Bengaluru: ಸಾವಿನ ವಿಷಯದಲ್ಲಿ ರಾಜಕೀಯ ಬೇಡ: ದುರಂತದ ಹೊಣೆ ರಾಜ್ಯ ಸರ್ಕಾರ ಹೊರುತ್ತದೆ ಎಂದ ಡಿಕೆಶಿ

Share the Article

Bengaluru: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವ ಸಂದರ್ಭದಲ್ಲಿ 11 ಮಂದಿ ಕಾಲ್ತುಳಿತಕ್ಕೆ ಸಿಲುಕಿ ಮೃತರಾಗಿದ್ದು, ಇದೀಗ ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಪ್ರತಿ ಪಕ್ಷಗಳು ರಾಜಕೀಯ ವಾಗ್ದಾಳಿ ನಡೆಸುತ್ತಿದ್ದು, ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಕಾಲ್ತುಳಿತ ದುರಂತದ ಹೊಣೆ ಹೊರಲು ಸರ್ಕಾರ ಸಿದ್ಧವಾಗಿದೆ, ಇಲ್ಲಿ ರಾಜಕೀಯ ಬೇಡ ಎಂದಿದ್ದು, ಈ ಸಮಯದಲ್ಲಿ ರಾಜಕೀಯಕ್ಕಿಂತಲೂ ಆ ಕುಟುಂಬದವರ ಜೊತೆಗೆ ನಾವು ನಿಲ್ಲುವುದು ಅವಶ್ಯವಾದುದು ಎಂದು ತಿಳಿಸಿದ್ದಾರೆ.

ಹೀಗಾಗುತ್ತದೆ ಎಂದು ಯೋಚಿಸಿರಲಿಲ್ಲ, ಜನ ಹೆಚ್ಚಾಗುತ್ತಿದ್ದಂತೆ ಮೆಟ್ರೋ ಸಂಚಾರ ಕೂಡ ನಿಲ್ಲಿಸಿದ್ದೆವು ಆದರೂ ಈ ರೀತಿ ಆಗಿರುವುದು ಎಲ್ಲರಿಗೂ ದುಃಖ ತಂದಿದ್ದು, ರಾಜ್ಯ ಸರ್ಕಾರ ಈ ದುರಂತದ ಹೊಣೆ ಹೊರುತ್ತದೆ ಎಂದಿದ್ದಾರೆ.

Comments are closed.