್‌ಗಳು ಬಂದವು… ನನಗೆ ಆರ್‌ಸಿಬಿ ಏಕೆ ಬೇಕು? ನಾನು ರಾಯಲ್ ಚಾಲೆಂಜ್ ಕುಡಿಯುವುದೇ ಇಲ್ಲ” ಎಂದು ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸುವ ವದಂತಿಗಳನ್ನು ನಿರಾಕರಿಸಿದ್ದಾರೆ.
#WATCH | Delhi | “I am not a mad man. I’m just a member of the Karnataka Cricket Association from my younger days, that’s all. I don’t have time, though I had offers to be part of the management… Why do I need RCB? I don’t even drink Royal Challenge,” says Karnataka Deputy CM… pic.twitter.com/iZ1K1by206
— ANI (@ANI) June 11, 2025
Comments are closed.