ಐಪಿಎಸ್ ಅಧಿಕಾರಿ ಡಿ.ರೂಪಾ ಮೌಡ್ಗಿಲ್’ರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿಯಾಗಿ (ADGP) ಬಡ್ತಿ

ಬೆಂಗಳೂರು: ಹಿರಿಯ ಶ್ರೇಣಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಮೌಡ್ಗಿಲ್’ರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿಯಾಗಿ (ADGP) ರಾಜ್ಯ ಸರಕಾರ ಬಡ್ತಿ ನೀಡಿದೆ

ಇತ್ತೀಚೆಗೆ ಕರ್ನಾಟಕ ರೇಷ್ಮೆ ಮಾರುಕಟ್ಟೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ರೂಪಾ ಮುಂಬಡ್ತಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಸರಕಾರವು ತನಗೆ ಸಿಗಬೇಕಾಗಿರುವ ಬಡ್ತಿಯನ್ನು ನ್ಯಾಯಯುತವಾಗಿ ನೀಡುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಆಕೆ ನ್ಯಾಯಾಲಯವನ್ನು ಕೋರಿದ್ದರು.
ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿ ಹೈಕೋರ್ಟ್, ಮುಂದಿನ 2 ತಿಂಗಳಲ್ಲಿ ಕಾನೂನಿನ ಅನ್ವಯ ಇದನ್ನು ಪರಿಗಣಿಸಬೇಕು ಎಂದು ಸರಕಾರಕ್ಕೆ ಎ.25ರಂದು ನಿರ್ದೇಶಿಸಿತ್ತು. ಮುಂದಿನ ಆದೇಶದವರೆಗೂ ಸದ್ಯ ಇರುವ ಹುದ್ದೆಯಲ್ಲೇ ಮುಂದುವರಿಯಲು ಸರಕಾರ ಸೂಚಿಸಿದೆ. ಇನ್ನು 2,000ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಡಿ.ರೂಪಾ ಸದ್ಯ ಕರ್ನಾಟಕ ರೇಷ್ಮೆ ಮಾರುಕಟ್ಟೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
Comments are closed.